DINESH GUNDU RAO: ಸತ್ಯ-ಸುಳ್ಳು, ದ್ವೇಷ-ಪ್ರೀತಿಯ ನಡುವಿನ ಚುನಾವಣೆ: ಸಚಿವ ದಿನೇಶ್ ಗುಂಡೂರಾವ್

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಸುಳ್ಳು ಮತ್ತು ಸತ್ಯದ ನಡುವಿನ ಚುನಾವಣೆ, ದ್ವೇಷ ಮತ್ತು ಪ್ರೀತಿ ನಡುವಿನ ಹೋರಾಟದ ಚುನಾವಣೆಯಾಗಿದೆ. ದ್ವೇಷ, ವಿವಾದಗಳಿಂದ ದೇಶವನ್ನು ವಿಭಜನೆ ಮಾಡುವ ಬಿಜೆಪಿಗೆ ಈ ಬಾರಿ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಭಾರತದ ಸಂವಿಧಾನದ ಮೇಲೆ ನಂಬಿಕೆಯೇ ಇಲ್ಲದವರು ಈಗ ಪ್ರಚಾರಕ್ಕಾಗಿ ಏನೆನೋ ಮಾಡುತ್ತಿದ್ದಾರೆ. ಮಾಡುವುದೇ ಒಂದು, ಹೇಳುವುದು ಮತ್ತೊಂದು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಅಭಿವೃದ್ಧಿ ವಿಷಯಗಳು ಚರ್ಚೆಗೆ ಬರುತ್ತವೇ ಎಂದುಕೊಂಡಿದ್ದೇವು. ಆದರೆ ಕೇಂದ್ರದಲ್ಲಿ ಹತ್ತು ವರ್ಷ ಆಡಳಿತ ಮಾಡಿದ ಬಿಜೆಪಿ ಕ್ಷುಲ್ಲಕ ಕಾರಣಗಳಿಂದ‌ ಚುನಾವಣಾ ಪ್ರಚಾರ ನಡೆಸುತ್ತಿದೆ. ಒಂದೇ ಒಂದು ಅಭಿವೃದ್ಧಿ ಕಾರ್ಯಗಳನ್ನು ಇಟ್ಟುಕೊಂಡು ಚುನಾವಣೆಗೆ ಬರಬೇಕಿತ್ತು. ಆದರೆ ಸರಿಯಾದ ಸ್ಟ್ಯಾಂಡ್ ಇಲ್ಲದೆಯೇ ದೊಡ್ಡ ಸುಳ್ಳಿನ ಸರಮಾಲೆ ಹೊತ್ತು ಚುನಾವಣೆಗೆ ಬಂದಿರುವುದು ವಿಪರ್ಯಾಸಕರ ಸಂಗತಿಯಾಗಿದೆ ಎಂದು ಅವರು ಹೇಳಿದರು.

More News

You cannot copy content of this page