ಬೆಳ್ತಂಗಡಿ: ಅಕ್ರಮ ಕಲ್ಲುಕೋರೆ ನಡೆಸುತ್ತಿದ್ದ ಆರೋಪದಲ್ಲಿ ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷನನ್ನು ಪೊಲೀಸರು ವಶಕ್ಕೆ ಪಡೆದ ನೆಪದಲ್ಲಿ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರಾತ್ರೋರಾತ್ರಿ ಧರಣಿ ನಡೆಸಿದ್ದಲ್ಲದೆ, ಪೊಲೀಸರಿಗೇ ಧಮ್ಮಿ ಹಾಕಿದ್ದಾರೆ.
ಅಕ್ರಮ ಕಲ್ಲುಕೋರೆ ನಡೆಸುತ್ತಿದ್ದ ಆರೋಪದಲ್ಲಿ ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷನನ್ನು ಪೊಲೀಸರು ವಶಕ್ಕೆ ಪಡೆದ ನೆಪದಲ್ಲಿ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರಾತ್ರೋರಾತ್ರಿ ಧರಣಿ ನಡೆಸಿದ್ದಲ್ಲದೆ, ಪೊಲೀಸರಿಗೇ ಧಮ್ಮಿ ಹಾಕಿದ್ದಾರೆ.
ಕಾರ್ಯಕರ್ತರ ಜೊತೆಗೆ ತಡರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದ ಶಾಸಕ ಹರೀಶ್ ಪೂಂಜ, ಪೊಲೀಸರನ್ನು ಏರು ಸ್ವರದಲ್ಲಿ ದಬಾಯಿಸಿದ್ದಾರೆ. ಪೊಲೀಸ್ ಠಾಣೆ ನಿಮ್ಮ ಅಪ್ಪನ ಮನೆ ಆಸ್ತಿಯಾ ಎಂದು ಇನ್ಸ್ ಪೆಕ್ಟರ್ ಅವರನ್ನು ನಿಂದಿಸಿದ್ದಾರೆ.
ನಮ್ಮ ಕಾರ್ಯಕರ್ತ ಕೊಲೆ, ರೇಪ್ ಮಾಡಿಲ್ಲ, ಯಾವ ಅಪರಾಧ ಮಾಡಿದ್ದಾನೆಂದು ಹೇಳಿ ರಾತ್ರಿ ವೇಳೆ ಮನೆಗೆ ನುಗ್ಗಿ ಎಳ್ಕೊಂಡು ಬಂದಿದ್ದೀರಿ ? ಯಾವ ಎಫ್‌ಐಆರ್ ಆಗಿದೆ, ನೀವು ದಾಳಿ ನಡೆಸಿದಾಗ ಯಾರಿದ್ದರು, ಅವರನ್ನು ವಶಕ್ಕೆ ತಗೊಂಡಿದ್ದೀರಲ್ವಾ.. ಆ ಜಾಗದ ಮಾಲೀಕರು ಇವರ ಹೆಸರು ಹೇಳಿದ್ದಾರೆಯೇ.. ಒಬ್ಬ ಅಮಾಯಕ ಕಾರ್ಯಕರ್ತನನ್ನು ಮನೆಗೆ ನುಗ್ಗಿ ಮಹಿಳೆಯರ ಮುಂದಿನಿಂದಲೇ ಏಕಾಏಕಿ ಎಳ್ಕೊಂಡು ಹೋಗುವ ಯಾವ ಅಪರಾಧ ಮಾಡಿದ್ದಾರೆ.
ನೀವು ಕಾಂಗ್ರೆಸ್ ಏಜಂಟರ ರೀತಿ ವರ್ತಿಸ್ತೀರಿ, ನೀವು ಯಾರ ಒತ್ತಡದಲ್ಲಿ ಕೆಲಸ ಮಾಡ್ತಿದೀರಿ ಅಂತ ಗೊತ್ತಿದೆ. ಕಾಂಗ್ರೆಸ್ ಸರ್ಕಾರ ಬಂದಿದೆ ಅಂತ ನಿಮಗೆ ದರ್ಪ ಇದೆ ಎಂದು ಹೇಳಿದ ಶಾಸಕ ಪೂಂಜ, ಪ್ರೊಸೀಜರ್ ಎಂದು ಹೇಳಿದ ಒಬ್ಬ ಪೊಲೀಸ್ ಅಧಿಕಾರಿಗೆ ನಿಮ್ಮ ಪ್ರೊಸೀಜರ್ ಬಗ್ಗೆ ನನಗೆ ನಿಮಗಿಂತ ಹೆಚ್ಚು ಗೊತ್ತಿದೆ. ಎಫ್‌ಐಆರ್ ಈಗ ಮಾಡಿರೋದಲ್ವಾ. ಇದನ್ನೆಲ್ಲ ಯಾರ ಒತ್ತಡದಲ್ಲಿ ಮಾಡ್ತಿದ್ದೀರಿ ಅಂತ ನನಗೆ ಗೊತ್ತಿದೆ ಎಂದು ಜೋರು ಧ್ವನಿಯಲ್ಲಿ ಇನ್ಸ್ ಪೆಕ್ಟರ್ ಮತ್ತು ಪೊಲೀಸ್ ಪೇದೆಗಳನ್ನು ಶಾಸಕ ಪೂಂಜ ಜೋರು ಮಾಡಿದ್ದಾರೆ.
