ಹುಬ್ಬಳ್ಳಿ: ನಿನ್ನೆ ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜ್ ವಿಧ್ಯಾರ್ಥಿನಿ ಕುಮಾರಿ ನೇಹಾ ಹಿರೇಮಠ ಇವಳನ್ನು ಅಮಾನುಷ ವಾಗಿ ಕೊಲೆಗೈದ ಕ್ರೂರಿ ಫಯಾಜ್ ಸವದತ್ತಿ ಎಂಬ ಕೊಲೆಗಾರನಿಗೆ ಯಾವುದೇ ಕಾರಣಕ್ಕೂ ನ್ಯಾಯಾಲಯ ಜಾಮೀನು ನೀಡಿದೆ ಗಲ್ಲುಶಿಕ್ಷೆ ಗೆ ಗುರಿಪಡಿಸಬೇಕು ಎಂದು ವೀರಶೈವ ಲಿಂಗಾಯತ ಒಳ ಪಂಗಡಗಳ ಒಕ್ಕೂಟ ಆಗ್ರಹಿಸಿಸುತ್ತದೆ ಮತ್ತು ಈ ರೀತಿ ಕೃತ್ಯಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಕಾಲೇಜ್ ಗಳ ಸುತಮುತ್ತ ಇರುವ ಮಾದಕ ವಸ್ತುಗಳ ಪೂರೈಕೆ ಕೇಂದ್ರಗಳ ವಿರುದ್ಧ ಕೊಡಲೇ ನೀರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.
ಈಗಾಗಲೇ ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ನಿರಂಜನ ಹಿರೇಮಠರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ವೀರಶೈವ ಲಿಂಗಾಯತ ಸಮುದಾಯ ನಿಮ್ಮ ಬೆನ್ನಿಗೆಯಿರುತ್ತದೆ ಮಗಳ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಮತ್ತು *ಈ ಘಟನೆ ಇಟ್ಟು ಕೊಂಡು ಸತ್ತ ಹೆಣದ ಮೇಲೆ ರಾಜಕೀಯ ಮಾಡುವ ಕೀಳು ಮಟ್ಟಕ್ಕೆ ಯಾವುದೇ ರಾಜಕೀಯ ಪಕ್ಷಗಳು ಇಳಿಯಬಾರದು ಎಂದು ವೀರಶೈವ ಲಿಂಗಾಯತ ಒಳ ಪಂಗಡಗಳ ಒಕ್ಕೂಟದ ಪದಾಧಿಕಾರಿಗಳಾದ ಬಂಗಾರೇಶ ಹಿರೇಮಠ ಹಾಗು ರಾಜಶೇಖರ ಮೆಣಸಿನಕಾಯಿ ಮನವಿ ಮಾಡಿದ್ದಾರೆ….