Search

KS ESHWARAPPA: ರಘುಪತಿ ಭಟ್‌ರೇ ಮುಂದಿನ ದಿನ ಪೆನ್ ಡ್ರೈವ್ ಬರಬಹುದು, ಎಚ್ಚರಿಕೆಯಿಂದ ಇರಿ ಎಂದ ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಬಿಜೆಪಿ ಮಾಜಿ ನಾಯಕ ಈಶ್ವರಪ್ಪ ಅವರು ತಮ್ಮದೇ ಶೈಲಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ರಘುಪತಿ ಭಟ್ ಅವರಿಗೆ ಈಶ್ವರಪ್ಪ ತಮ್ಮ ಪೂರ್ಣ ಬೆಂಬಲ ನೀಡಿದ್ದಾರೆ. ರಘುಪತಿ ಭಟ್ ವಿಧಾನಪರಿಷತ್‌ಗೆ ಹೋದ್ದರೆ ನಾನು ಹೋದ್ದಂತೆ ಸಂತೋಷಪಡುತ್ತೇನೆ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ಜಾತಿ ಮೇಲೆ ಇದೀಗ ರಾಜ್ಯದಲ್ಲಿ ರಾಜಕೀಯ ನಡೆಯುತ್ತಿದೆ.ಕೃಷ್ಣ, ಕನಕದಾಸರ ಪ್ರತಿನಿಧಿಯಾಗಿ ರಘುಪತಿ ಭಟ್ಟರು ಬರ್ತಾರೆ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಜಾತಿ ನೋಡಿ ಮತಹಾಕಬೇಡಿ

ರಘುಪತಿ ಭಟ್ ರಿಗೆ ಯಾವುದೇ ಜಾತಿ ಇಲ್ಲ. ಯಾವ ಜಾತಿ ಅಂತ ನೋಡಿ ಮತ ನೀಡಬೇಡಿ. ರಘುಪತಿ ಭಟ್ ಅವರನ್ನು ಎಲ್ಲರೂ ಬೆಂಬಲಿಸಿ ಎಂದು ಮಾಜಿ ಸಚಿವ ಈಶ್ವರಪ್ಪ ಕರೆ ನೀಡಿದ್ದಾರೆ. ಮುಂದಿನ 10 ದಿನಗಳಲ್ಲಿ ರಘುಪತಿ ಭಟ್ ಪರವಾಗಿ ಸಾಕಷ್ಟು ಪ್ರಚಾರ ಮಾಡುವುದಾಗಿಯೂ ಈಶ್ವರಪ್ಪ ಹೇಳಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಘುಪತಿ ಭಟ್ ಅವರಿಗೆ ನೋಟಿಸ್ ಬರುವ ಸಾಧ್ಯತೆ ಇದೆ. ಬಹುಶ ಇಂದೇ ನೋಟಿಸ್ ಬರಬಹುದು ಎಂದು ಈಶ್ವರಪ್ಪ ಸೂಚ್ಯವಾಗಿ ತಿಳಿಸಿದ್ದಾರೆ. ಇಲ್ಲಿಯ ತನಕ ನಾನೊಬ್ಬನೆ ಇದ್ದೆ. ಈಗ ಅವರು ಕೂಡ ಸೇರಿಕೊಂಡಿದ್ದಾರೆ. ನನ್ನ ಜೊತೆ ಅವರು ಸೇರಿಕೊಂಡಿದ್ದು ಸಂತಸವಾಗಿದೆ. ರಾಷ್ಟ್ರೀಯ ವಿಚಾರಕ್ಕಾಗಿ ಬಿಜೆಪಿ ನಮ್ಮನ್ನು ಉಚ್ಚಾಟನೆಮಾಡಿದೆ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ರಘಪತಿಭಟ್‌ಗೆ ಈಶ್ವರಪ್ಪ ಎಚ್ಚರಿಕೆ
ಇದೇ ವೇಳೆ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಘುಪತಿ ಭಟ್‌ಗೆ ಈಶ್ವರಪ್ಪ ಎಚ್ಚರಿಕೆ ಕೂಡ ನೀಡಿದ್ದಾರೆ. ಚುನಾವಣೆಗೆ ಮುನ್ನಾ ನಿಮ್ಮ ಪೆನ್ ಡ್ರೈವ್ ಕೂಡ ಬರಬಹುದು. ಈ ಸಂಬಂಧ ಎಚ್ಚರಿಕೆಯಿಂದ ಇರಿ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ. ನಾನು ಮೋಸ ಹೋಗಿದ್ದೇನೆ. ಹಾಗಾಗಿ ಇದು ನನಗೆ ಗೊತ್ತು ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಶುದ್ದೀಕರಣಕ್ಕೆ ಈಶ್ವರಪ್ಪ ಆಗ್ರಹ
ರಾಜ್ಯ ಬಿಜೆಪಿಯಲ್ಲಿ ಶುದ್ದೀಕರಣದ ಅಗತ್ಯಇದೆ. ಮಹಾತ್ಮರು ಕಟ್ಟಿದ್ದ ಪಕ್ಷಕ್ಕೆ ಹೊಡೆತ ಬೀಳುತ್ತಿದೆ. ಕೆಲವೇ ವ್ಯಕ್ತಿಗಳ ಕೈಯಲ್ಲಿ ಪಕ್ಷ ನರಳುತ್ತಿದೆ. ಅಪ್ಪ ಮಕ್ಕಳೇ ಎಲ್ಲ ತೀರ್ಮಾನ ಮಾಡುವ ಹಂತಕ್ಕೆ ಬಂದಿದ್ದಾರೆ ಎಂದು ಈಶ್ವರಪ್ಪ ಗುಡುಗಿದ್ದಾರೆ. ಈ ಮೂಲಕ ಯಡಿಯೂರಪ್ಪ ವಿರುದ್ಧದ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.

ಬ್ರಹ್ಮ ಅಡ್ಡಬಂದರೂ ರಘುಪತಿ ಭಟ್ ಅವರನ್ನು ಸೋಲಿಸಲು ಆಗಲ್ಲ. ಹಿಂದುತ್ವಕ್ಕೆ ಇನ್ನೊಂದು ಹೆಸರೇ ಶಿವಮೊಗ್ಗ ಎಂದು ಈಶ್ವರಪ್ಪ ಗುಡುಗಿದ್ದಾರೆ. ಉಡುಪಿ ಜಿಲ್ಲೆಗಿಂತ ಹೆಚ್ಚಿನ ಲೀಡ್ ನಾವು ರಘಪತಿ ಭಟ್ ಅವರಿಗೆ ನೀಡುತ್ತೇವೆ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿರುವ ರಘುಪತಿಭಟ್ ಇದೀಗ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದು ಬಂಡಾಯದ ಕಹಳೆ ಮೊಳಗಿಸಿದ್ದಾರೆ.

More News

You cannot copy content of this page