ANJALI AMBIGERA MURDER ACCUSED ARREST: ಹುಬ್ಬಳ್ಳಿಯ ಅಂಜಲಿ ಹತ್ಯೆ ಆರೋಪಿ ಗಿರೀಶ್ ಕೊನೆಗೂ ಬಂಧನ, ರೈಲಿನಲ್ಲಿ ಇನ್ನೊಬ್ಬ ಮಹಿಳೆಗೂ ಇರಿದ ಆರೋಪಿ

ಹುಬ್ಬಳ್ಳಿ: ರಾಜ್ಯವನ್ನು ಬೆಚ್ಚಿ ಬೀಳಿಸಿದ ಹುಬ್ಬಳ್ಳಿಯ ಅಂಜಲಿ ಹತ್ಯೆ ಪ್ರಕರಣದ ಆರೋಪಿ ಗಿರೀಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೈಸೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವೇಳೆ ರೈಲಿನಲ್ಲಿ ಸಹ ಪ್ರಯಾಣಿಕರ ಜೊತೆ ಕಿರಿಕ್ ಮಾಡಿದ್ದ ಗಿರೀಶ್, ರೈಲಿನಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಳಿಕ ಗಿರೀಶ್‌ನನ್ನು ದಾವಣಗೆೆರೆ ಸಮೀಪದ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ರೈಲಿನಲ್ಲಿ ಮಹಿಳೆಯೊಬ್ಬರ ಜೊತೆ ಆರೋಪಿ ಗಿರೀಶ್ ಕಿರಿಕ್ ಮಾಡಿದ್ದ ವೇಳೆ ಮಹಿಳೆಯ ಪತಿ ಹಾಗೂ ಇತರ ಪ್ರಯಾಣಿಕರು ಸೇರಿ ಥಳಿಸಿದ್ದಾರೆ ಎಂದು ವರದಿಯಾಗಿದೆ. ಮಾಯಕೊಂಡ ಬಳಿ ಈ ಘಟನೆ ಸಂಭವಿಸಿದೆ. ಈ ವೇಳೆ ಮಹಿಳೆಗೆ ಆರೋಪಿ ಗಿರೀಶ್ ಚಾಕುವಿನಿಂದ ಇರಿದಿದ್ದಾನೆ ಎಂದು ಕೂಡ ವರದಿಯಾಗಿದೆ.

ಆರೋಪಿ ಗಿರೀಶ್‌ ಸ್ಥಿತಿ ಗಂಭೀರ
ರೈಲಿನಿಂದ ಜಿಗಿದು ರಕ್ಷಿಸಿಕೊಳ್ಳಲು ಯತ್ನಿಸಿದ್ದ ಗಿರೀಶ್ ಆರೋಗ್ಯ ಸ್ಥಿತಿ ಇದೀಗ ಗಂಭೀರವಾಗಿದೆ. ಸದ್ಯ ಟ್ರೋಮ ಸ್ಥಿತಿಯಲ್ಲಿ ಇದ್ದಾನೆ. ತಲೆ ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್, ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಗಿರೀಶ್ ವಿರುದ್ದ ಹಲವು ಕ್ರಿಮಿನಲ್ ಪ್ರಕರಣಗಳು ಈಗಾಗಲೇ ದಾಖಲಾಗಿವೆ ಎಂದು ಕೂಡ ಅವರು ತಿಳಿಸಿದ್ದಾರೆ.
ಬೈಕ್ ಕಳ್ಳತನಕ್ಕೆ ಸಂಬಂದಸಿದಂತೆ 4 ಪ್ರಕಾರಣಗಳು ಈಗಾಗಲೇ ದಾಖಲಾಗಿದೆ . ಇದೀಗ ಗಿರೀಶ್ ಪ್ರಜ್ಞೆ ತಪ್ಪಿದ್ದು, ಪ್ರಜ್ಞೆ ಮರುಕಳಿಸಿದ ಬಳಿಕ ಸಮಗ್ರ ಹೇಳಿಕೆ ದಾಖಲಿಸುವುದಾಗಿ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಗಿರೀಶ್ ಚಾಕುವಿನಿಂದ ಹಲ್ಲೆ ನಡೆಸಿದ್ದ ಮಹಿಳೆ ಇದೀಗ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಗಿರೀಶ್ ಎನ್‌ಕೌಂಟರ್ ಮಾಡಿ-ಅಂಜಲಿ ಸಹೋದರಿ ಆಗ್ರಹ
ಅಂಜಲಿ ಹತ್ಯೆ ಪ್ರಕರಣದ ಆರೋಪಿ ಗಿರೀಶ್‌ ಬಂಧನ ಸಂಬಂಧ ಸಹೋದರಿ ಯಶೋಧಾ ಪ್ರತಿಕ್ರಿಯೆ ನೀಡಿದ್ದಾರೆ. ಗಿರೀಶ್‌ನನ್ನು ಕೇವಲ ಬಂಧಿಸಿದರೆ ಮಾತ್ರ ಸಾಲದು. ಆರೋಪಿಯನ್ನು ಎನ್‌ಕೌಂಟರ್ ಮಾಡಬೇಕು ಎಂದು ಸಹೋದರಿ ಯಶೋಧಾ ಆಗ್ರಹಿಸಿದ್ದಾರೆ. ನನ್ನ ಅಕ್ಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆರೋಪಿಗೂ ಅದೇ ರೀತಿಯ ಶಿಕ್ಷೆ ನೀಡಬೇಕು ಎಂದು ಯಶೋಧಾ ಆಗ್ರಹಿಸಿದ್ದಾರೆ. ಆರೋಪಿಯನ್ನು ನಮ್ಮ ಕೈಗೆ ಕೊಡಿ, ನಾವು ಆರೋಪಿಗೆ ಶಿಕ್ಷೆ ನೀಡುತ್ತೇವೆ ಎಂದು ಯಶೋಧಾ ಆಕ್ರೋಶ ಭರಿತರಾಗಿ ಮಾತನ್ನಾಡಿದ್ದಾರೆ. ನಮ್ಮ ಅಕ್ಕ ಗಿರೀಶ್‌ನನ್ನು ಪ್ರೀತಿಸುತ್ತಿಲ್ಲ. ಹೀಗಿರುವಾಗ ಮದುವೆಯ ಪ್ರಶ್ನೆ ಎಲ್ಲಿಂದ ಬರುತ್ತದೆ ಎಂದು ಯಶೋಧಾ ಪ್ರಶ್ನಿಸಿದ್ದಾರೆ. ಮದುವೆಯಾಗಿದ್ದರೆ ಕೊರಳಿನಲ್ಲಿ ತಾಳಿ ಇರಬೇಕಿತ್ತಲ್ಲವೇ ಎಂದು ಯಶೋಧಾ ಪ್ರಶ್ನಿಸಿದ್ದಾರೆ.
ಈ ಮಧ್ಯೆ ಹುಬ್ಬಳ್ಳಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿರುವ ಬಿಜೆಪಿ. ಇಂದು ಕೂಡ ಪ್ರತಿಭಟನೆೆಗೆ ಸಿದ್ಧತೆ ನಡೆಸಿದೆ.

More News

You cannot copy content of this page