ನವದೆಹಲಿ : ಇಂದು ಸಂಜೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ನವದೆಹಲಿಯಲ್ಲಿ ಸಭೆ ಸೇರಲಿದ್ದು, ಕರ್ನಾಟಕ ರಾಜ್ಯ ಸೇರಿದಂತೆ ದೇಶದಲ್ಲಿ ಬಾಕಿ ಉಳಿದಿರುವ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನವದೆಹಲಿಗೆ ಪ್ರಯಾಣ ಬೆಳೆಸಿದ್ದು,. ಸಭೆಯಲ್ಲಿ ರಾಷ್ಟ್ರ ನಾಯಕರು ಪಾಲ್ಗೊಂಡು ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ.
ಸಭೆಯಲ್ಲಿ ಕರ್ನಾಟಕ ಲೋಕಸಭೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಚರ್ಚೆ ನಡೆಯಲಿದೆ. ಮೊದಲ ಹಂತದಲ್ಲಿ ರಾಜ್ಯದ ಏಳು ಕ್ಷೇತ್ರ ಅಭ್ಯರ್ಥಿಗಳನ್ನು ಮಾತ್ರ ಕಾಂಗ್ರೆಸ್ ಘೋಷಣೆ ಮಾಡಿತ್ತು. ಇಂದಿನ ಸಭೆಯಲ್ಲಿ ಉಳಿದ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆಗಳಿವೆ. ಇಂದು ರಾತ್ರಿ ಅಥವಾ ನಾಳೆ ಬಹುತೇಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆಗಳಿವೆ.
ಹಾಗಾದ್ರೆ ಉಳಿದ 21 ಕ್ಷೇತ್ರಗಳ ಅಭ್ಯರ್ಥಿಗಳು ಯಾರು…? ಮೂಲಗಳ ಪ್ರಕಾರ ಇವರ ಹೆಸರುಗಳು ಅಂತಿಮಗೊಂಡಿವೆ ಎಂದು ತಿಳಿದುಬಂದಿದೆ.
ಚಿಕ್ಕೋಡಿ – (ಸಾಮಾನ್ಯ ಕ್ಷೇತ್ರ)- ಪ್ರಿಯಾಂಕಾ ಜಾರಕಿಹೊಳಿ
ಪುತ್ರಿಯ ಸ್ಪರ್ಧೆಗೆ ಸಚಿವ ಸತೀಶ್ ಜಾರಕಿಹೊಳಿ ಕುಟುಂಬದಲ್ಲಿ ಒಮ್ಮತ ಮೂಡಿಲ್ಲ, ಆದರೂ ಕೂಡ ಹೈಕಮಾಂಡ್ ಒತ್ತಾಸೆ ಮೇರೆಗೆ ಇವರ ಹೆಸರು ಅಂತಿಮಗೊಳ್ಳುವ ಸಾಧ್ಯತೆಗಳಿವೆ. ಇತ್ತ ಕಾಂಗ್ರೆಸ್ ಹೈಕಮಾಂಡ್ ನಿಂದ ನೀವು ಸ್ಪರ್ಧೆ ಮಾಡಿ, ಇಲ್ಲ ಪುತ್ರಿಯನ್ನ ಕಣಕ್ಕಿಳಿಸಿ ಎಂಬ ಒತ್ತಡ ಇದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ಚಿಕ್ಕೋಡಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ತಿಳಿದುಬಂದಿದೆ.

ಬೆಳಗಾವಿ (ಸಾಮಾನ್ಯ) – ಮೃಣಾಲ್ ಹೆಬ್ಬಾಳ್ಕರ್,
ಬಾಗಲಕೋಟೆ (ಸಾಮಾನ್ಯ)- ವೀಣಾ ಕಾಶಪ್ಪನವರ್, ಸಂಯುಕ್ತ ಪಾಟೀಲ್, ಅಜಯ್ ಕುಮಾರ್ ಸರ್ ನಾಯಕ್ ನಡುವೆ ಪೈಫೋಟಿ ಏರ್ಪಟ್ಟಿದೆ.
ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು) – ಡಾ. ರಾಧಾಕೃಷ್ಣ
ರಾಯಚೂರು (ಪರಿಶಿಷ್ಟ ಪಂಗಡ ಮೀಸಲು) ರವಿಕುಮಾರ್ / ಕುಮಾರನಾಯಕ್
ಬೀದರ್ (ಸಾಮಾನ್ಯ) – ಮಾಜಿ ಶಾಸಕ ರಾಜಶೇಖರ್ ಪಾಟೀಲ್/ ಸಾಗರ ಖಂಡ್ರೆ
ನನಗೆ ಟಿಕೆಟ್ ಬೇಕೇ ಬೇಕು ಎಂದು ಪಟ್ಟು ಹಿಡಿದಿರುವ ರಾಜಶೇಖರ್ ಪಾಟೀಲ್, ರಾಜಶೇಖರ್ ಪಾಟೀಲ್ ಹೈಕಮಾಂಡ್ ಹಾಗೂ ಸಿಎಂ, ಡಿಸಿಎಂ ಒಲವು. ಆದರೆ ಪುತ್ರನಿಗೆ ಟಿಕೆಟ್ ಪಡೆಯಲು ಸಚಿವ ಈಶ್ವರ್ ಖಂಡ್ರೆ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಕೊನೆ ಹಂತದ ಪ್ರಯತ್ನವೆಂದು ಹೈಕಮಾಂಡ್ ನಾಯಕರ ಭೇಟಿಗೆ ಸಚಿವ ಈಶ್ವರ್ ಖಂಡ್ರೆ ತೆರಳಿದ್ದಾರೆ. ಇಬ್ಬರ ತಿಕ್ಕಾಟದ ನಡುವೆ ಮುಸ್ಲಿಂ ಕೋಟಾ ಫುಲ್ ಫೀಲ್ ಮಾಡುವ ಪ್ರಸ್ತಾಪಕ್ಕೆ ಹೈಕಮಾಂಡ್ ಗಂಟು ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ. ಬೀದರ್ ನಲ್ಲಿ ಮುಸ್ಲಿಂ ಅಭ್ಯರ್ಥಿಯಾದರು ಆಚ್ಚರಿಯಿಲ್ಲ
ಕೊಪ್ಪಳ (ಸಾಮಾನ್ಯ)- ರಾಜಶೇಖರ್ ಹಿಟ್ನಾಳ್, ಅಮರೇಗೌಡ ಬಯ್ಯಾಪುರ
ಬಳ್ಳಾರಿ (ಪರಿಶಿಷ್ಟ ಪಂಗಡ ಮೀಸಲು)- ವೆಂಕಟೇಶ್ ಪ್ರಸಾದ್,/ ವಿ.ಎಸ್ ಉಗ್ರಪ್ಪ ಹೆಸರುಗಳು ಶಿಫಾರಸ್ಸು
ಧಾರವಾಡ (ಸಾಮಾನ್ಯ) – ಶಿವಲೀಲಾ ಕುಲಕರ್ಣಿ, ವಿನೋದ್ ಅಸೂಟಿ, ಮೋಹನ ಲಿಂಬಿಕಾಯಿ..
ವಿನೋದ್ ಅಸೂಟಿ ಪರವಾಗಿ ಸಿಎಂ ಸಿದ್ದರಾಮಯ್ಯ ಒಲವುವಿದ್ದು, ಲಿಂಗಾಯತರನ್ನ ಕಣಕ್ಕಿಳಿಸಬೇಕು ಎಂದು ಸ್ಥಳೀಯರಿಂದ ಕೂಗು ಎದ್ದಿದೆ. ಶಿವಲೀಲಾ ಕುಲಕರ್ಣಿ ಸ್ಪರ್ಧೆ ಪಂಚಮಸಾಲಿ ಸ್ವಾಮೀಜಿ ಜಯಮೃತ್ಯುಂಜಯ ಶ್ರೀಗಳಿಂದ ಮನವೊಲಿಕೆ ನಡೆಸಲಾಗುತ್ತಿದೆ. ಆದರೆ ಈವರೆಗೂ ಯಾವುದೆ ಸ್ಪಷ್ಟತೆ ನೀಡದ ವಿನಯ್ ಕುಲಕರ್ಣಿ, ಶಿವಲೀಲಾ ಕುಲಕರ್ಣಿ ಸ್ಪರ್ಧೆಗೆ ಹಿಂದೇಟು ಹಾಕಿದ್ರೆ ಮೋಹನ ಲಿಂಬಿಕಾಯಿಗೆ ಅವಕಾಶ ನೀಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ದಾವಣಗೆರೆ (ಸಾಮಾನ್ಯ)- ಜಿಬಿ ವಿನಯ್ ಕುಮಾರ್, ಕೆಪಿಸಿಸಿ ಸದಸ್ಯ, ಪ್ರಭಾ ಮಲ್ಲಿಕಾರ್ಜುನ್, ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪತ್ನಿ
ಉಡುಪಿ-ಚಿಕ್ಕಮಗಳೂರು (ಸಾಮಾನ್ಯ)- ಜಯಪ್ರಕಾಶ್ ಹೆಗ್ಡೆ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ
ದಕ್ಷಿಣ ಕನ್ನಡ (ಸಾಮಾನ್ಯ)- ವಿನಯದ ಕುಮಾರ್ ಸೊರಕೆ, ರಮಾನಾಥ್ ರೈ, ಪದ್ಮರಾಜ್
ಚಿತ್ರದುರ್ಗ (ಪರಿಶಿಷ್ಟ ಜಾತಿ ಮೀಸಲು)- ಬಿಎನ್. ಚಂದ್ರಪ್ಪ, ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ, ವಿನಯ್ ತಿಮ್ಮಾಪುರ -ಸಚಿವ ಆರ್.ಬಿ ತಿಮ್ಮಾಪುರ ಪುತ್ರ, ತಿಪ್ಪೇಸ್ವಾಮಿ
ಪುತ್ರನಿಗೆ ಟಿಕೆಟ್ ಪಡೆಯಲು ಸಚಿವ ಆರ್. ಬಿ ತಿಮ್ಮಾಪುರ ಲಾಬಿ ನಡೆಸುತ್ತಿದ್ದು, ಹೈಕಮಾಂಡ್ ಅನ್ನು ಭೇಟಿಯಾಗಲು ದೆಹಲಿಗೆ ತೆರಳಿರುವ ಸಚಿವ ತಿಮ್ಮಾಪುರ.
