Mallikarjun Kharge: ಪ್ರಧಾನಿ ಮೋದಿ ಕಾಂಗ್ರೆಸ್ ಬಯ್ಯುವುದರಲ್ಲೇ ಕಾಲ ಕಳೆಯುತ್ತಿದ್ದಾರೆ: ಬಿಜೆಪಿ ಸೋತರೆ ಚುನಾವಣೆಗೆ ಮಹತ್ವ ಬರುತ್ತೆ: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ

ಕೋಲಾರ: ಈ ಬಾರಿ ಬಿಜೆಪಿಯನ್ನು ಸೋಲಿಸಿದಾಗ ಮಾತ್ರ 2024 ರ ಲೋಕಸಭಾ ಚುನಾವಣೆಗೆ ಮಹತ್ವ ಬರುತ್ತದೆ. ಮೋದಿ ಅವರು ಎಲ್ಲಿ ಹೋದರು ಕಾಂಗ್ರೆಸ್ ಅನ್ನು ಬೈಯ್ಯುವ ಭಾಷಣ ಮಾಡುತ್ತಿದ್ದಾರೆ. ಕಳೆದ ಭಾನುವಾ ಮೈಸೂರಿನಲ್ಲಿ ಮೋದಿ ಅವರು 30 ನಿಮಿಷ ಭಾಷಣ ಮಾಡಿದರು. ಆದರಲ್ಲಿ 5 ನಿಮಿಷ ಮಾತ್ರ ಅವರು ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಮಿಕ್ಕ 20 ನಿಮಿಷವನ್ನು ಕಾಂಗ್ರೆಸ್ ಬೈಯ್ಯುವುದಕ್ಕೆ ಮೀಸಲಿಟ್ಟರು. ಇದೇ ಮೋದಿ ಅವರ ಕೊಡುಗೆ.
ಮೋದಿ ಅವರು ಈ ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಮೊದಲು ಹೇಳಬೇಕು. ಬಿಜೆಪಿಯವರು ಮನೆ ಬಾಗಿಲಿಗೆ ಬಂದಾಗ ಜನ ಪ್ರಶ್ನೆ ಮಾಡಬೇಕು. ಬರ ಬಂದಾಗ, ನೆರೆ ಬಂದಾಗ, ತೆರಿಗೆ ಹಣ ಎಷ್ಟು ಕೊಟ್ಟಿದ್ದೀರಿ ಎಂದು ಕೇಳಬೇಕು.

ಅನೇಕ ಅಂಕಿ- ಅಂಶಗಳನ್ನು ಸಿದ್ದರಾಮಯ್ಯ ಅವರು, ಸಚಿವ ಕೃಷ್ಣಬೈರೇಗೌಡರು, ಶಿವಕುಮಾರ್ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಎದುರು ಇಟ್ಟಿದ್ದರು. ಅವರು ಒಂದೇ ಒಂದು ಪ್ರಶ್ನೆಗೆ ಉತ್ತರ ನೀಡಿಲ್ಲ. ಇಂತಹ ಕೆಟ್ಟ ಸರ್ಕಾರವನ್ನು ಕಿತ್ತು ಬಿಸಾಕಬೇಕು. ನಿಮ್ಮ ದನಿಗೆ ಅವರು ಹೆದರಿ ಓಡಿ ಹೋಗಬೇಕು.
ಕಾಂಗ್ರೆಸ್ ಈ ದೇಶಕ್ಕೆ ಸಾಕಷ್ಟು ಹೆಸರು ಮಾಡಿದೆ. ಕೋಲಾರ ಎಂದರೆ ಮಿಲ್ಕ್ ಮತ್ತು ಸಿಲ್ಕ್ಗೆ ಪ್ರಸಿದ್ದಿಯಾಗಿದೆ. ಕಾಂಗ್ರೆಸ್ ಸರ್ಕಾರದ ಫಲದಿಂದ ಕೋಲಾರದ ಕೆರೆಗಳು ತುಂಬಿ ತುಳುಕುತ್ತಿವೆ.
ಸುಳ್ಳು ಹೇಳುವುದೇ ಮೋದಿ ಅವರ ಕೆಲಸ. ಈಗ ನಮ್ಮಿಂದ ಗ್ಯಾರಂಟಿಗಳನ್ನು ಕದ್ದಿದ್ದಾರೆ. ಎಲ್ಲಿ ಹೋದರೂ ಮೋದಿ ಗ್ಯಾರಂಟಿ ಎಂದು ಜಪ ಮಾಡುತ್ತಿದ್ದಾರೆ. ಮೋದಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡಬೇಕಾಗಿತ್ತು. 10 ವರ್ಷದಲ್ಲಿ 20 ಕೋಟಿ ಕೊಡಬೇಕಾಗಿತ್ತು. 15 ಲಕ್ಷ ಕೊಡುತ್ತೇವೆ ಎಂದು ಹೇಳಿದರು. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು. ಅವರು ಸುಳ್ಳು ಹೇಳುತ್ತಿದ್ದಾರೋ ಅಥವಾ ಜನ ಅವರಿಂದ ತೆಗೆದುಕೊಂಡು ಸುಳ್ಳು ಹೇಳುತ್ತಿದ್ದಾರೋ ನೀವೇ ಹೇಳಬೇಕು.

ಮೋದಿ ಸುಳ್ಳಿನ ಸರದಾರ. ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ನಮ್ಮ ಗ್ಯಾರಂಟಿಗಳು ಯಶಸ್ವಿಯಾಗಿದ್ದನ್ನು ನೋಡಿ ದೇಶದ ಗಲ್ಲಿ, ಗಲ್ಲಿಗಳಲ್ಲಿ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಅನೇಕರು ಹೇಳುತ್ತಾರೆ ಮೋದಿ ಹೆಸರು ತೆಗೆದುಕೊಳ್ಳಬೇಡಿ ಎಂದು. ಆದರೆ ಆ ವ್ಯಕ್ತಿ ಎಲ್ಲಾ ಕೆಲಸಗಳನ್ನು ನಾನೇ ಮಾಡಿದ್ದೇನೆ ಎಂದು ಓಡಾಡುತ್ತಾನೆ. ಆದ ಕಾರಣ ಅವರ ಹೆಸರು ತೆಗೆದುಕೊಳ್ಳಲೇಬೇಕು.
ಬೆಲೆಏರಿಕೆ ಆಗುತ್ತಿದೆ ಆ ಸಮಸ್ಯೆ ಬಗ್ಗೆ ಮೋದಿ ನೋಡುತ್ತಿಲ್ಲ. ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಬೇಕು. ಯುವಕರಿಗೆ ಉದ್ಯೋಗ ಕೊಡಬೇಕು, ಮಹಿಳೆಯರಿಗೆ ಶಕ್ತಿ ಕೊಡಬೇಕು. ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 5 ನ್ಯಾಯಗಳು, 25 ಗ್ಯಾರಂಟಿಗಳನ್ನು ಕೊಟ್ಟೇಕೊಡುತ್ತೇವೆ. ಗ್ಯಾರಂಟಿ ಅನುಷ್ಠಾನಕ್ಕಾಗಿ ಜನರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡುತ್ತೇನೆ.

More News

You cannot copy content of this page