Search

HD REVANNA CASE: ಸೋಮವಾರದ ತನಕ ರೇವಣ್ಣಗೆ ಮಧ್ಯಂತರ ಜಾಮೀನು, ಅಲ್ಲಿಯ ತನಕ ರೇವಣ್ಣ ನಿರಾಳ

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಮಾಜಿ ಸಚಿವ , ಶಾಸಕ ಹೆಚ್ ಡಿ ರೇವಣ್ಣಗೆ ತಾತ್ಕಾಲಿಕ ರಿಲೀಫ್ ದೊರೆತಿದೆ. ಗುರುವಾರ ಒಂದು ದಿನದ ಅವಧಿಗೆ ಜಾಮೀನು ಮಂಜೂರು ಮಾಡಿದ್ದ ಕೋರ್ಟ್ ಇದೀಗ ಜಾಮೀನು ಅವಧಿಯನ್ನು ಸೋಮವಾರದ ತನಕ ಮುಂದೂಡಿದೆ.
ಸುದೀರ್ಘ ಅವಧಿಗೆ ನಡೆದ ವಾದ ವಿವಾದದ ಬಳಿಕ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ. ಮೇ 20ರಂದು ಈ ಸಂಬಂಧ ತೀರ್ಪು ನೀಡುವುದಾಗಿಯೂ ಅಲ್ಲಿಯ ತನಕ ಮಧ್ಯಂತರ ಜಾಮೀನು ಮುಂದುವರಿಯಲಿದೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.


ರೇವಣ್ಣ ಜಾಮೀನಿಗೆ ಎಸ್ಐಟಿ ವಕೀಲರ ವಿರೋಧಮಾಜಿ ಸಚಿವ ಹೆಚ್‌ ಡಿ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಎಸ್‌ಐಟಿ ಪರ ವಕೀಲರು ತೀವ್ರವಾಗಿ ವಿರೋಧಿಸಿದರು. ಎಸ್‌ಐಟಿ ಪರ ಜಾಯ್ನಾ ಕೊಠಾರಿ ಪ್ರಬಲ ವಾದ ಮಂಡಿಸಿದರು. ಅಶೋಕ್‌ ನಾಯಕ್ ಕೂಡ ಸರ್ಕಾರದ ಪರವಾಗಿ ವಾದ ಮಂಡಿಸಿದರು.
ರೇವಣ್ಣ ತಪ್ಪಾದ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ನ್ಯಾಯಾಲಯಕ್ಕೆ ಅರ್ಜಿ ವಿಚಾರಣೆ ನಡೆಸುವ ಕಾನೂನು ವ್ಯಾಪ್ತಿ ಇಲ್ಲ ಎಂದು ಸರ್ಕಾರದ ಪರ ವಕೀಲರು ವಾದಿಸಿದರು. ಅತ್ಯಾಚಾರ ಒಬ್ಬರೇ ಮಾಡಿದ್ದಾರಾ ಅಥವಾ ಇಬ್ಬರೇ ಮಾಡಿದ್ದಾರಾ ಎಂಬುದು ತನಿಖೆಯಲ್ಲಿ ತಿಳಿದು ಬರಲಿದೆ ಎಂದು ಎಸ್‌ಪಿಪಿ ಅಶೋಕ್ ವಾದ ಮಂಡಿಸಿದರು.
ಓರ್ವ ಮಹಿಳೆಯೇ ಇಬ್ಬರ ವಿರುದ್ಧ ದೂರು ನೀಡಿದ್ದಾರೆ. ಒಂದೇ ಮಹಿಳೆಯ ಮೇಲೆ ಇಬ್ಬರು ಸೇರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅಶೋಕ್ ವಾದ ಮಂಡಿಸಿದರು. ಯಾರು 354 A ಮಾಡಿದ್ದಾರೆ, ಯಾರು 376 ಮಾಡಿದ್ದಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯ ಇಲ್ಲ. ತನಿಖೆ ಬಳಿಕ ಇದು ಹೊರಬರಲಿದೆ ಎಂದು ಹೇಳಿದರು. ಈ ವೇಳೆ ಅಶೋಕ್ ನಾಯಕ್ ಮತ್ತು ಸಿ ವಿ ನಾಗೇಶ್ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು.
ಮಗ ದೇಶ ಬಿಟ್ಟು ಓಡಿಹೋಗಿದ್ದಾನೆ. ಮಗನನ್ನು ರಕ್ಷಿಸಲು ಅಪ್ಪ ಪ್ರಯತ್ನ ಮಾಡುತ್ತಿದ್ದಾನೆ. ರೇವಣ್ಣ ರಾಜಕಾರಣಿಯಾಗಿ ಸಚಿವರಾಗಿ, ಶಾಸಕರಾಗಿದ್ದಾರೆ..

