ಹುಬ್ಬಳ್ಳಿ: ಎಲ್ಲೆಡೆಯೂ ಬಸವ ಜಯಂತಿ ಸಂಭ್ರಮ ಮನೆ ಮಾಡಿದೆ. ಆದರೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವಿಭಿನ್ನ ಹಾಗೂ ವಿನೂತನ ರೀತಿಯಲ್ಲಿ ಬಸವ ಜಯಂತಿ ಆಚರಣೆ ಮಾಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.
ಹುಬ್ಬಳ್ಳಿಯ ಬಿಡನಾಳ ಗ್ರಾಮದಲ್ಲಿ ವಿಭಿನ್ನವಾಗಿ ಬಸವ ಜಯಂತಿ ಆಚರಿಸಿದ ಗ್ರಾಮಸ್ಥರು, ವಿನೂತನವಾಗಿ ಬಸವ ಜಯಂತಿ ಆಚರಿಸಿ ಹಲವರಿಗೆ ಮಾದರಿಯಾಗಿದ್ದಾರೆ. ಹೌದು.. ಹುಬ್ಬಳ್ಳಿಯ ತಾಲೂಕಿನ ಬಿಡನಾಳ ಗ್ರಾಮಸ್ಥರು, ಬಸವ ಜಯಂತಿ ನಿಮಿತ್ತವಾಗಿ 40 ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿದ್ದಾರೆ. 150 ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದ ಗ್ರಾಮಸ್ಥರು, ಸ್ವಾಮೀಜಿಗಳ ಮುಖಾಂತರ ಜನರಿಗೆ ಬಸವತತ್ವಗಳನ್ನ ತಿಳಿಸಿದ ಗ್ರಾಮದ ಹಿರಿಯರು ವಿನೂತನ ರೀತಿಯಲ್ಲಿ ಬಸವ ಜಯಂತಿ ಆಚರಣೆ ಮಾಡಿದ್ದಾರೆ.
ಇನ್ನೂ ಬಸವತತ್ವಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸ್ವಾಮೀಜಿಗಳು ಕರೆ ನೀಡಿದ್ದು, ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿದ್ದರೂ ಈ ಗ್ರಾಮದಲ್ಲಿ ಆಚರಣೆ ವಿಶಿಷ್ಟ ಹಾಗೂ ವಿನೂತನವಾಗಿರುವುದಂತೂ ಸತ್ಯ.