Search

WPL 2024: ಮುಂಬೈ ವಿರುದ್ಧದ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ ಆರ್ ಸಿಬಿ

ನವದೆಹಲಿ : ಆರ್ ಸಿಬಿ ಮತ್ತು ಮುಂಬಾ ಇಂಡಿಯನ್ಸ್ ನಡುವೆ ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಗಳಿಸಿ ಫೈನಲ್ ಪ್ರವೇಶಿಸಿದೆ.
ಮಹಿಳಾ ಪ್ರೀಮಿಯರ್ ಲೀಗ್ ನ ಪ್ಲೇ ಆಫ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬಾ ಇಂಡಿಯನ್ಸ್ ತಂಡವನ್ನು ಐದು ರನ್ ಗಳಿಂದ ಮಣಿಸಿ ಆರ್ ಸಿಬಿ ರೋಚಕ ಗೆಲುವಿನೊಂದಿಗೆ ಫೈನಲ್ ಪ್ರವೇಶ ಮಾಡಿತು.

https://twitter.com/wplt20/status/1768689850251628993?s=20

ಎಲಿಸ್ ಪೆರಿ ಅವರ ಆಲ್ ರೌಂಡರ್ ಆಟ, ಎದುರಾಳಿಗೆ ಸೋಲಿನ ಕಹಿಯನ್ನುಣಿಸಿತು ಅಲ್ಲದೆ, ಆರ್ ಸಿಬಿ ತಂಡದ ಅಭಿಮಾನಿಗಳು ಗೆಲುವಿನ ಕೇಕೆ ಹಾಕುವಂತೆ ಮಾಡಿದರು. ಬ್ಯಾಂಟಿಂಗ್ ನಲ್ಲಿ ಅವರು 66 ರನ್ ಬಾರಿಸಿದರಲ್ಲದೆ. ಬೌಲಿಂಗ್ ನಲ್ಲಿ 29 ರನ್ ನೀಡಿ ಒಂದು ವಿಕೆಟ್ ಕಬಳಿಸಿದರು.

ನವದೆಹಲಿಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ತಂಡ ಎದುರಾಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ 135 ರನ್ ಗಳ ಗುರಿಯನ್ನು ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ ಮುಂಬೈ ಒಂದು ಹಂತದಲ್ಲಿ ಚೆನ್ನಾಗಿ ಆಡಿತ್ತು.

ಕೊನೆಯ ಮೂರು ಓವರ್ ಗಳಲ್ಲಿ ಬೇಕಾಗಿದ್ದ 21 ರನ್ ಬಾರಿಸಲಾಗದೇ ಮುಂಬೈ ತಂಡ ಸೋಲನ್ನು ಅನುಭವಿಸಿತು. ಕೊನೆಯ ಓವರ್ ನಲ್ಲಿ 12 ರನ್ ಬೇಕಾಗಿತ್ತು. ಆದರೆ, ಬೌಲರ್ ಆಶಾ ಶೋಭನಾ ಕೇವಲ ಆರು ರನ್ ನೀಡಿ ವಿಕೆಟ್ ಪಡದು, ಗೆಲುವು ತಮ್ಮದಾಗಿಸಿದರು.
ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್ ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

More News

You cannot copy content of this page