ಪ್ರಭಾವ ದಾದಾಗಿರಿ, ತೋಳ್ಬಲ, ಹಣಬಲ ಹೊಂದಿದ್ದಾರೆ. ಎಂದು ಎಸ್ ಪಿಪಿ ಅಶೋಕ್ ವಾದ ಮಂಡಿಸಿದರು.
ರೇವಣ್ಣ ಪರ ಹಾಜರಾದ ಹಿರಿಯ ವಕೀಲ ಸಿ ವಿ ನಾಗೇಶ್ ಕೂಡ ಅಷ್ಟೇ ಪರಿಣಾಮಕಾರಿಯಾಗಿ ತಮ್ಮ ಕಕ್ಷಿದಾರನ ಪರವಾಗಿ ವಾದ ಮಂಡಿಸಿದರು. ಈ ಆರೋಪಗಳಿಗೆಲ್ಲಾ ಜಾಮೀನು ನೀಡುವ ಅಧಿಕಾರ ಈ ನ್ಯಾಯಾಲಯಕ್ಕೆ ಇದೆ ಎಂದು ಸಿವಿ ನಾಗೇಶ್ ವಾದಿಸಿದರು .ದಯವಿಟ್ಟು ನಾನು ಸಲ್ಲಿಸಿರುವ ಅರ್ಜಿಯಲ್ಲಿನ ಮನವಿ ನೋಡಿ ಎಂದು ಮನವಿ ಮಾಡಿದರು.

ರೇವಣ್ಣ ವಿರುದ್ಧ 354 A, 354 D, 506, 509 ಆರೋಪ‌ ಮಾತ್ರವಿದೆ.ಇವೆಲ್ಲವೂ ಜಾಮೀನು ನೀಡಬೇಕಾದ ಅಪರಾಧಗಳು ಎಂದು ಸಿ ವಿ ನಾಗೇಶ್ ವಾದಿಸಿದರು. ಸಂತ್ರಸ್ತೆ ನೀಡಿದ್ದ ದೂರನ್ನು ಮಹಿಳಾ ಅಧಿಕಾರಿ ದಾಖಲಿಸಿಕೊಂಡಿಲ್ಲ. ಬದಲಾಗಿ ಪುರುಷ ಅಧಿಕಾರಿ ದೂರು ದಾಖಲಿಸಿದ್ದಾರೆ. ಟೈಪ್ ಆಗಿದ್ದ ದೂರು ದಾಖಲಿಸಿಕೊಂಡಿದ್ದಾರೆ ಎಂದು ನಾಗೇಶ್ ವಾದಿಸಿದರು. ಲೈಂಗಿಕ ದೌರ್ಜನ್ಯ ಬೇರೆ ಅತ್ಯಾಚಾರ ಬೇರೆ
ಲೈಂಗಿಕ ದೌರ್ಜನ್ಯ ಎಂದು ಹೇಳಲೂ ಆ ಮಹಿಳೆಗೆ ಬರುವುದಿಲ್ಲ ಎಂದು ನಾಗೇಶ್ ವಾದಿಸಿದರು.
ನಾನು ಪರಿಚಯಸ್ಥರ ಮೂಲಕ ಪೊಲೀಸರನ್ನು ಕರೆಸಿ ದೂರು ನೀಡುತ್ತಿದ್ದೇನೆ.ಜೀವ ಭಯವಿರುವುದರಿಂದ ಪೊಲೀಸರನ್ನು ಕರೆಸಿಕೊಂಡಿದ್ದೇನೆ ಎಂದು ದೂರಿನಲ್ಲಿದೆ ಎಂದು ನಾಗೇಶ್ ವಾದಿಸಿದರು.
ದೂರಿನಲ್ಲಿ ಹೆಣ್ಣು ಮಕ್ಕಳು ಪ್ರಜ್ವಲ್ ರೇವಣ್ಣರೆಂದರೆ ಭಯಪಡುತ್ತಿದ್ದರು.ರೇವಣ್ಣ ಮೈಮುಟ್ಟುತ್ತಿದ್ದರು ಎಂದಿರುವುದು ಅತ್ಯಾಚಾರವೆನಿಸುವುದಿಲ್ಲ ಎಂದು ನಾಗೇಶ್ ಕೋರ್ಟ್‌ನಲ್ಲಿ ವಾದಿಸಿದರು.
ಸುದೀರ್ಘ ಕಾಲನಡೆದ ವಾದ ವಿವಾದದ ಬಳಿಕ ಅಂತಿಮವಾಗಿ ನ್ಯಾಯಾಲಯ ಜಾಮೀನು ಅರ್ಜಿ ಕುರಿತ ತೀರ್ಪನ್ನು ಕಾಯ್ದಿರಿಸಿದೆ. ಸೋಮವಾರ ತೀರ್ಪು ನೀಡುವುದಾಗಿ ನ್ಯಾಯಾಲಯ ಪ್ರಕಟಿಸಿದೆ. ಸೋಮವಾರದ ತನಕ ರೇವಣ್ಣಗೆ ರಿಲೀಫ್ ದೊರೆತಿದೆ.42 ನೇ ಎಸಿಎಂಎಂ ನ್ಯಾಯಾಲಯ ಸೋಮವಾರ ನೀಡಲಿರುವ ತೀರ್ಪು ರೇವಣ್ಣ ಅವರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ

More News

You cannot copy content of this page