Search

CHITRADURGA: ಮದುವೆ ಊಟ ಮಾಡಿದ್ದ 100 ಕ್ಕೂ ಹೆಚ್ಚು ಜನ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಬೆಂಗಳೂರು: ರಾಜ್ಯದಲ್ಲಿ ಮದುವೆ ಸೀಸನ್‌ ಅಬ್ಬರದ ಮಧ್ಯೆ ಅನಾಹುತ ಕೂಡ ಹೆಚ್ಚಾಗಿದೆ. ಮದುವೆ ಊಟ ಮಾಡಿದ್ದ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಮದುವೆ ಊಟ ಮಾಡಿದವರಲ್ಲಿ
ವಾಂತಿ, ಭೇದಿ ಕಾಣಿಸಿಕೊಂಡಿದೆ.

ಫುಡ್ ಪಾಯಿಸನ್ ಆಗಿರುವ ಹಿನ್ನೆಲೆ‌ ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಚಿತ್ರದುರ್ಗ ತಾಲೂಕಿನ ಕಾಲ್ಗೆರೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಹೆಬ್ಬಾಳ ಗ್ರಾಮದಲ್ಲಿ ನಿನ್ನೆ ನಡೆದಿದ್ದ ಮದುವೆ ಸಮಾರಂಭದಲ್ಲಿ ಊಟ
ಮಾಡಿದ್ದ ಸಂಬಂಧಿಕರು ಅಸ್ವಸ್ಥರಾಗಿದ್ದಾರೆ.

ಕಾಲ್ಗೆರೆ ಗ್ರಾಮದ ಸಣ್ಣರುದ್ರಪ್ಪ ಎಂಬವರ ಮಗಳ ಮದುವೆ ಸಮಾರಂಭದಲ್ಲಿ ಈ ಘಟನೆ ಸಂಭವಿಸಿದೆ.

ಅಸ್ವಸ್ಥರನ್ನು ಭರಮಸಾಗರ, ದಾವಣಗೆರೆ ಸರಕಾರ ಆಸ್ಪತ್ರೆ ಸೇರಿಸಲಾಗಿದೆ. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ.

ಸದ್ಯಎಲ್ಲ ಅಸ್ವಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ
10 ದಿನಗಳ ಹಿಂದೆ ಮಂಡ್ಯದಲ್ಲಿ ಮದುವೆ ಸಮಾರಂಭದಲ್ಲಿ ಐಸ್ ಕ್ರೀಂ ತಿಂದ ನೂರಾರು ಮಂದಿ ಅಸ್ವಸ್ಥರಾಗಿದ್ದರು. ಮದುವೆ ಸಮಾರಂಭದಲ್ಲಿ ಆಹಾರ ಸಿದ್ದಪಡಿಸುವ ವೇಳೆ ಸೂಕ್ತ ಮುನ್ನೆಚ್ಚರಿಕೆ ವಹಿಸದಿರುವುದೇ ಇಂತಹ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಶುಚಿತ್ವ ಇಲ್ಲದ ಪ್ರದೇಶಗಳಲ್ಲಿ ಆಹಾರ ತಯಾರಿ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.
ಕುಡಿಯುವ ನೀರಿನ ಕೊರತೆ ಎದ್ದು ಕಾಣುತ್ತಿದ್ದು, ಇದು ಕೂಡ ಸಮಸ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ
ಬೆಂಗಳೂರಿನಂತಹ ನಗರಗಳಲ್ಲಿ ಊಟದ ಆರ್ಡರ್ ಪಡೆಯುವ ದೊಡ್ಡ ಗುತ್ತಿಗೆದಾರರು , ಸಬ್ ಕ್ರಾಂಟಕ್ಟ್ ನೀಡಿ ಆಹಾರ ಪೂರೈಸುವ ವ್ಯವಸ್ಥೆ ಇದೆ. ಆಹಾರ ಸಿದ್ದಪಡಿಸುವ ಪ್ರತಿ ಹಂತದಲ್ಲಿ ಎಚ್ಚರಿಕೆ ವಹಿಸದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ ಎನ್ನುವುದು ಸಾರ್ವಜನಿಕರ ಮಾತು

More News

You cannot copy content of this page