Search

DOUBLE ISMART TEASER: ಡೈನಾಮಿಕ್ ಸ್ಟಾರ್ ರಾಮ್‌ ಹಾಗೂ ಸಂಜಯ್ ದತ್ ಜುಗಲ್ಬಂದಿ ‘ಡಬಲ್ ಇಸ್ಮಾರ್ಟ್’ ಟೀಸರ್ ರಿಲೀಸ್

ಬೆಂಗಳೂರು: ಡ್ಯಾಷಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ಹಾಗೂ ಉಸ್ತಾದ್ ರಾಮ್ ಪೋತಿನೇನಿ ಕಾಂಬಿನೇಷನ್ ನ ಬಹುನಿರೀಕ್ಷಿತ ಸಿನಿಮಾ ‘ಡಬಲ್ ಇಸ್ಮಾರ್ಟ್’. ಇಸ್ಮಾರ್ಟ್ ಶಂಕರ್ ಚಿತ್ರದ ಸೀಕ್ವೆಲ್ ಆಗಿರುವ ‘ಡಬಲ್ ಇಸ್ಮಾರ್ಟ್’ ಸಿನಿಮಾದ ಟೀಸರ್ ಇಂದು ಡೈನಾಮಿಕ್ ಸ್ಟಾರ್ ರಾಮ್ ಜನ್ಮದಿನಕ್ಕೆ ಬಿಡುಗಡೆ ಮಾಡಲಾಗಿದೆ. ಭರ್ಜರಿ ಆಕ್ಷನ್ ಮೂಲಕ ರಾಮ್ ಅಬ್ಬರಿಸಿದ್ದಾರೆ.

ಮಾಸ್ ಮತ್ತು ಆಕ್ಷನ್-ಪ್ಯಾಕ್ಡ್ ಟೀಸರ್ ನಲ್ಲಿ ರಾಮ್ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಾವ್ಯಾ ಥಾಪರ್ ನಾಯಕಿಯಾಗಿ ನಟಿಸಿದ್ದು, ಸಂಜಯ್ ದತ್ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. 1.26 ಸೆಕೆಂಡ್ ಇರುವ ಟೀಸರ್ ನಲ್ಲಿ ರಾಮ್ ಪೋತಿನೇನಿ ಹಾಗೂ ಸಂಜು ಬಾಬು ಜುಗಲ್ಬಂದಿ ನೋಡುಗರಿಗೆ ಕಿಕ್ ಕೊಡ್ತಿದೆ.

ಡಬಲ್ ಆಕ್ಷನ್, ಡಬಲ್ ಎನರ್ಜಿ ಮತ್ತು ಡಬಲ್ ಫನ್‌ ಕೊಡುವ ‘ಡಬಲ್ ಇಸ್ಮಾರ್ಟ್’ ಟೀಸರ್ ಕ್ಲೈಮ್ಯಾಕ್ಸ್ ಸೀನ್ಸ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದೆ. ಮಣಿ ಶರ್ಮಾ ಸಂಗೀತ ಚಿತ್ರಕ್ಕಿದೆ. ಕ್ರೇಜಿ ಪ್ಯಾನ್ ಇಂಡಿಯನ್ ಪ್ರಾಜೆಕ್ಟ್ ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ ಬ್ಯಾನರ್ ನಡಿ ಪೂರಿ ಜಗನ್ನಾಥ್, ಚಾರ್ಮಿ ಕೌರ್ ನಿರ್ಮಾಣದಲ್ಲಿ ಚಿತ್ರ ಅದ್ಧೂರಿಯಾಗಿ ಮೂಡಿಬರುತ್ತಿದೆ

More News

You cannot copy content of this page