ಹೈದರಾಬಾದ್: ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದಿರುವ ಬಿಜೆಪಿ ಹೈದರಾಬಾದ್ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮತದಾರರ ಮೇಲೆ ಒತ್ತಡ ಹೇರಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜನಪ್ರತಿನಿಧಿ ಕಾಯ್ದೆ ಹಾಗೂ ಇನ್ನಿತರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತೆಲಂಗಾಣದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಮತಗಟ್ಟೆಗೆ ಪರಿಶೀಲನೆಗೆ ತೆರಳಿದ್ದ ಮಾಧವಿ ಲತಾ, ಒಂದು ನಿರ್ದಿಷ್ಟ ವರ್ಗದ ಮತದಾರರಲ್ಲಿ ತಮ್ಮ ಗುರುತು ಬಹಿರಂಗಪಡಿಸುವಂತೆ ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿದೆ.

ಮಾಧವಿ ಲತಾ ಮತಗಟ್ಟೆಗೆ ಭೇಟಿ ನೀಡಿ ಮತದಾರರನ್ನು ಪರೀಕ್ಷಿಸುತ್ತಿದ್ದ ದೃಶ್ಯ ವೈರಲ್ ಗಿತ್ತು. ಇದೇ ವೇಳೆ ಕೆಲವು ಮತದಾರರು ಅಭ್ಯರ್ಥಿ ಮಾಧವಿ ಲತಾ ವರ್ತನೆಯನ್ನು ಖಂಡಿಸಿದ್ದರು.
ಈ ಆರೋಪ- ಪ್ರತ್ಯಾರೋಪಗಳ ಮಧ್ಯೆ ಹೈದರಾಬಾದ್‌ನ ಮಲಕ್‌ಪೇಟ್ ಪೊಲೀಸ್ ಠಾಣೆಯಲ್ಲಿ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬೂತ್‌ನಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗಳು ಮತದಾರರ ಗುರುತು ದೃಢಪಡಿಸದೆ ಮತದಾನಕ್ಕೆ ಅವಕಾಶ ನೀಡುತ್ತಿದ್ದರು. ಇದನ್ನು ನಾನು ಪ್ರಶ್ನಿಸಿದ್ದೆ. ಪೊಲೀಸ್ ಅಧಿಕಾರಿಗಳು ಇದು ನಮ್ಮ ಕೆಲಸವಲ್ಲ ಎಂದು ಹೇಳಿದ್ದರು. ಶೇಕಡ 90 ಬೂತ್‌ಗಳಲ್ಲಿ ಇದೇ ರೀತಿಯ ಘಟನೆ ನಡೆದಿದೆ ಎಂದು ಮಾಧವಿ ಲತಾ ಆರೋಪಿಸಿದ್ದಾರೆ.

ಇನ್ನೊಂದೆಡೆ ಮತದಾನದ ವೇಳೆ ಬಿಜೆಪಿ ಕಾರ್ಯಕರ್ತನ್ನು ಪೊಲೀಸ್ ಅಧಿಕಾರಿಗಳು ಅಕ್ರಮವಾಗಿ ಬಂಧಿಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದಿದೆ. ಸುದ್ದಿ ತಿಳಿದೊಡನೆ ಬಿಜೆಪಿ ನಾಯಕರ ಜೊತೆ ಮಾಧವಿ ಲತಾ ಪೊಲೀಸ್ ಠಾಣೆಗೆ ತೆರಳಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಅಮಾಯಕ ಕಾರ್ಯಕರ್ತರನ್ನು ಬಿಡುಗಡೆಮಾಡುವಂತೆ ಪೊಲೀಸ್ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.
ಇತ್ತೀಚೆಗೆ ರಾಮನವವಿ ಮೆರವಣಿಗೆ ವೇಳೆ ಮಾಧವಿ ಲತಾ ಅವರ ಚಿತ್ರ ವೈರಲ್ ಆಗಿತ್ತು. ಬಳಿಕ ಸ್ಪಷ್ಟನೆ ನೀಡಿದ್ದ ಮಾಧವಿ ಲತಾ, ತನ್ನ ಚಿತ್ರ ತಿರುಚಲಾಗಿದೆ ಎಂದು ಆರೋಪಿಸಿದ್ದರು.
ವೃತ್ತಿಯಲ್ಲಿ ವೈದ್ಯೆಯಾಗಿರುವ ಮಾಧವಿ ಲತಾ, ಪ್ರಬಲ ಹಿಂದುತ್ವದ ಪ್ರತಿಪಾದಕರಾಗಿದ್ದಾರೆ. ಚುನಾವಣೆ ವೇಳೆ 200 ಕೋಟಿ ರೂ. ಸಂಪತ್ತನ್ನು ಅವರು ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page