ಹುಬ್ಬಳ್ಳಿ: ನನ್ನ ಮಗಳು ನೇಹಾ ಹತ್ಯೆ ಆಗಿ ಇನ್ನೂ ತಿಂಗಳು ಕಳೆದಿಲ್ಲ
ಸದ್ಯ ನನ್ನ ವಾರ್ಡ್ ನಲ್ಲಿ ಈ ರೀತಿ ಮತ್ತೆ ಘಟನೆ ಆಗಿದೆ ನನ್ನ ವಾರ್ಡ್ ನಲ್ಲಿ ಇಂತಹ ಘಟನೆಯಾಗಿರುವದನ್ನ ನಾನು ಖಂಡಿಸುತ್ತೇನೆ ಎಂದು ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಹೇಳಿದರು.
ಹುಬ್ಬಳ್ಳಿಯ ಕಿಮ್ಸ್ ಶವಗಾರದ ಬಳಿ ಮಾತನಾಡಿದ ಅವರು, ನನ್ನ ಮಗಳು ಹತ್ಯೆಯಾದಾಗ ಹೇಳಿದ್ದೆ ಇನ್ನೊಂದು ಈ ತರ ಘಟನೆಯಾಗಬಾರದು ಅಂತ . ಆದ್ರೂ ಇಂತಹ ಘಟನೆ ನಡೆದಿದೆ ಇದಕ್ಕೆ ಇಲ್ಲಿನ ಪೊಲೀಸ್ ಕಮೀಷನರ್ ಕಾರಣ. ಅವರನ್ನ ಟ್ರಾನ್ಪಪರ್ ಮಾಡಿ ಅಂತ ಅವಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದೆ.
ಅವರು ಇಲ್ಲಿ ಇದ್ದು ಏನು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಸರಿಯಾಗಿ ಕೆಲಸ ಮಾಡಲು ಇಷ್ಟ ಇಲ್ಲದಿದ್ದರೇ ರಾಜೀನಾಮೆ ಕೊಟ್ಟು ಹೋಗಿ ಎಂದರು.
ಅಂಜಲಿ ಕೂಡ ನನ್ನ ಮಗಳು ಇದ್ದಹಾಗೇ . ನನ್ನ ಮಗಳು ನೇಹಾಳ ಹತ್ಯೆ ವಿಚಾರವಾಗಿ ಯಾವ ರೀತಿ ಹೋರಾಟ ನಡೆದಿತ್ತು. ಅದೇ ರೀತಿ ಇವಳ ಹತ್ಯೆಯನ್ನ ಖಂಡಿಸಿ ಹೋರಾಟ ಮಾಡುತ್ತೇವೆ.
ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಎಲ್ಲ ಕಡೆ ಯುವಕರು ಗಾಂಜಾ ಅಫೀಮು ಅಂತ ದಾರಿ ತಪ್ಪುತಿದ್ದಾರೆ. ಹೀಗಾಗಿ ಹುಬ್ಬಳ್ಳಿ ಪೊಲೀಸರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ . ಇದ್ರಿಂದ ಇಂತಹ ಕೊಲೆಗಳು ನಡೆಯುತ್ತಿವೆ ಎಂದು ಸರ್ಕಾರ ಹಾಗೂ ಹುಬ್ಬಳ್ಳಿ ಪೊಲೀಸರ ವಿರುದ್ದ ಆಕ್ರೋಶ ಹೊರಹಾಕಿದರು.