ಹುಬ್ಬಳ್ಳಿ: ಸಿಐಡಿ ತನಿಖೆಯಿಂದ ಪರಿಹಾರ ಸಿಗಲ್ಲ, ತಕ್ಷಣ ಸಿಬಿಐ ತನಿಖೆಗೆ ಕೊಡಿ. ಕಣ್ಣೋರೆಸುವ ತಂತ್ರ ಮಾಡಬೇಡಿ. ರಾಜ್ಯ ಸರಕಾರ ತಪ್ಪಿತಸ್ಥರಾಗೋತ್ತೇವೆ ಎಂದು ಕಣ್ಣೋರೆಸುವ ತಂತ್ರ ಮಾಡಿದೆ ಹೀಗಾಗಿ ಸಿಐಡಿಗೆ ಕೊಟ್ಟಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ನೇಹಾ ಹಿರೇಮಠ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ನೇಹಾ ಹಿರೇಮಠ ಕೊಲೆ ಮುಸಲ್ಮಾನ ಗೂಂಡಾನಿಂದ ಆಗಿದ್ದನ್ನಉ ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಹಿಂದೂ ಸಮಾಜ ಘಟನೆಯನ್ನು ಖಂಡಿಸುತ್ತಿದೆ ಎಂದರು.
ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯರ ಕೊಲೆ ಆಗುತ್ತಿದೆ ಎನ್ನುವುದು ಕೇಳಿದ್ದೇವೆ, ಮುಂದುವರೆದ ಭಾಗ ರಾಜ್ಯದಲ್ಲಿ ನಡೆಯುತ್ತಿದೆ.ರಾಜ್ಯ ಕಾಂಗ್ರೆಸ್ ನಾಯಕರ ಹೇಳಿಕೆ ಗೌರವ ತರುವಂತದ್ದಲ್ಲ. ನಿಮ್ಮ ಮಗಳನ್ನ ಮುಸಲ್ಮಾನ ಗೂಂಡಾಗಳು ಕೊಂದಿದ್ದರೆ ನಿಮ್ಮ ಹೇಳಿಕೆ ಹೀಗೆ ಬರುತ್ತಿತ್ತಾ…? ಎಂದು ಸುರ್ಜೆವಾಲ, ಪರಮೇಶ್ವರಗೆ ಪ್ರಶ್ನೆ ಮಾಡಿದರು.
ಕೊಲೆ ಮಾಡಿದ ರಾಕ್ಷಸನನ್ನ ಎನ್ ಕೌಂಟರ್ ಮಾಡುವ ಪ್ರಯತ್ನ ಮಾಡಬಹುದಿತ್ತು. ಮುಸಲ್ಮಾನರನ್ನು ರಕ್ಷಣೆ ಮಾಡುವ ವ್ಯವಸ್ಥೆ ರಾಜ್ಯದಲ್ಲಿದೆ. ಸಿಐಡಿ ತನಿಖೆಯಿಂದ ಪರಿಹಾರ ಸಿಗಲ್ಲ, ತಕ್ಷಣ ಸಿಬಿಐ ತನಿಖೆಗೆ ಕೊಡಿ. ಕಣ್ಣೋರೆಸುವ ತಂತ್ರ ಮಾಡಬೇಡಿ. ಹಿಂದುಗಳ ಕೊಲೆ ಅಂದ್ರೆ ಅವರಿಗೆ ಮಾಮೂಲಿ ಆಗಿದೆ. ನಿಮ್ಮ ಸಾಂತ್ವನಕ್ಕಾಗಿ ನಾವು ಕಾಯಲ್ಲ ಎಂದು ಅವರು ಕಿಡಿಕಾರಿದರು.
ಮುಸಲ್ಮಾನ ವೋಟ್ ಕಾಂಗ್ರೆಸ್ ಗೆ ಬೇಕಿದೆ. ಎನ್ ಕೌಂಟರ್ ಮಾಡುವ ಕಾನೂನು ತರುತ್ತೇವೆ ಎಂದು ಹೇಳಿಕೆ ಕೊಟ್ಟರೆ ಸಾಲದು. ಕಾನೂನು ತರದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಿನಿ ಅಂತಾ ಒತ್ತಡ ಹೇರಬೇಕು ಸಿಎಂ ಮೇಲೆ ಎಂದು ಅವರು ಹೇಳಿದರು.