ಆನಂದ್, ಗುಜರಾತ್: ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ಮತ್ತು ಕಾಂಗ್ರೆಸ್ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ರಾಹುಲ್ ಅವರನ್ನು ಹಾಡಿ ಹೊಗಳಿ ಪಾಕ್ ನಾಯಕರು ಟ್ವೀಟ್ ಮಾಡಿದ್ದರು ಎಂಬುದನ್ನು ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ಗುಜರಾತ್‌ನ ಆನಂದ್‌ನಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದಲ್ಲಿ ದುರ್ಬಲ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂಬುದು ಭಾರತ ವಿರೋಧಿಗಳ ಬಯಕೆಯಾಗಿದೆ. ಇದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಕಾಂಗ್ರೆಸ್ ಮತ್ತು ಪಾಕಿಸ್ತಾನದ ಮಧ್ಯೆ ಸಂಬಂಧ ಇರುವುದು ಕೂಡ ಇದೀಗ ಜಗಜಾಹಿರಾಗಿದೆ ಎಂದು ಪ್ರಧಾನಿ ಟೀಕಿಸಿದ್ದಾರೆ, ರಾಹುಲ್ ಅವರನ್ನು ಪಾಕ್ ನಾಯಕರು ಈ ಹಿಂದೆ ಹಾಡಿಹೊಗಳಿದ್ದರು ಎಂದು ಪ್ರದಾನಿ ಮೋದಿ ನೆನಪುಮಾಡಿಕೊಂಡಿದ್ದಾರೆ.
ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ್ದ ವೇಳೆ ಅಂದಿನ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲು ವಿಫಲಲಾಗಿತ್ತು. ಇದೀಗ ಪರಿಸ್ಥಿತಿ ಬದಲಾಗಿದೆ.
ಉಗ್ರಕೃತ್ಯದ ಮಾಹಿತಿ ನೀಡುವ ಕಾಲ ಮುಗಿದು ಹೋಗಿದೆ. ಉಗ್ರರು ಭಾರತ ನೆಲದಲ್ಲಿ ದುಸ್ಸಾಹಸ ನಡೆಸಲು ಮುಂದಾದರೇ ಅವರ ನೆಲೆಗೆ ನುಗ್ಗಿ ಹೊಡೆಯುವ ಸಾಮರ್ಥ್ಯ ಇದೀಗ ಭಾರತ ಮೈಗೂಡಿಸಿಕೊಂಡಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಚುನಾವಣೆಯಲ್ಲಿ ಪಾಕ್ ಮತ್ತು ಕಾಂಗ್ರೆಸ್ ಸಂಬಂಧವನ್ನು ಪ್ರಸ್ತಾಪಿಸುವ ಮೂಲಕ ಲೋಕ ಕದನಕ್ಕೆ ಮೋದಿ ಹೊಸ ತಿರುವು ನೀಡಿದ್ದಾರೆ. ಕಾಂಗ್ರೆಸ್ ಮುಳುಗುತ್ತಿದೆ
ಇಲ್ಲಿಯ ತನಕ ಮೀಸಲಾತಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದ ಮೋದಿ ಇದೀಗ ಹೊಸ ವಿಷಯ ಪ್ರಸ್ತಾಪಿಸುವುದರ ಮೂಲಕ ಕಾಂಗ್ರೆಸ್‌ಗೆ ಶಾಕ್ ಕೊಡಲು ಯತ್ನಿಸಿದ್ದಾರೆ.
ಆನಂದ್ ನಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಕೂಡ ಮೋದಿ ಕಾಂಗ್ರೆಸ್ ವಿರುದ್ದ ಮೀಸಲಾತಿ ಅಸ್ತ್ರ ಬಳಸಿದ್ದಾರೆ. ಕಾಂಗ್ರೆಸ್ ಮೀಸಲಾತಿಯ ವಿರೋಧಿಯಾಗಿದೆ ಎಂದು ಮೋದಿ ಟೀಕಿಸಿದ್ದಾರೆ. ಬಿಸಿಲಿನ ಬೇಗೆಯ ಮಧ್ಯೆ ದೇಶದಲ್ಲಿ ಚುನಾವಣಾದ ಅಬ್ಬರ ಬಿರುಸುಪಡೆದುಕೊಂಡಿದ್ದು, ರಾಜಕೀಯ ನಾಯಕರ ಆರೋಪ- ಪ್ರತ್ಯಾರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