ಹುಬ್ಬಳ್ಳಿ; ಬಿಸಿಲಿನಲ್ಲಿ ತಾಪಮಾನಕ್ಕೆ ಬೇಸತ್ತಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ಗುಡುಗು ಹಾಗೂ ಬಾರಿ ಪ್ರಮಾಣದ ಗಾಳಿ ಸಹಿತ ಮಳೆಯಾಗಿದೆ.
ಹೌದು.. ಬಿಸಿಲಿನ ತಾಪವನ್ನು ಅನುಭವಿಸಿದ್ದ ಜನರಿಗೆ ಮಳೆರಾಯನ ಅಬ್ಬರದಿಂದ ಖುಷಿಯಾಗಿದೆ. ಅದರೇ ಗಾಳಿ ಸಹಿತ ಮಳೆಯಿಂದ ಹುಬ್ಬಳ್ಳಿಯ ಜನರು ಆತಂಕಗೊಂಡಿದ್ದಾರೆ. ಏಕಾಏಕಿ ವರುಣನ ಅಬ್ಬರ ಜೋರಾಗಿದ್ದು, ಬಿಸಿಲಿನ ತಾಪದ ಬೆನ್ನಲ್ಲೇ ಮಳೆರಾಯನ ಅಬ್ಬರ ಹುಬ್ಬಳ್ಳಿಯ ಜನರನ್ನು ತಬ್ಬಿಬ್ಬು ಮಾಡಿದೆ.
ಇನ್ನೂ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬಹುತೇಕ ಕಡೆಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಮೊನ್ನೆಯಷ್ಟೇ ಜನರಲ್ಲಿ ಏಕಾಏಕಿ ಆತಂಕ ಸೃಷ್ಟಿಸಿದ್ದ ವರುಣ ಇಂದೂ ಕೂಡ ತನ್ನ ವರಸೆಯನ್ನು ಮುಂದುವರಿಸಿದ್ದಾನೆ.