ಮೈಸೂರು-ಕೊಡಗು (ಸಾಮಾನ್ಯ)- ಎಂ. ಲಕ್ಷ್ಮಣ್, ಡಿವಿ ಸದಾನಂದಗೌಡ ( ಕಾಂಗ್ರೆಸ್ ಸೇರ್ಪಡೆಯಾಗಲು ಒಪ್ಪಿದರೆ)
ಚಾಮರಾಜನಗರ (ಪರಿಶಿಷ್ಟ ಜಾತಿ ಮೀಸಲು)- ಎಚ್.ಸಿ ಮಹದೇವಪ್ಪ, ಹಾಲಿ ಸಚಿವ ಅವರ ಪುತ್ರ ಸುನಿಲ್ ಬೋಸ್, ನಂಜುಂಡಸ್ವಾಮಿ, ಮಾಜಿ ಶಾಸಕ, ದರ್ಶನ ಧ್ರುವನಾರಾಯಣ್
ಬೆಂಗಳೂರು ಉತ್ತರ (ಸಾಮಾನ್ಯ)- ರಾಜೀವ್ ಗೌಡ, ಎಸ್.ಟಿ ಸೋಮಶೇಖರ್( ಕಾಂಗ್ರೆಸ್ ಸೇರ್ಪಡೆ ಆಗಲು ಒಪ್ಪಿದರೆ) ಅಥಪಾ ಅವರ ಪುತ್ರ, ಡಿವಿ ಸದಾನಂದಗೌಡ( ಕಾಂಗ್ರೆಸ್ ಸೇರ್ಪಡೆಗೆ ಒಪ್ಪಿದರೆ)
ಬೆಂಗಳೂರು ಕೇಂದ್ರ (ಸಾಮಾನ್ಯ)- ಶಾಸಕ ಎನ್.ಎ ಹ್ಯಾರಿಸ್( ಬಹುತೇಕ ಟಿಕೆಟ್ ಸಾಧ್ಯತೆ), ಮನ್ಸೂರ್ ಅಲಿ ಖಾನ್, ಎಸ್.ಎ ಹುಸೇನ್, ಕೆಪಿಸಿಸಿ ಕಾರ್ಯದರ್ಶಿ
ಬೆಂಗಳೂರು ದಕ್ಷಿಣ (ಸಾಮಾನ್ಯ)- ಸೌಮ್ಯ ರೆಡ್ಡಿ, ಮಾಜಿ ಶಾಸಕಿ
ಚಿಕ್ಕಬಳ್ಳಾಪುರ (ಸಾಮಾನ್ಯ)- ವೀರಪ್ಪ ಮೊಯ್ಲಿ, ಮಾಜಿ ಸಿಎಂ, ರಕ್ಷಾ ರಾಮಯ್ಯ,ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಎಂ.ಆರ್ ಸೀತಾರಾಂ ಪುತ್ರ( ಬಹುತೇಕ ಟಿಕೆಟ್ ಸಾಧ್ಯತೆ), ಶಿವಶಂಕರ ರೆಡ್ಡಿ, ಮಾಜಿ ಸಚಿವ
ಕೋಲಾರ (ಪರಿಶಿಷ್ಟ ಜಾತಿ ಮೀಸಲು)- ಕೆ.ಎಚ್ ಮುನಿಯಪ್ಪ, ಹಾಲಿ ಸಚಿವ, ಚಿಕ್ಕಪೆದ್ದಣ್ಣ, ಮುನಿಯಪ್ಪ-ದಲಿತ ಮುಖಂಡ, ಮಾಜಿ ಶಾಸಕ ನಾಗೇಶ್, ಎಲ್.ಹನುಮಂತಯ್ಯ, ಮುದ್ದಗಂಗಾಧರ್
ಉತ್ತರ ಕನ್ನಡ ( ಸಾಮಾನ್ಯ)- ಅಂಜಲಿ ನಿಂಬಾಳ್ಕರ್, ರವೀಂದ್ರ ನಾಯ್ಕ್
ಇವರುಗಳ ಹೆಸರುಗಳು ಪಟ್ಟಿಯಲ್ಲಿದ್ದು, ಟಿಕೇಟ್ ಯಾರಿಗೆ ಲಭಿಸಲಿದೆ ಎನ್ನುವುದು ಇಂದು ಸಂಜೆ ಅಥವಾ ನಾಳೆ ಘೋಷಣೆಯಾಗಲಿದೆ.




