ಶುಕ್ರವಾರ ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಕಳೆದ ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ತೀವ್ರ ಹಣಾಹಣಿ ನಡೆಯಿತು. ಪ್ರಸಕ್ತ ಸಾಲಿನ ಐಪಿಎಲ್ 2024 ನ ಮೊದಲ ಪಂದ್ಯ ಇದಾಗಿದ್ದು, ಇದರಲ್ಲಿ ನಿರೀಕ್ಷೆಯಂತೆ ಕಳೆದ ವರ್ಷದ ಚಾಂಪಿಯನ್ನರು ಆರು ವಿಕೆಟ್ ಗಳಿಂದ ಜಯ ಸಾಧಿಸಿತು
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಫಾಫ್ ಡುಪ್ಲೇಸಿಸ್ ಪಡೆ, ರುತುರಾಜ್ ಗಾಯಕ್ವಾಡ್ ಪಡೆಯ ಎದರು ಸೋಲನ್ನು ಅನುಭವಿಸಿತು. ಆರ್ ಸಿಬಿ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಠಕ್ಕೆ 173 ರನ್ ಗಳಿಸಲು ಶಕ್ತವಾಯಿತು. ಇದನ್ನು ಬೆನ್ನಟ್ಟಿದ ಸಿಎಸ್ ಕೆ 18.4 ಓವರ್ ಗಳಲ್ಲಿ ಕೇವಲ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ಇದರಿಂದ ಮೊದಲ ಜಯವನ್ನು ಕಂಡಿತು.
ಆದರೆ, ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಂಟಿಂಗ್ ಮಾಡುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ರಿಯಾಕ್ಷನ್ ಮಾತ್ರ ಅನೇಕ ಅಭಿಮಾನಿಗಳ ಬೇಸರಕ್ಕೆ ಕಾರಣವಾಯಿತು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಯುವ ಬ್ಯಾಟರ್ ರಚಿನ್ ರವೀಂದ್ರ ಕೇವಲ 15 ಎಸೆತದಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಬಾರಿಸಿ ರಪಣ್ ಶರ್ಮಾ ಬೌಲಿಂಗ್ ನಲ್ಲಿ ಔಟಾದರು. ಈ ಪಿಕೆಟ್ ಪತನಗೊಳ್ಳುತ್ತಿದ್ದಂತೆ ಆರ್ ಸಿಬಿ ನಿಟ್ಟಿಸಿರು ಬಿಟ್ಟಿತು. ಆಟಗಾರರು ಹರ್ಷ ವ್ಯಕ್ತಪಡಿಸಿದರು.
ಆದರೆ, ವಿರಾಟ್ ಮಾತ್ರ ರಚಿನ್ ಗೆ ಎಕ್ಸ್ ರೇಟೆಡ್ ಸೆಂಡ್ ಆಫ್ ನಲ್ಲಿ ತಮ್ಮ ಬೆರಳಿನಿಂದ ಸನ್ನೆ ಮಾಡಿದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊಹ್ಲಿ ನಡೆಗೆ ಅನೇಕರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಇದು ಸರಿಯಾಗಿರಲಿಲ್ಲ ಎಂದಿದ್ದಾರೆ.
ಸಿಎಸ್ ಕೆ ಬೌಲರ್, ಬಾಂಗ್ಲಾ ದೇಶದ ವೇಗಿ ಮುಸ್ತಾಪಿಜುರ್ ರೆಹಮಾನ್ 29 ರನ್ ಗಳಿಗೆ ನಾಲ್ಕು ವಿಕೆಟ್ ಪಡೆದು ಆರ್ ಸಿಬಿ ಬೆನ್ನಲುಬುಗಳನ್ನು ಪುಡಿ ಪುಡಿ ಮಾಡಿದರು. ಇದರಿಂದ ಆರ್ ಸಿಬಿ ಗೆ ನಿರೀಕ್ಷಿತ ಗರಿಷ್ಠ ಮೊತ್ತ ಹೊಂದಲು ಸಾಧ್ಯವಾಗಿಲ್ಲ.