ಬೆಂಗಳೂರು: ಸೋಮವಾರ ರಾತ್ರಿ ಬೆಂಗಳೂರು ನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಮಳೆಯಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ. ನಗರದ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ರಾತ್ರಿ 10.30ಕ್ಕೆ ಆರಂಭವಾದ ಮಳೆ ಮಧ್ಯರಾತ್ರಿ 12 ಗಂಟೆ ತನಕ ಅಬ್ಬರಿಸಿದೆ. ಪರಿಣಾಮ ನಗರದ ಹಲವು ಪ್ರದೇಶಗಳಲ್ಲಿ ಪ್ರಹಾವ ಪರಿಸ್ಥಿತಿ ತಲೆದೋರಿದೆ.
ಕೆ.ಆರ್.ಮಾರ್ಕೆಟ್ ,ಎಂ .ಜಿ .ರೋಡ್ ,ಟೌನ್ ಹಾಲ್ , ನೃಪತುಂಗ ರಸ್ತೆ , ಕಬ್ಬನ್ ಪಾರ್ಕ್ ಪ್ರದೇಶದಲ್ಲಿ ಭಾರೀ ಮಳೆ ಸುರಿದಿದೆ.
ಮಳೆಯಿಂದ ನೃಪತುಂಗ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ರಸ್ತೆಯಲ್ಲಿ ಮರದ ಕೊಂಬೆ ಬಿದ್ದ ಪರಿಣಾಮ ರಾತ್ರಿ ಹೊತ್ತು ಟ್ರಾಪಿಕ್ ಜಾಮ್ ಸೃಷ್ಟಿಯಾಗಿತ್ತು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ ಎದುರಿಗೆ ಈ ಘಟನೆ ಸಂಭವಿಸಿದೆ.
ರಾಜ್ಯದಲ್ಲಿ ಹಲವೆಡೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ಬಿದ್ದ ಮಳೆಯ ಪ್ರಮಾಣ ಇಂತಿದೆ
ಬೆಂಗಳೂರು ನಗರ, ಗ್ರಾಮಾಂತರ : 99.5 ಮಿಮೀ
ಮಂಡ್ಯ: 129 ಮಿ.ಮೀ
ರಾಮನಗರ: 113.5 ಮಿ.ಮೀ
ಕೋಲಾರ: 85.5 ಮಿ.ಮೀ
ತುಮಕೂರು: 82 ಮಿ.ಮೀ.
ಮೈಸೂರು: 74.5 ಮಿ.ಮೀ.
ದಕ್ಷಿಣ ಕನ್ನಡ: 56 ಮಿ.ಮೀ.
ಚಿಕ್ಕಮಗಳೂರು: 54.5 ಮಿ.ಮೀ
ಚಾಮರಾಜನಗರ: 52 ಮಿ.ಮೀ.
ಬೆಳಗಾವಿ: 47.5 ಮಿ.ಮೀ.
ಕೊಡಗು: 45.5 ಮಿ.ಮೀ.
ಚಿಕ್ಕಬಳ್ಳಾಪುರ: 44.5 ಮಿ.ಮೀ.
ಶಿವಮೊಗ್ಗ: 24 ಮಿ.ಮೀ.
ಮಂಡ್ಯ ಜಿಲ್ಲೆಯ ತಲಗವಾಡಿ: 129 ಮಿ.ಮೀ, ಹೊಸಹಳ್ಳಿ: 123 ಮಿ.ಮೀ, ಹರಳಹಳ್ಳಿ: 122.5 ಮಿ.ಮೀ, ನೆಲಮಾಕನಹಳ್ಳಿ: 121 ಮಿ.ಮೀ, ಕ್ಯಾತಘಟ್ಟ: 117.5 ಮಿ.ಮೀ ಅತೀ ಹೆಚ್ಚು ಮಳೆಯಾದ ಪ್ರದೇಶಗಳಾಗಿವೆ
ರಾತ್ರಿ ಸುರಿದ ಮಳೆ ಪರಿಣಾಮ ಬೆಳ್ಳಂದೂರಿನಲ್ಲಿ ರಸ್ತೆ ಮೇಲೆ ಮಳೆ ನೀರು ನಿಂತಿತ್ತು.
ಬೆಳ್ಳಂದೂರಿನ ಮುಖ್ಯರಸ್ತೆಯಲ್ಲಿಯೇ ನಿಂತ ಮಳೆ ನೀರಿನಿಂದಾಗಿ ಟ್ರಾಪಿಕ್ ಜಾಮ್ ಸೃಷ್ಟಿಯಾಗಿತ್ತು.ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಹಲವು ರಸ್ತೆಗಳು ಜಲಾವೃತಗೊಂಡಿದ್ದವು.ಎಲೆಕ್ಟ್ರಾನಿಕ್ ಸಿಟಿಯ ನಿಲಾದ್ರಿ ಬಡಾವಣೆ ರಸ್ತೆ ಸಂಪೂರ್ಣ ಜಲಾವೃತ್ತಗೊಂಡಿತ್ತು.
ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯೂ ಜಲಾವೃತವಾಗಿತ್ತು.
ಇದೇ ವೇಳೆ ಪ್ರವಾಹ ರಿಸ್ಥಿತಿ ಎದುರಿಸಲು ಬಿಬಿಎಂಪಿ ಕಂಟ್ರೋಲ್ ರೂಂ ಆರಂಭಿಸಿದೆ. ಕಮಾಂಡ್ ಸೆಂಟರ್ ಓಪನ್ ಮಾಡಿದೆ. ನಗರದ 124 ಸೂಕ್ಷ್ಮ ಕಡೆಗಳಲ್ಲಿ ದೃಶ್ಯಗಳನ್ನು ವೀಕ್ಷಿಸುವ ವ್ಯವಸ್ಥೆ ಇಲ್ಲಿದೆ
ರಾಜಕಾಲುವೆ ನೀರಿನ ಮಟ್ಟ ಕೂತಲ್ಲೇ ಅಳೆಯೋ ಸೌಕರ್ಯವನ್ನು ಕೂಡ ಮಾಡಲಾಗಿದೆ. ರಾಜಕಾಲುವೆ ಸೆನ್ಸಾರ್ ಮೂಲಕ ನೀರಿನ ಮಟ್ಟ ದಾಖಲುಮಾಡಲಾಗುತ್ತಿದೆ. ಅಪಾಯದ ಮಟ್ಟ ಮೀರುತ್ತಿದ್ದಂತೆ ಕಮಾಂಡ್ ಸೆಂಟರ್ ಗೆ ಸಿಗುತ್ತೆ ಸೈರನ್ ಅಲರ್ಟ್ವ್ ಆಗುತ್ತದೆ.ಚುನಾವಣಾ ಕಾರ್ಯದಲ್ಲಿ ಮಗ್ನರಾಗಿದ್ದ ಬಿಬಿಎಂಪಿ ಸಿಬ್ಬಂದಿ ಮಳೆಗಾಲದ ಪರಿಸ್ಥಿತಿ ಎದುರಿಸಲು ಯಾವುದೇ ಪೂರ್ವ ಸಿದ್ದತೆ ಮಾಡಿಕೊಂಡಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದೀಗ ಮಕ್ಕಳಿಗೆ ಬೇಸಿಗೆ ರಜೆ ಸಿಕ್ಕಿರುವ ಕಾರಣ ಹೆಚ್ಚಿನ ಅಧಿಕಾರಿಗಳು ಕುಟುಂಬ ಸಮೇತರಾಗಿ ಪ್ರವಾಸ ಹೊರಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.