ಹುಬ್ಬಳ್ಳಿ: ಕಾಂಗ್ರೆಸ್ ಗ್ಯಾರಂಟಿ ಉದ್ದರನೆಯಲ್ಲಿ ತೀರ್ಥ ಕೊಟ್ಟಂತೆ. ವೋಟ್ ಬ್ಯಾಂಕ್ ಗಾಗಿ ಸೀಮಿತ ಇರೋದು ಕಾಂಗ್ರೆಸ್ ಗ್ಯಾರಂಟಿ. ಕಾಂಗ್ರೆಸ್ ಗ್ಯಾರಂಟಿ ಮಾಹಾವಂಚನೆಯ, ಕುತಂತ್ರದಿಂದ ಕೂಡಿರೋ ಗ್ಯಾರಂಟಿ. ಚುನಾವಣೆಗಾಗಿ ಕುತಂತ್ರದಿಂದ ಕೂಡಿರೋ ಗ್ಯಾರಂಟಿ. ಬದುಕು ಬದಲಾಯಿಸೋ ಗ್ಯಾರಂಟಿ ಅಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೀವ ಅಧಿಕಾರದಲ್ಲಿದ್ದಾಗ ಏನ ಮಾಡಿದ್ರೀ ಅನ್ನೋದು ಜನರ ಮುಂದೆ ಇಡಿ. ಸರ್ಕಾರದ ಬೊಕ್ಕಸಿದಿಂದ ಕೊಡ್ತಿರೋದು, ಜನ ಯಾರ ಅಪ್ಪನ ಹಣದಿಂದ ಕೊಟ್ರೀ ಅಂತಾ ಕೇಳ್ತಾರೆ. ಕಾಂಗ್ರೆಸ್ ಅಪಪ್ರಚಾರ ,ಮಾಡ್ತೀದೆ,ಅಪನಂಬಿಕೆ ಹುಟ್ಟಸ್ತಿದೆ. ಕೇಂದ್ರದಿಂದ ನಮಗೆ ಮೋಸ ಆಗ್ತಿದೆ ಎಂದು ಅಪಪ್ರಚಾರ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು.
ಹತ್ತು ವರ್ಷದ ಕಾಂಗ್ರೆಸ್ ಸರ್ಕಾರದಲ್ಲಿ ನಮಗೆ ಬಂದಿರೋ ಹಣ ಕೇವಲ 1 ಲಕ್ಷ 42 ಸಾವಿರ ಕೋಟಿ.ಮೋದಿ ಕೊಟ್ಟಿರೋದು 5 ಲಕ್ಷ 29 ಸಾವಿರ ಕೋಟಿ
ಕಾಂಗ್ರೆಸ್ ನವರು ಜಾಣ ಕುರುಡಾಗಿದ್ದಾರೆ. ಇದು ಅವರಿಗೆ ಅರ್ಥ ಆಗತಿಲ್ಲ. ಕೇವಲ ಅಪಪ್ರಚಾರ ಮಾಡ್ತೀದಾರೆ. NDRS SDRF ವಿಚಾರದಲ್ಲಿ ಅಪಪ್ರಚಾರ ಮಾಡ್ತಿದೆ. ಕಾಂಗ್ರೆಸ್ ಕಾಲದಲ್ಲಿ ನಾವು 44 ಸಾವಿರ ಕೋಟಿ ಕೇಳಿದ್ವಿ. ಅವರ ಕೊಟ್ಟಿದ್ದು ಕೇವಲ ಶೇಕಡಾ 8 ರಷ್ಟು. NDA ಅವಧಿಯಲ್ಲಿ ಸರ್ಕಾರ ಕೇಳಿರೋ ಶೇಕಡಾ 42 ರಷ್ಟು ಹಣ ಕೊಟ್ಟಿದೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಹೆಸರಲ್ಲಿ ವೋಟ್ ಕೇಳಿದ್ರೆ ಬರೋ ವೋಟ್ ಬರಲ್ಲ. ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಮಂತ್ರಿ ನಿಯೋಜಿತ ಅಭ್ಯರ್ಥಿಯಾಗಲು ಚರ್ಚೆ ನಡೆದಿತ್ತು. ಅದನ್ನು ಬೇಡಾ ಅಂದಿದ್ದು ಸಿದ್ದರಾಮಯ್ಯ. ಕಾಂಗ್ರೆಸ್ ಪೊಳ್ಳು,ಸುಳ್ಳಿಗೆ ಸಿಮೀತವಾಗಿದ್ದಾರೆ. ಕಾಂಗ್ರೆಸ್ ಗೆ ನಿಯತ್ತು ಇಲ್ಲ. ಕಾಂಗ್ರೆಸ್ ನಿಯತ್ತಿನ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡತೀದಾರೆ. ಸಿಇಟಿ ಪರೀಕ್ಷೆಯಲ್ಲೂ ಕೂಡಾ ಔಟ್ ಆಫ್ ಸಿಲಿಬಸ್ ಪ್ರಶ್ನೆಗಳಿವೆ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡತೀದಾರೆ. ಉನ್ನತ ಶಿಕ್ಷಣ ಸಚಿವರು ಮುನಿಯಪ್ಪನ ಅಳಿಯನಿಗೆ ಟಿಕೆಟ್ ತಪ್ಪಿಸೋ ಶೇಕಡಾ ಒಂದರಷ್ಟು ಮಕ್ಕಳ ಬಗ್ಗೆ ಯೋಚನೆ ಮಾಡಬೇಕಿತ್ತು .
ತುಘಲಕ್ ಮಾದರಿಗೆ ಶಿಕ್ಷಣ ಸಚಿವರ ಮಾನಸಿಕತೆ ಇದೆ
ಮಧು ಬಂಗಾರಪ್ಪ ಅವರ ಏನ ಮಾತಾಡ್ತಾರೆ ಅವರಿಗೆ ಗೊತ್ತಿಲ್ಲ. ಕಾಂಗ್ರೆಸ್ ಬಂದಾಗಲೇ ಯಾಕೆ ಈ ತರಹ ಸನ್ನಿವೇಶ ಸೃಷ್ಟಿಯಾಗತ್ತದೆ ಎಂದು ಅವರು ಹೇಳಿದರು.