ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಗಾಳಿ ಬೀಸಿದ್ದು, ಬೃಹತ್ ಗಾತ್ರದ ಮರವೊಂದು ಬೈಕ್ ಗಳ ಮೇಲೆ ಬಿದ್ದ ಪರಿಣಾಮ ಬೈಕ್ ಗಳು ಜಖಂಗೊಂಡಿದ್ದು, ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಹೌದು… ಹುಬ್ಬಳ್ಳಿಯ ಹೆಗ್ಗೇರಿಯಲ್ಲಿ ಘಟನೆ ನಡೆದಿದ್ದು, ಧಾರಾಕಾರವಾಗಿ ಸುರಿದ ಮಳೆಗೆ ಬೃಹತ್ ಮರ ನೆಲಕ್ಕೆ ಉರುಳಿದ್ದು, ಹತ್ತಕ್ಕೂ ಹೆಚ್ಚು ಬೈಕ್ ಗಳ ಮೇಲೆ ಮರ ಬಿದ್ದಿದ್ದು, ಬಹುತೇಕ ಬೈಕ್ ಸಂಪೂರ್ಣವಾಗಿ ಜಖಂ ಗೊಂಡಿವೆ. ಈ ನಿಟ್ಟಿನಲ್ಲಿ ದೊಡ್ಡ ಅನಾಹುತ ಸ್ವಲ್ಪದರಲ್ಲಿ ತಪ್ಪಿದೆ.