ಹುಬ್ಬಳ್ಳಿ: ನೇಹಾ ಹತ್ಯೆ ನಡೆದು ಬಹಳ ದಿನಗಳು ಕಳೆದಿಲ್ಲ. ಮತ್ತೊಂದು ಇಂತಹ ಪ್ರಕರಣ ನಡೆದಿದೆ.
ಇದ್ರಲ್ಲಿ ಪೊಲೀಸ್ ಹಾಗೂ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು.
ಕಿಮ್ಸ್ ಶವಗಾರದಲ್ಲಿರುವ ಅಂಜಲಿ ಮೃತದೇಹ ದರ್ಶನ ಬಳಿಕ ಮಾತನಾಡಿದ ಅವರು,
ಗೃಹ ಇಲಾಖೆ ಕೇವಲ ಟ್ರಾನ್ಸ್ ಪರ್ ವಿಚಾರದಲ್ಲಿ ಬ್ಯುಸಿಯಾಗಿದೆ.
ಇಂತಹ ಘಟಗೆಗಳತ್ತ ಸರ್ಕಾರ ಗಮನ ಹರಿಸುತ್ತಿಲ್ಲ.
ನೇರವಾಗಿ ಈ ಹತ್ಯೆಗೆ ಸರ್ಕಾರ ವೈಫಲ್ಯವೇ ಕಾರಣ. ಹತ್ಯೆ ಮಾಡಿರುವ ಆರೋಪಿ ಒಂದು ವಾರದ ಹಿಂದೇನೆ ನೇಹಾ ಹತ್ಯೆ ರೀತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದನ್ನ ಬೆಂಡಿಗೇರಿ ಪೊಲೀಸರ ಹತ್ತಿರ ವಿಷಯ ಗಮನಕ್ಕೆ ತರಲಾಗಿತ್ತು.
ಆದ್ರೂ ಬೆಂಡಿಗೇರಿ ಪೊಲೀಸರ ನಿರ್ಲಕ್ಷ್ಯದಿಂದ ಮತ್ತೊಂದು ಜೀವ ಬಲಿಯಾಗಿದೆ. ಬೆದರಿಕೆ ಹಾಕಿದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ಪೊಲೀಸರು ಕೈಗೊಂಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಈ ಕುಟುಂಬದ ಅತ್ಯಂತ ಬಡ ಕುಟುಂಬವಿದೆ. ಬೇರೆಯವರ ಮನೆಯ ಪಾತ್ರೆ ತೊಳೆದು ಅವರ ಅಜ್ಜಿ ಹೆಣ್ಣುಮಕ್ಕಳನ್ನ ಓದಿಸುತ್ತಿದ್ದಾರೆ.
ಸದ್ಯ ಸರ್ಕಾರ ಆ ಕುಟುಂಬಕ್ಕೆ ಪರಿಹಾರ ಒದಗಿಸಿಕೊಡಬೇಕು.
ಯಾವ ಹತ್ಯೆಯನ್ನ ಕೂಡ ಬಿಜೆಪಿ ಧರ್ಮವನ್ನ ಬೆರೆಸೋದಿಲ್ಲ.
ಇಂತಹ ಹತ್ಯೆಗಳನ್ನ ನಾವು ಖಂಡಿಸುತ್ತೇವೆ. ಹುಬ್ಬಳ್ಳಿಯಲ್ಲಿ ಇದು ಎರಡನೇ ಘಟನೆ. ಸರ್ಕಾರ ಇನ್ನಾದ್ರೂ ಎಚ್ಚೆತ್ತುಕೊಂಡಿ ಮುಂದೆ ಯಾವ ಘಟನೆಯಾಗದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿ ಹತ್ಯೆ: ಸರ್ಕಾರದ ಸಡಿಲ ನೀತಿಯೇ ಕಾರಣ – ಪ್ರಹ್ಲಾದ್ ಜೋಶಿ..
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಮತ್ತೊಂದು ಯುವತಿ ಹತ್ಯೆಯೇ ನಿದರ್ಶನ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ಯುವತಿ ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವಕನೊಬ್ಬ ಆಕೆಯನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಸರ್ಕಾರದ ಸಡಿಲ ನಿಲುವುಗಳೇ ಇದಕ್ಕೆಲ್ಲ ಕಾರಣ ಎಂದು ಸಚಿವ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮತ್ತೆ ಭಗ್ನ ಪ್ರೇಮಿಯೊಬ್ಬ ಅಂಜಲಿ ಎಂಬ ಯುವತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದು, ನೇಹಾ ಪ್ರಕರಣದಲ್ಲಿ ಸರ್ಕಾರ ತೋರಿದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಪದೇಪದೆ ಇಂತಹ ಪ್ರಕರಣ ಘಟಿಸುತ್ತಿದ್ದು, ರಾಜ್ಯ ಸರ್ಕಾರ ಕೂಡಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಚಿವ ಜೋಶಿ ಆಗ್ರಹಿಸಿದ್ದಾರೆ.
ಅಂಜಲಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿರುವ ಸಚಿವರು, ಕುಟುಂಬಕ್ಕೆ ಭಗವಂತ ನೋವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.