ಎಸ್ಪಿ ತಹಸೀಲ್ದಾರ್ ಫೋನ್ ರಿಸೀವ್ ಮಾಡ್ತಿಲ್ಲ. ಪೊಲೀಸ್ ಠಾಣೆ ನಿಮ್ಮ ಅಪ್ಪನ ಮನೆ ಆಸ್ತಿಯಲ್ಲ. ಸಾರ್ವಜನಿಕ ಆಸ್ತಿ. ನಮ್ಮ ಕಾರ್ಯಕರ್ತನನ್ನು ಬಿಡದಿದ್ದರೆ ನಾನು ಇಲ್ಲಿಂದ ಹೋಗುವುದಿಲ್ಲ. ಇಲ್ಲಿಯೇ ಕೂರುತ್ತೇನೆಂದು ಹೇಳಿ ಪೊಲೀಸ್ ಠಾಣೆಯಲ್ಲಿ ರಾತ್ರಿ ಒಂದು ಗಂಟೆಗೆ ಶಾಸಕ ಪೂಂಜ ತನ್ನ ಜೊತೆಗಿದ್ದ ಕಾರ್ಯಕರ್ತರ ಜೊತೆಗೆ ಧರಣಿ ಕುಳಿತಿದ್ದಾರೆ. ಕೆಲಹೊತ್ತು ಕುಳಿತು ಧಿಕ್ಕಾರ ಕೂಗಿದ್ದಾರೆ. ಆದರೆ ಪೊಲೀಸರು ಕಾರ್ಯಕರ್ತನನು ಬಿಡಲು ಒಪಲಿಲ.
ಬೆಳ್ತಂಗಡಿಯ ಮೆಲಂತಬೆಟ್ಟು ಎಂಬಲ್ಲಿ ಕಲ್ಲಿನ ಕೋರೆ ನಡೆಯುತ್ತಿದ್ದಲ್ಲಿಗೆ ಶನಿವಾರ ಸಂಜೆ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಕೋರೆಯನ್ನು ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಡೆದು ಪೊಲೀಸರು ರಾತ್ರಿಯೇ ಮನೆಗೆ ನುಗ್ಗಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಆಮೂಲಕ ಪೊಲೀಸರು ಒಂದು ದುರ್ವತ್ರನೆ ರೀತಿಯಲ್ಲಿ ತೋರಿದ್ದಾರೆ. ಅಕ್ರಮ ಕೋರೆ, ಮರಳುಗಾರಿಕೆ ಬಗ್ಗೆ ದಾಳಿ ನಡೆಸಿ ಕ್ರಮ ಕೈಗೊಳ್ಳುವುದಿದ್ದರೆ ಜಿಲ್ಲೆಯ ನೂರಾರು ಕಡೆ ಅಕ್ರಮ ಆಗ್ತಿದೆ. ಆದರೆ ಪೊಲೀಸರು ಇಲ್ಲಿ ಕ್ರಮ ಜರುಗಿಸುವುದಿದ್ದರೂ ರಾತ್ರಿ ವೇಳೆ ಎಳಕೊಂಡು ಹೋಗುವ ಜರೂರತ್ತು ಇರಲಿಲ್ಲ. ಮಾಮೂಲಿ ಬರುವ ಕಡೆ ಪೊಲೀಸರೇ ಮೌನ ವಹಿಸಿ, ಅಕ್ರಮಕ್ಕೆ ಸಮ್ಮತಿ ನೀಡುವುದು ಗುಟ್ಟಿನ ವಿಚಾರವೂ ಅಲ್ಲ