ಹುಬ್ಬಳ್ಳಿ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ವಿಚಾರದಲ್ಲಿ ಈಗಾಗಲೇ ಈ ಪ್ರಕರಣವನ್ನ ಎಸ್ ಐಟಿ ಗೆ ವಹಿಸಲಾಗಿದೆ. ಎಸ್ ಐಟಿಯಿಂದ ಸೂಕ್ತ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ತನಿಖೆ ನಂತರ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷದಿಂದ ಯಾವ ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತೇವೆ ಎಂದು ಹುಬ್ಬಳ್ಳಿಯ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಾಳೆ ಜೆಡಿಎಸ್ ಪಕ್ಷದಿಂದ ಹುಬ್ಬಳ್ಳಿಯಲ್ಲಿ ಕೋರ್ ಕಮೀಟಿಸಭೆ ಕರೆಯಲಾಗಿದೆ. ಕೋರ್ ಕಮೀಟಿ ಸಭೆಯಲ್ಲಿ 14 ಕ್ಷೇತ್ರಗಳ ಪ್ರಮುಖರು ಭಾಗಿಯಾಗಲಿದ್ದಾರೆ.ಮಾಜಿ ಶಾಸಕರು, ಹಾಲಿಶಾಸಕರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಈ ಪ್ರಕರಣದಿಂದಾಗಿ ಯಾವ ಅಭ್ಯರ್ಥಿಗೂ ಹಾಗೂ ಮೈತ್ರಿ ಪಕ್ಷಕ್ಕೂ ಪರಿಣಾಮ ಬೀರಲ್ಲ. ಇದು ವೈಯಕ್ತಿಕ ಪ್ರಕರಣ ಆಗಿರುವುದರಿಂದ ಯಾರಿಗೂ ಪರಿಣಾಮ ಬೀರಲ್ಲ ಎಂದು ಅವರು ಹೇಳಿದರು.