Search

VIRAT KOHLI RECORD: IPL-2024: ಟಿ-20 ಕ್ರಿಕೆಟ್ ನಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿರಾಟ್ ಕೊಹ್ಲಿ

ಈ ಬಾರಿಯ ಟಿ-20 ಕ್ರಿಕೆಟ್ ಆರಂಭವಾಗಿ ನಾಲ್ಕು ದಿನಗಳು ಕಳೆದಿವೆ. ಈ ವರೆಗೆ ಒಟ್ಟು ಆರು ಪಂದ್ಯಗಳು ನಡೆದಿದ್ದು, ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಬಾರಿಸಿದೆ.
ರನ್ ಮಿಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. 100ನೇ ಸಲ 50 ಅಥವಾ ಅದಕ್ಕಿಂತ ಹೆಚ್ಚು ರನ್ ಸಿಡಿಸಿದ ಭಾರತದ ಮೊದಲ ಬ್ಯಾಟರ್ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ವಿಶಿಷ್ಟ ಸಾಧನೆ ಮಾಡಿದ್ದು, ಒಟ್ಟು 378 ಟಿ-20 ಪಂದ್ಯಗಳನ್ನು ಆಡಿರುವ ಅವರು, 41.26ರ ಸರಾಸರಿಯಲ್ಲಿ ಒಟ್ಟು 12,092 ರನ್ ಗಳಿಸಿ, ವಿಶ್ವದ ಮೂರನೇ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಕ್ರಿಸ್ ಗೇಲ್ ಮೊದಲನೇ ಸ್ಥಾನದಲ್ಲಿದ್ದಾರೆ.

ಪಂಜಾಬ್ ಕಿಂಗ್ಸ್ ನೀಡಿದ್ದ 177 ರನ್ ಗಳ ಟಾರ್ಗೇಟ್ ಅನ್ನು ಬೆನ್ನಟ್ಟಿದ ಆರ್ ಸಿಬಿ 19.2 ಓವರ್ ಗಳನ್ನು ಗುರಿ ಮುಟ್ಟಿ ಜಯದ ನಗು ಬೀರಿತು.
ಮೊದಲ ಗೆಲುವು ದಾಖಿಲಿಸಿದ ಆರ್ ಸಿ ಬಿ
ಐಪಿಎಲ್ 2024 ನೇ ಸಾಲಿನ ಟೂರ್ನಿಯಲ್ಲಿ ಆರ್ ಸಿಬಿ ತನ್ನ ಮೊದಲ ಗೆಲುವುವನ್ನು ಸೋಮವಾರ ದಾಖಲಿಸಿದೆ. ವಿರಾಟ್ ಕೊಹ್ಲಿ ಅವರ 77 ರನ್ ಗಳ ಸಹಾಯದಿಂದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳ ಜಯ ದಾಖಲಿಸಿತು.
49 ಎಸೆತಗಳನ್ನು ಎದುರಿಸಿ 77 ರನ್ ಅನ್ನು ವಿರಾಟ್ ಕೊಹ್ಲಿ ಬಾರಿಸಿದರು. ಇದರಲ್ಲಿ 11 ಬೌಂಡರಿ ಮತ್ತು ಎರಡು ಸಿಕ್ಸರ್ ಗಳು ಒಳಗೊಂಡಿದ್ದು, ಆರ್ ಸಿಬಿ ಗೆಲುವಿಗೆ ಅತ್ಯುತ್ತಮ ಕಾಣಿಕೆ ನೀಡಿದರು.

ಚೆನ್ನೈನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ ಸಿಬಿ ಸೋಲನ್ನು ಅನುಭವಿಸಿತ್ತು. ಇದಾದ ಬಳಿಕ ತವರು ನೆಲದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಜಯಗಳಿಸಿ ಆರ್ ಸಿಬಿ ಅಭಿಮಾನಿಗಳಿಗೆ ಸಂತಸ ತಂದಿದೆ.
ಪಂಜಾಬ್ ಕಿಂಗ್ಸ್ ನೀಡಿದ್ದ 177 ರನ್ ಗಳ ಟಾರ್ಗೇಟ್ ಅನ್ನು ಬೆನ್ನಟ್ಟಿದ ಆರ್ ಸಿಬಿ 19.2 ಓವರ್ ನಲ್ಲಿ ಗುರಿ ಮುಟ್ಟಿ, ಗೆಲುವಿನ ನಗೆ ಬೀರಿತು.
ಆರೆಂಜ್ ಕ್ಯಾಪ್
ಆರ್ ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ದಿಢೀರ್ ಆಗಿ ಅಗ್ರಸ್ಥಾನಕ್ಕೇರಿದ್ದು, ಅವರು ಆಡಿರುವ ಎರಡು ಪಂದ್ಯಗಳಿಂದ ಒಟ್ಟು 98 ರನ್ ಕಲೆಹಾಕಿದ್ದಾರೆ. ಇದರಿಂದ ಆರೆಂಜ್ ಕ್ಯಾಪ್ ಕೊಹ್ಲಿ ಮುಡಿಗೇರಿದೆ.
ಪರ್ಪಲ್ ಕ್ಯಾಪ್
ಸಿಎಸ್ ಕೆ ತಂಡದ ವೇಗಿ ಮುಸ್ತಫಿಜುರ್ ಹೆರಮಾನ್ ಅವರು ಆರ್ ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸುವುದರ ಮೂಲಕ ಅಗ್ರಸ್ಥಾನಕ್ಕೇರಿ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ.

More News

You cannot copy content of this page