ಹುಬ್ಬಳ್ಳಿ: ಸಚಿವ ಸಂತೋಷ ಲಾಡ್ ನಾಲಾಯಕ್ ಎಂಬ ಪದ ಬಳಕೆ ಮಾಡಿದ ಬಿ.ವೈ.ವಿಜಯೇಂದ್ರ ವಿರುದ್ಧ ಎಲ್ಲೆಡೆಯೂ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಚ ವಿಜಯೇಂದ್ರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಲಾಡ್ ಅಭಿಮಾನಿಗಳು, ನಾಳೆ ವಿಜಯೇಂದ್ರರವರ ವಿರುದ್ಧ ಪ್ರತಿಭಟನೆ ಮಾಡಲು ತೀರ್ಮಾನ ಮಾಡಿದ್ದಾರೆ.
ಹೌದು.. ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಲು ಲಾಡ್ ಅಭಿಮಾನಿಗಳು ನಿರ್ಧಾರ ಮಾಡಿದ್ದು, ಸಂತೋಷ ಲಾಡ್ ರಾಜ್ಯದ ಏಕೈಕ ಮರಾಠಾ ಸಮುದಾಯದ ಸಚಿವರಾಗಿದ್ದಾರೆ. ವಿಜಯೇಂದ್ರ ಲಾಡ್ ವಿರುದ್ಧ ಮಾತನಾಡಿ, ಅವರಿಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ. ನಾಲಾಯಕ್ ಎಂದು ಕೀಳು ಭಾಷೆ ಪ್ರಯೋಗಿಸಿದ ವಿಜಯೇಂದ್ರವರಿಗೆ ಧಿಕ್ಕಾರ ಇರಲಿ, ಜೈ ಭವಾನಿ, ಜೈ ಶಿವಾಜಿ, ಜೈ ಸಂತೋಷ ಲಾಡ್ ಎಂದು ಪೋಟೋಗಳನ್ನ ವೈರಲ್ ಮಾಡಿದ ಲಾಡ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.