ಬೆಂಗಳೂರು : ಬರೋಬ್ಬರಿ 42 ದಿನಗಳ ಬಳಿಕ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಶಂಕಿತ ಉಗ್ರರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ತನಿಖೆ ವೇಳೆ ಕೆಲ ಸ್ಪೋಟಕ ವಿಚಾರಗಳು ತಿಳಿದು ಬಂದಿದ್ದು, ಪಕ್ಕಾ ಪ್ಲಾನ್ ಎಕ್ಸಿಕ್ಯೂಟ್ ಮಾಡಲಾಗಿದೆ. ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಬೇಕೆಂದುಕೊಂಡಿದ್ದ ಶಂಕಿತರು ಬೇರೆಯದ್ದೆ ಪ್ಲಾನ್ ಮಾಡಿಕೊಂಡಿದ್ದು ಬಯಲಾಗಿದೆ. ಶಂಕಿತ ಉಗ್ರರಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ತಾಹ ಹಿಂದೂಗಳ ಹೆಸರಲ್ಲಿ ಮನೆ ಹಾಗೂ ಹೊಟೇಲ್ ಬಾಡಿಗೆ ಪಡೆದಿದ್ದರು ಎಂಬುದು ಗೊತ್ತಾಗಿದೆ. ಇದಕ್ಕಾಗಿ ನಕಲಿ ಆಧಾರ್ ಕಾರ್ಡ್ ಸಹ ಬಳಸಿಕೊಂಡು ಯಾರಿಗೂ ಅನುಮಾನ ಬಾರದಂತೆ ನಡೆದುಕೊಂಡಿದ್ದಾರೆ.
ಶಂಕಿತ ಉಗ್ರರು ಕಳೆದ 12 ದಿನಗಳಿಂದ ಕಲ್ಕತ್ತಾದ
ಮಿಧಿನಾಪುರದ ಹಲವು ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು. ಸಂಜಯ್ ಅಗರಲ್ವಾಲ್, ಉದಯ್ ದಾಸ್, ಯಶು ಪಟೇಲ್, ವಿಘ್ನೇಶ್ ಹೀಗೆ ನಾನಾ ಹೆಸರು ಬದಲಾಯಿಸಿಕೊಂಡಿದ್ದು ಗೊತ್ತಾಗಿದೆ. ಎರಡ್ಮೂರು ದಿನಗಳಿಗೊಮ್ಮೆ ಶಂಕಿತರು ಲಾಡ್ಜ್ ಬದಲಾಯಿಸಿ
ಕಲ್ಕತ್ತಾದ ಪ್ಯಾರಡೈಸ್, ಲೇನಿನ್ ಸೇರಾನಿ ಸೇರಿ ಹಲವು ಹೊಟೇಲ್ ಗಳಲ್ಲಿ ರೂಮ್ ಬಾಡಿಗೆ ಪಡೆದುಕೊಂಡಿದ್ದಾರೆ.
ಇನ್ನೂ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ಮೂಲದವನು ಎಂಬತೆ ಶಂಕಿತ ಬಾಂಬರ್ ಮುಸಾವೀರ್ ಹುಸೇನ್ ನಕಲಿ ಆಧಾರ್ ಕಾರ್ಡ್ ಹೊಂದಿದ್ದ.
ಪ್ರಕರಣದ ಮಾಸ್ಟರ್ ಮೈಂಡ್ ಮತೀನ್ ತಾಹ ಕರ್ನಾಟಕದ ಕಲಬುರಗಿ ಮೂಲದವನು ಎಂಬತೆ ವಿಘ್ನೇಶ್ ಎಂಬ ಹಾಗೂ ಅಮೊಲ್ ಕುಲರ್ಕಣಿ ಹೆಸರಿನಲ್ಲಿ ನಕಲಿ ದಾಖಲಾತಿ ನೀಡಿದ್ದ. ಇನ್ನೂ ಹೊಟೇಲ್ ಸಿಬ್ಬಂದಿ ಬಳಿ ಬೇರೆ ಕಥೆ ಕಟ್ಟಿ ತಮ್ಮ ಹೆಸರುಗಳು ಸಂಜಯ್ ಅಗರ್ ವಾಲ್ ಹಾಗೂ ಉದಯ್ ದಾಸ್ ಎಂದು ಹೇಳಿಕೊಂಡಿದ್ದು ಸಹ ಗೊತ್ತಾಗಿದೆ. ಸದ್ಯ ಇವರಿಗೆ ನಕಲಿ ಆಧಾರ್ ಮಾಡಿಕೊಟ್ಟಿದ್ದು ಯಾರು ಎಂಬ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುವ ಸಾಧ್ಯತೆ ಇದೆ.