Raktaksha Movie: ರಕ್ತಾಕ್ಷ’ ಚಿತ್ರದ ಪ್ರಮೋಷನ್ ಕೆಲಸಗಳು ಶುರು

ಬೆಂಗಳೂರು: ‘ಪವರ್ ಸ್ಟಾರ್’ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಶುಭಘಳಿಗೆಯಲ್ಲೇ ‘ರಕ್ತಾಕ್ಷ’ ಚಿತ್ರದ ಪ್ರಮೋಷನ್ ಕೆಲಸಗಳು ಶುರುವಾಗಿವೆ. ಪುನೀತ್ ಕೇವಲ ಒಬ್ಬ ಸ್ಟಾರ್ ನಟ ಅಲ್ಲ ಬದಲಾಗಿ, ಒಂದು ಮರೆಯಲಾಗದ ಆದರ್ಶಪ್ರಾಯ ವ್ಯಕ್ತಿತ್ವ ಎನ್ನುವ ನಾಯಕ ರೋಹಿತ್, ಅಪ್ಪುಗೆ ಟ್ರಿಬ್ಯೂಟ್ ಸಲ್ಲಿಸಿದ್ದಾರೆ. ಒಂದು ಸ್ಟಾರ್ ಭೂಮಿಗೆ ಬಿದ್ದು, ಅದು ಪುನೀತ್ ಚಿತ್ರಣವಾಗಿ ಬದಲಾಗುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ‘ರಕ್ತಾಕ್ಷ’ ಚಿತ್ರದ ಬಿಡುಗಡೆಗೆ ಉತ್ತರ ಕರ್ನಾಟಕದಾದ್ಯಂತ ರೌಂಡ್ಸ್ ಹೊಡೆದು, ನೇರವಾಗಿ ಅಲ್ಲಿನ ಜನರನ್ನ ಭೇಟಿಯಾಗಿ ಪ್ರಚಾರ ಶುರುಮಾಡಿರೋ ರೋಹಿತ್ ಗೆ, ಅಪ್ಪು ಜೀವನವೇ ಮಾದರಿಯಂತೆ. ‘ರಕ್ತಾಕ್ಷ’ ಚಿತ್ರದಲ್ಲೂ ಪವರ್ ಫ್ಯಾನ್ಸ್ ಗೊಂದು ಗಿಫ್ಟ್ ಕಾದಿದೆ ಅಂತಿರೋ ‘ರಕ್ತಾಕ್ಷ’ ಟೀಮ್, ಸದ್ಯದಲ್ಲೇ ಒಂದು ಬಿಗ್ ಅನೌನ್ಸ್ ಮೆಂಟ್ ದಾರಿಯಲ್ಲಿದೆ..!

More News