ಹುಬ್ಬಳ್ಳಿ: ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಹೇಳಿದರು.
ನವನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಇಂದು 4.30ಕ್ಕೆ ಕಿಮ್ಸ್ ಆಸ್ಪತ್ರೆಯಿಂದ ಎಂಎಲ್ ಸಿ ಕೇಸ್ ರೇಪರ್ ಆಗಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ಆಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ನಾವು ಕೂಡಲೆ ಪೋಕ್ಸೋ ಅಡಿ ಪ್ರಕರಣ ದಾಖಲು ಮಾಡಿದ್ದೇವೆ ಎಂದರು.
ಪ್ರಕರಣದ ಆರೋಪಿ ಸದ್ದಾಂ ಹುಸೇನ್ ಎನ್ನುವವನ್ನಯ ದಸ್ತಗಿರಿ ಮಾಡಿದ್ದೆವೆ. ಆರೋಪಿಗೆ 19 ವರ್ಷ ಹುಡುಗಿ ಮೈನರ್. ಹುಡುಗಿ ಎಸ್ ಟಿ ಸಮುದಾಯಕ್ಕೆ ಸೇರಿದವಳು. ಹೀಗಾಗಿ ಆರೋಪಿ ಮೇಲೆ ಜಾತಿ ನಿಂದನೆ ಪ್ರಕರಣ ಸಹ ದಾಖಲಾಗಿದೆ.ಆರೋಪಿಗೆ ಸೂಕ್ತ ಕ್ರಮ ಜರಗಿಸುತ್ತವೆ. ಪ್ರತಿಭಟನಾಕಾರರಿಗೆ ಮನವೊಲಿಸುತ್ತವೆ ಎಂದರು.