Search

GADAG INCIDENT: ರೋಣದ ಜಾತ್ರೆಯಲ್ಲಿ ಅವಘಡ. ರಥದ ಚಕ್ರದಡಿ ಸಿಲುಕಿ ಇಬ್ಬರ ಸಾವು!

ಗದಗ ಜಿಲ್ಲೆಯ ರೋಣದಲ್ಲಿ ಇಂದು ನಡೆದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಅವಘಡ ಸಂಭವಿಸಿದೆ.

ವೀರಭದ್ರೇಶ್ವರ ಜಾತ್ರಾ ನಿಮಿತ್ತ ನಡೆಯುತ್ತಿದ್ದ ರಥೋತ್ಸವದಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.
ಪಟ್ಟಣದ ರಾಜ ಬೀದಿಯಲ್ಲಿ ರಥ ಸಾಗುತ್ತಿದ್ದಂತೆ ನೂಕು ನುಗ್ಗಲು ಉಂಟಾಗಿದೆ.

ನೂಕು ನುಗ್ಗಲುಂಟಾಗಿ ಏಕಾ ಏಕಿ ಚಕ್ರದಡಿ ಸಿಲುಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಗಳಲ್ಲಿ ಓರ್ವನ ಗುರುತು ಪತ್ತೆ ಹಚ್ಚಲಾಗಿದ್ದು, ಮೃತ ವ್ಯಕ್ತಿಯನ್ನು ಮಲ್ಲಪ್ಪ ಲಿಂಗನಗೌಡರ ಎನ್ನಲಾಗಿದೆ.

ಮತ್ತೊಬ್ಬನ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ವ್ಯಕ್ತಿಯ ಮುಖದ ಮೇಲೆ ರಥದ ಚಕ್ರ ಸಾಗಿರುವುದರಿಂದ ಗುರುತು ಪತ್ತೆಯಾಗಿಲ್ಲ.

More News

You cannot copy content of this page