ಬೆಂಗಳೂರು: ರಾಜ್ಯದಲ್ಲಿ ಪಿಯುಸಿ ಪರೀಕ್ಷಾ ಮಂಡಳಿ ನಡೆಸಿದ್ದ 2ನೇ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಕೂಡ ಕಡಿಮೆ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇಕಡ 35.25 ಮಂದಿ ಉತ್ತೀರ್ಣರಾಗಿದ್ದಾರೆ.
ಏಪ್ರಿಲ್ 29ರಿಂದ ಮೇ 16ರ ತನಕ ಪಿಯುಸಿ- 2ನೇ ಪರೀಕ್ಷೆ ನಡೆಸಲಾಗಿತ್ತು.
ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಈ ಪರೀಕ್ಷೆಯಲ್ಲಿ ಅವಕಾಶ ನೀಡಲಾಗಿತ್ತು.
ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳು
ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆದ ಪೂರಕ ಪಿಯುಸಿ ಪರೀಕ್ಷೆಗೆ 1.48 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪೈಕಿ 52 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಶೇಕಡ 32.25 ತೇರ್ಗಡೆ ದಾಖಲಾಗಿದೆ. 26,496 ಮಂದಿ ಬಾಲಕರು, 26,009 ಮಂದಿ ಬಾಲಕಿಯರು ಪಾಸ್ ಆಗಿದ್ದಾರೆ.
ವಿದ್ಯಾರ್ಥಿ ಜೀವನದ ಮೈಲುಗಲ್ಲು
ವಿದ್ಯಾರ್ಥಿಯೊಬ್ಬನ ಶೈಕ್ಷಣಿಕ ಬದುಕಿನಲ್ಲಿ ಪಿಯುಸಿ ಫಲಿತಾಂಶ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇಡೀ ವಿದ್ಯಾರ್ಥಿ ಜೀವನಕ್ಕೆ ತಿರುವು ಕೊಡುವ ನಿರ್ಣಾಯಕ ಹಂತ ಇದಾಗಿದೆ.ಈ ಹಿನ್ನೆಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಅತ್ಯಧಿಕ ಅಂಕ ಗಳಿಸುವ ಯತ್ನನಡೆಸುತ್ತಿದ್ದಾರೆ.
ಆದರೆ ಪರೀಕ್ಷೆ ಶೈಕ್ಷಣಿಕ ವಲಯಕ್ಕೆ ಸಂಬಂಧಪಟ್ಟಿ ವಿಷಯವಾಗಿದೆ. ಜೀವನದ ಪರೀಕ್ಷೆ ಎದುರಿಸಲು ಇನ್ನಿತರ ಕೌಶಲ್ಯ ಕೂಡ ಬೇಕಾಗಿದೆ. ಆತ್ಮವಿಶ್ವಾಸ ಇರುವ ವಿದ್ಯಾರ್ಥಿ ಎಲ್ಲ ಪರೀಕ್ಷೆಗಳಲ್ಲಿ ಜಯಗಳಿಸುತ್ತಾನೆ