Search

BS YEDIYURAPPA REACTION: ಪ್ರಜ್ವಲ್ ರೇವಣ ಪ್ರಕರಣಕ್ಕೆ ನೋ ಕಾಮೆಂಟ್, 28 ಸೀಟ್ ಗೆಲುವು ಖಚಿತ: ಯಡಿಯೂರಪ್ಪ

ಹುಬ್ಬಳ್ಳಿ: ಕರ್ನಾಟಕದಲ್ಲಿ ಚುನಾವಣೆ ವಾತಾವರಣ ಚೆನ್ನಾಗಿ ಇದೆ.‌ ಇಗ ಚುನಾವಣೆ ನಡೆದಿರೋ 14 ಕ್ಷೇತ್ರಗಳಲ್ಲಿ ನಾವು 14 ಗೆಲ್ತೀವಿ. ಮುಂದೆ ನಡೆಯುವ ಚುನಾವಣೆಯಲ್ಲಿಯೂ 14 ಸ್ಥಾನ ಗೆಲ್ಲುತ್ತೇವೆ ಎಂದು‌ ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, 28 ಕ್ಕೆ 28 ಸೀಟ್ ನಾವು ಗೆಲ್ಲುತ್ತೇವೆ. ಅದಕ್ಕೆ ಶ್ರಮ ಹಾಕಲು ಕಾರ್ಯಕರ್ತರಿಗೆ ಹೇಳಿದ್ದೇವೆ ಎಂದರು.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಅದರ ಬಗ್ಗೆ ನಾನ ಯಾವ ಕಮೆಂಟ್ ಮಾಡಲ್ಲ ಎಂದ ಯಡಿಯೂರಪ್ಪ, ಮೈತ್ರಿ ಪಕ್ಷದ ಪ್ರಜ್ವಲ್ ರೇವಣ್ಣನ ಬಗ್ಗೆ ಏನನ್ನೂ ಮಾತಾಡದ ಮಾಜಿ ಸಿಎಮ್ ಯಡಿಯೂರಪ್ಪ ಮುನ್ನಡೆದರು.

More News

You cannot copy content of this page