ಹುಬ್ಬಳ್ಳಿ: ಗುಪ್ತಚರ ಇಲಾಖೆಯು ಬಹುದೊಡ್ಡ ಪ್ರಶಂಸೆಯ ಕೆಲಸವನ್ನು ಮಾಡಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೆಣಗಳ ಮೇಲೆ ರಾಜಕೀಯ ಮಾಡುವಂತ ದುಸ್ಥಿತಿಗೆ ಇಳಿದಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೆಫೆಯಲ್ಲಿ ಬ್ಲಾಸ್ಟ್ ಆಗಿರುವ ಸಂದರ್ಭದಲ್ಲಿ ರಾಜ್ಯದ ಮಂತ್ರಿಗಳು ವೈಯಕ್ತಿಕ ದ್ವೇಷ, ಸಿಲಿಂಡರ್ ಬ್ಲಾಸ್ಟ್ ಎಂದು ಸಮಜಾಯಿಷಿ ನೀಡಿದ್ದು, ತಕ್ಷಣವೇ ಅನುಮಾನಗೊಂಡ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿತ್ತು. ಈ ನಿಟ್ಟಿನಲ್ಲಿ ಈಗ ಕೇಂದ್ರ ಗುಪ್ತಚರ ಇಲಾಖೆಯು ಈಗ ಮಹತ್ವದ ಕಾರ್ಯವನ್ನು ಮಾಡಿ ಆರೋಪಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.
ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದ ಭದ್ರತೆಗೆ ದಕ್ಕೆ ತರುವುದರ ಜೊತೆಗೆ ಇದು ಯಾವುದೇ ಟೆರೆರಿಸ್ಟ್ ಕೃತ್ಯ ಅಲ್ಲವೆಂದೂ ನಿರೂಪಿಸಲು ಹೊರಟಿದ್ದವರು. ಇದು ದೇಶದ ಭದ್ರತೆಗೆ ದಕ್ಕೆ ತರುವ ಬಹುದೊಡ್ಡ ಷಡ್ಯಂತ್ರ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದಾಗಲೂ ವಿನಾಯಿತಿ ಕೊಡುವ ಕೆಲಸವನ್ನು ಮಾಡಿರುವ ಕಾಂಗ್ರೆಸ್ ಸರ್ಕಾರ ದೇಶದ ಬಗ್ಗೆ ದೇಶದ ಭದ್ರತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಇಂತಹ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.