Search

RANDEEP SINGN SURJEWALA: ಮೋದಿ ಪ್ರಧಾನಮಂತ್ರಿ ಅಲ್ಲ ಪರಿಧಾನ್ ಮಂತ್ರಿ: ಸುರ್ಜೆವಾಲಾ ಆರೋಪ

ಹುಬ್ಬಳ್ಳಿ:ಮೋದಿ ಪ್ರಧಾನ ಮಂತ್ರಿ ಅಲ್ಲ ಪರಿಧಾನ್ ಮಂತ್ರಿ.‌ಹೊಸ ಈಸ್ಟ್ ಇಂಡಿಯಾ ಕಂಪನಿ ಅಂದ್ರೆ ಅದು ಬಿಜೆಪಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿಯಾದ ರಣದೀಪ್ ಸುರ್ಜೆವಾಲಾ ಟೀಕೆ ಮಾಡಿದ್ದಾರೆ.

ನಗರದಲ್ಲಿಂದು ಖಾಸಗಿ ಹೊಟೆಲ್ ನಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು,‌ಗ್ಯಾರಂಟಿ ವಿಚಾರದಲ್ಲಿ ನಾವು ನುಡಿದಂತೆ ನಡೆದಿದ್ದೇವೆ.‌ಐದು ಗ್ಯಾರಂಟಿ ಜಾರಿಗೆ ತಂದೆ ತರ್ತೇವೆ ಅಂತ ಹೇಳಿದ್ದೆವು. ಆದ್ರೆ ನಮ್ಮ ಗ್ಯಾರಂಟಿ ಗಳನ್ನು ತಮಾಷೆ ಮಾಡ್ತಿದ್ದಾರೆ. ಖುದ್ದು ಮೋದಿ ಅವರೇ ಗ್ಯಾರಂಟಿ ಜಾರಿಯಾಗಲ್ಲ ಎಂದಿದ್ದರೂ. ಆದ್ರೆ ಕರ್ನಾಟಕದ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.

ಕಾನೂನು ವಿದ್ಯಾರ್ಥಿನಿಯೋರ್ವಳು ಉಚಿತ ಟಿಕೆಟ್ ನ ಹಾರವನ್ನೇ ಮಾಜಿ ಸಿಎಂಗೆ ಹಾಕಿದ್ದಾಳೆ.‌ಇದು ಕಾಂಗ್ರೆಸ್ ಗ್ಯಾರಂಟಿ ಮಾದರಿಯಾಗಿದೆ. ಈ ಬರೀ ಕನ್ನಡಿಗರು ಮೋದಿ ಅವ್ರಿಗೆ ಖಾಲಿ ಚೊಂಬು ಉಡುಗೊರೆಯಾಗಿ ಕೊಡ್ತಾರೆ. ಬಿಜೆಪಿ ಅಂದ್ರೆ ಭಾರತೀಯ ಚೊಂಬು ಪಾರ್ಟಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಜೂನ್ ನಲ್ಲಿ ಕರ್ನಾಟಕದ ಬರ ಪರಿಹಾರ ಕೇಳಿತ್ತು. ಆದ್ರೆ ಬರ ಪರಿಹಾರ ಕೊಡದೆ ಕೇಂದ್ರ ಮಲತಾಯಿ ಧೋರಣೆ ಮಾಡಿತು.‌ಕೇಂದ್ರ ಮುಂದೆ ನಾವು ಭಿಕ್ಷೆ ಬೇಡ್ತಿಲ್ಲ. ಕನ್ನಡಿಗರು ತೆರಿಗೆ ಕಟ್ಟಿದ್ದಾರೆ.‌ ಕನ್ನಡಿಗರು ಕೊಟ್ಟ ತೆರೆಗೆ ಪೈಕಿ ಕೆಲ ಹಣ ವಾಪಸ್ ಕೇಳ್ತಿದ್ದೇವೆ.‌ ಆದ್ರೆ ಮೋದಿ ಅವ್ರು ಚೊಂಬು ತೋರಿಸ್ತೀದ್ದಾರೆ.‌ ಖಾಲಿ ಚೊಂಬು ತಗೊಳ್ಳಿ ಅಂತ ಮೋದಿ ಹೇಳ್ತಿದ್ದಾರೆ.‌ ದೇಶ ನಡೆಸಲು ಹಣ ಬೇಕು, ಆದ್ರೆ ತೆರಿಗೆ ಹಣವನ್ನಾದ್ರೂ ಕೊಡಿ ಅಂದ್ರೆ ಮೋದಿ ಖಾಲಿ ಚೊಂಬು ತಗೊಳ್ಳಿ ಅಂತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮೇಕೆ ದಾಟು, ಮಹದಾಯಿ ವಿಚಾರದಲ್ಲಿಯೂ ಚೊಂಬು ತೋರಿಸ್ತಿದ್ದಾರೆ. ಹೀಗಾಗಿ ಈ ಬಾರೀ ಮೋದಿ ಅವರಿಗೆ ಕನ್ನಡಿಗರು ಖಾಲಿ ಚೊಂಬು ಉಡುಗೊರಿಯಾಗಿ ಕೊಡ್ತಾರೆ. ಮೋದಿ ಅವರೇ ನಮ್ಮ ಗ್ಯಾರಂಟಿ ಕಾಪಿ ಮಾಡಿದ್ದಾರೆ.‌ ದ್ವಂದ್ವ ನೀತಿ ಬಿಜೆಪಿ ಡಿ.ಎನ್.ಎ ದಲ್ಲಿದೆ.‌‌ಹೇಳುವುದು ಒಂದು, ಮಾಡುವುದು ಮತ್ತೊಂದು.‌ಮೋದಿ ಅವರೇ ಖುದ್ದು ಖಾಲಿ ಚೊಂಬು. ಪ್ರತಿ ವರ್ಷ ಮೋದಿ ಅವರಿಂದ ಖಾಲಿ ಚೊಂಬು ಗ್ಯಾರಂಟಿ ಎಂದು ಅವರು ಲೇವಡಿ ಮಾಡಿದರು.

