ಬೆಂಗಳೂರು: ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಹೆಚ್ ಡಿ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಲಾಗಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈ ಸಂಬಂಧ ಇಂದು ಬಿರುಸಿನ ವಾದ ಪ್ರತಿವಾದ ನಡೆಯಿತು.
ರೇವಣ್ಣ ಪರ ಹಿರಿಯ ವಕೀಲ ಸಿ ವಿ ನಾಗೇಶ್ ವಾದ ಮಂಡಿಸಿದರು. ತಮ್ಮ ಕಕ್ಷಿದಾರನಿಗೆ ಜಾಮೀನು ಮಂಜೂರು ಮಾಡುವಂತೆ ನಾಗೇಶ್ ಪ್ರಬಲ ವಾದ ಮಂಡಿಸಿದರು.
ಇದಕ್ಕೆ ಎಸ್ಐಟಿ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿದರು. ಜಾಮೀನು ಯಾಕೆ ನೀಡಬಾರದು ಎಂದು ಆಕ್ಷೇಪಣೆ ಸಲ್ಲಿಸಿದರು. ವಾದ ಮಂಡನೆಗೆ ಹೆಚ್ಚಿನ ಕಾಲವಾಕಾಶ ನೀಡಬೇಕು ಎಂದು ಸರ್ಕಾರಿ ವರ ವಕೀಲರ ವಾದಕ್ಕೆ ನ್ಯಾಯಾಧೀಶರು ಮಣೆಹಾಕಲಿಲ್ಲ.
ಹೆಚ್ ಡಿ ರೇವಣ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ನಾಗೇಶ್ ಅವರು, ಇಡೀ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರ ಎದ್ದುಕಾಣುತ್ತಿದೆ ಎಂದು ಆರೋಪಿಸಿದರು.
ಜಾಮೀನು ಬಿಡುಗಡೆ ಕೋರಿ ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ನ್ಯಾಯಾಲಯದ ಗಮನ ಸೆಳೆದರು.
ಮಧ್ಯಾಹ್ನ 2.45ಕ್ಕೆ ಆರಂಭವಾದ ವಾದ ಪ್ರತಿವಾದ ಸಂಜೆ 5.30ರ ತನಕ ನಡೆಯಿತು. ಅಂತಿಮವಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರ ಬೆಳಿಗ್ಗೆ 11.30ಕ್ಕೆ ಮುಂದೂಡಿತು.
ಜಾಮೀನು ಅರ್ಜಿ ವಿಚಾರಣೆ ಮುಂದೂಡಿರುವ ಹಿನ್ನೆಲೆಯಲ್ಲಿ ರೇವಣ್ಣ ಸೋಮವಾರದ ತನಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆಯಬೇಕಾಗಿದೆ.
ಸೋಮವಾರದ ವಿಚಾರಣೆ ಬಳಿಕ ಅಂದೇ ತೀರ್ಪು ಬರುವ ನಿರೀಕ್ಷೆಯಿದೆ. ಅಲ್ಲಿಯ ತನಕ ರೇವಣ್ಣಗೆ ಜೈಲ್ಲೇ ಗತಿ
ಈ ಮಧ್ಯೆ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣಗೂ ವಿಚಾರಣೆಯ ಬಿಸಿ ಮುಟ್ಟಿದೆ. ಎಸ್ಐಟಿ ನೋಟಿಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
ಚುನಾವಣೆ ಅಬ್ಬರ ಮುಗಿದ ಬಳಿಕ ಇಡೀ ರಾಜ್ಯದ ಗಮನ ಇದೀಗ ಹಾಸನದತ್ತ ಹೊರಳಿದೆ. ಪೆನ್ ಡ್ರೈವ್ ಭಾರೀ ಸದ್ದು ಮಾಡುತ್ತಿದೆ