ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಎದುರುನೋಡುತ್ತಿದ್ದ ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆ ಬರೆದ 8.59 ಲಕ್ಷ ವಿದ್ಯಾರ್ಥಿಗಳ ಪೈಕಿ 6,31, 204 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಈ ಬಾರಿ ಕೂಡ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಪ್ರದರ್ಶಿಸಿದ್ದಾರೆ.
ಕಳೆದ ಬಾರಿಗೆ ಹೋಲಿಸಿದರೆ ಎಸ್‌ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಕುಸಿತ ಕಂಡು ಬಂದಿದೆ. ಈ ಬಾರಿ ನಕಲು ತಡೆಗಟ್ಟಲು ಪರೀಕ್ಷಾ ಮಂಡಳಿ ದಿಟ್ಟ ಕ್ರಮಗಳನ್ನು ಕೈಗೊಂಡ ಕಾರಣ ಪರೀಕ್ಷಾ ಫಲಿತಾಂಶದಲ್ಲಿ ಇಳಿಮುಖವಾಗಿದೆ.
ಕಳೆದ ಬಾರಿ ಮುಂಚೂಣಿಯಲ್ಲಿದ್ದ ಹಲವು ಜಿಲ್ಲೆಗಳು ಪರೀಕ್ಷಾ ಫಲಿತಾಂಶದಲ್ಲಿ ಈ ಬಾರಿ ನಿರೀಕ್ಷಿತ ಪ್ರದರ್ಶನ ತೋರಿಲ್ಲ.
ಎಂದಿನಂತೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿವೆ. ಉಡುಪಿ ಮೊದಲ ಸ್ಥಾನ, ದಕ್ಷಿಣ ಕನ್ನಡ ಎರಡನೆ ಸ್ಥಾನ ಪಡೆದಿದೆ. ಶಿವಮೊಗ್ಗ, ಕೊಡಗು ಮೂರನೆ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
625ರಲ್ಲಿ 625 ಅಂಕಗಳಿಸುವುದರ ಮೂಲಕ ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರ ಅವರು ರಾಜ್ಯದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿ ಅಂಕಿತಾ ಈ ಸಾಧನೆ ಮಾಡಿದ್ದಾರೆ.
ಜಿಲ್ಲೆಗಳ ಶೇಕಡವಾರು ಫಲಿತಾಂಶ ಇಂತಿದೆ
ಉಡುಪಿ – 94 ಶೇಕಡ
ದಕ್ಷಿಣ ಕನ್ನಡ- 92. 12 ಶೇಕಡ
ಶಿವಮೊಗ್ಗ-88.67 ಶೇಕಡ
ಕೊಡಗು-88.67 ಶೇಕಡ
ಉತ್ತರ ಕನ್ನಡ- 86.54 ಶೇಕಡ
ಹಾಸನ- 86.28 ಶೇಕಡ
ಮೈಸೂರು-85.5ಶೇ
ಶಿರಸಿ-84.64 ಶೇ
ಬೆಂಗಳೂರು ಗ್ರಾಮೀಣ-83.67 ಶೇ
ಚಿಕ್ಕಮಗಳೂರು-83.39 ಶೇ
ವಿಜಯಪುರ-79.82 ಶೇ
ಬೆಂಗಳೂರು ದಕ್ಷಿಣ-79 ಶೇ
ಬಾಗಲಕೋಟೆ-77.92 ಶೇ
ಬೆಂಗಳೂರು ಉತ್ತರ-77.09 ಶೇ
ಹಾವೇರಿ- 75.85 ಶೇ
ತುಮಕೂರು-75.16 ಶೇ
ಗದಗ-74.76 ಶೇ
ಚಿಕ್ಕಬಳ್ಳಾಪುರ- 73.61 ಶೇ
ಮಂಡ್ಯ-73.59ಶೇ
ಕೋಲಾರ-73.57 ಶೇ
ಚಿತ್ರದುರ್ಗ-72.85 ಶೇ
ಧಾರವಾಡ-72.67 ಶೇ
ದಾವಣಗೆರೆ-72.49 ಶೇ
ಚಾಮರಾಜನಗರ-71.59 ಶೇ
ಚಿಕ್ಕೋಡಿ-69.82 ಶೇ
ರಾಮನಗರ-69.53 ಶೇ
ವಿಜಯನಗರ-65.61 ಶೇ
ಬಳ್ಳಾರಿ-64.99 ಶೇ
ಬೆಳಗಾವಿ-64.93 ಶೇ
ಮಧುಗಿರಿ-62.44 ಶೇ
ರಾಯಚೂರು-61.2 ಶೇ
ಕೊಪ್ಪಳ-61.16 ಶೇ
ಬೀದರ್-57.52 ಶೇ
ಕಲಬುರಗಿ-53.04 ಶೇ
ಯಾದಗಿರಿ-50.59 ಶೇ
ಕಳೆದ ಬಾರಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿದ್ದ ಚಿತ್ರದುರ್ಗ ಈ ಬಾರಿ 21ನೇ ಸ್ಥಾನ ಪಡೆದಿದೆ. ವಿದ್ಯಾರ್ಥಿಗಳು ಫಲಿತಾಂಶಕ್ಕೆ ಅಧಿಕೃತ ವೆಬ್ ಸೈಟ್ ಮೊರೆ ಹೋಗುವಂತೆ ಎಸ್ಎಸ್ಎಲ್‌ಸಿ ಮಂಡಳಿ ಮನವಿಮಾಡಿದೆ