ಉದ್ಯೋಗ ಸೃಷ್ಟಿ, ಕಪ್ಪು ಹಣ ವಾಪಸ್ ಸೇರಿ ಎಲ್ಲ ಗ್ಯಾರಂಟಿಗಳಲ್ಲಿ ಚೊಂಬು ಕೊಟ್ಟಿದ್ದಾರೆ. 10 ವರ್ಷದಲ್ಲಿ ಮೋದಿ ಏನು ಮಾಡಿಲ್ಲ.‌ಜನರನ್ನು ಚೀಟಿಂಗ್ ಮಾಡೊ ಕೆಲಸ ಮಾಡಿದ್ದಾರೆ. ಇದು ನಾಚಿಕೆಗೇಡಿನ ವರ್ತನೆ. ನಾವು ಬಹಿರಂಗ ಚರ್ಚೆಗೆ ಸಿದ್ದ,‌ ಪತ್ರಕರ್ತರೆ ಜಡ್ಜ್ ಆಗಲಿ ಸ್ಥಳವನ್ನು ಅವರೇ ನಿಗದಿ ಮಾಡಲಿ.‌ ಸಿಎಂ, ಡಿಸಿಎಂ ಸೇರಿ ನಮ್ಮ ಸಚಿವರು, ಮುಖಂಡರು ಚರ್ಚೆಗೆ ಸಿದ್ಧ.‌ ಗ್ಯಾರಂಟಿ ಗಳ ಬಗ್ಗೆ ನಾವು ಸುಳ್ಳು ಹೇಳ್ತಿಲ್ಲ ಎಂದರು.

ಸಂವಿಧಾನ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು,‌ ನಾವು ಬದಲಾವಣೆ ವಿಚಾರ ಮಾತನಾಡಿಲ್ಲಾ.‌ ಸಂವಿಧಾನ ಬದಲಾವಣೆ ಮಾತನಾಡಿದವರು ಬಿಜೆಪಿಯವರು. ಅನಂತಕುಮಾರ್ ಹೆಗಡೆ ಯಾರು..? ಸಂವಿಧಾನ ಬದಲಾವಣೆ ಮಾತುಗಳು ಬರ್ತಿರೋದೇ ಬಿಜೆಪಿ ನಾಯಕರ ಬಾಯಲ್ಲಿ.‌ ಖುದ್ದು ಮೋದಿ ಅವರೇ ಸಂವಿಧಾನ ಬದಲಾವಣೆ ಪಿತೂರಿ ಮಾಡ್ತಿದ್ದಾರೆ ಎಂದು ಹರಿಹಾಯ್ದರು.

More News

You cannot copy content of this page