Search

NEHA HIREMATH CASE: ಕಾಲೇಜಿನ ಕಟ್ಟಡಕ್ಕೆ ನೇಹಾ ಹೆಸರು ಬೇಕಿಲ್ಲ, ಟಾಯ್ಲೆಟ್ ಗೆ ಫಯಾಝ್ ಹೆಸರಿಡಿ: ವಕೀಲರ ಆಗ್ರಹ..!

ಹುಬ್ಬಳ್ಳಿ: ಕಾಲೇಜು ಕಟ್ಟಡಕ್ಕೆ ನೇಹಾ ಹೆಸರು ಅಗತ್ಯವಿಲ್ಲ
ಶೌಚಾಲಯವೊಂದಕ್ಕೆ ಪಯಾಜ್ ಹೆಸರಿಡಿ ಎಂದು ಹಿಂದೂ ವಕೀಲರ ವೇದಿಕೆಯ ಸಂಚಾಲಕ ಅಶೋಕ ಅಣ್ವೇಕರ ಆಗ್ರಹಿಸಿದ್ದಾರೆ.

ನೇಹಾಳ ಮನೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಯಾರೂ ಸಹ ಕೊಲೆ ಆರೋಪಿ ಪರ ವಕಾಲತ್ತು ವಹಿಸಬಾರದು. ನೇಹಾ ಕುಟುಂಬಕ್ಕೂ ಜೀವ ಬೆದರಿಕೆ ಇದೆ. ನೇಹಾ ಕುಟುಂಬಸ್ಥರಿಗೆ ಸೂಕ್ತ ರಕ್ಷಣೆ ನೀಡಬೇಕು. ಕೊಲೆ ಪ್ರಕರಣದ ತನಿಖೆಯಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಕೊಲೆ ನಡೆದ ಆರು ದಿನಗಳ ನಂತರ ಸ್ಥಳ ಮಹಜರು ಮಾಡಲಾಗಿದೆ. ಸಾಕ್ಷ ನಾಶ ಆದ ನಂತರ ಮಹಜರು ಮಾಡಿದರೆ ಏನು ಉಪಯೋಗ ಎಂದು ಅವರು ಕಿಡಿಕಾರಿದರು.

ಈಗಲಾದರೂ ಸಮರ್ಪಕ ತನಿಖೆ ನಡೆಸಬೇಕು. ಸಿಎಂ ಮತ್ತು ಗೃಹ ಸಚಿವರು ವ್ಯತಿರಿಕ್ತ ಹೇಳಿಕೆ ನೀಡಿ, ಅಲ್ಪಸಂಖ್ಯಾತರ ಓಲೈಕೆಗೆ ಯತ್ನಿಸಿದ್ದಾರೆ. ಅಲ್ಪಸಂಖ್ಯಾತರ ತುಚ್ಚಿಕರಣ ಕೈಬಿಡಬೇಕು. ಇಂತಹ ಸರ್ಕಾರಕ್ಕೆ ಸಮಾಜ ತಕ್ಕ ಪಾಠ ಕಲಿಸಬೇಕು ಎಂದು ಅಶೋಕ್ ಅಣವೇಕರ್ ಆಗ್ರಹಿಸಿದ್ದಾರೆ.

More News

You cannot copy content of this page