ಬೆಂಗಳೂರು: ಇಲೆಕ್ಟ್ರಾನಿಕ್ ಸಿಟಿ ಬಳಿ ನಡೆದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಆರೋಪಕ್ಕೆ ಗುರಿಯಾಗಿರುವ ತೆಲುಗು ನಟಿ ಹೇಮಾಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಹೇಮಾ ಅವರ ರಕ್ತದ ಮಾದರಿ ಸಂಗ್ರಹಿಸಿರುವ ಸಿಸಿಬಿ, ಇದೀಗ ಮತ್ತೊಂದು ಪರೀಕ್ಷೆಗೆ ಸಿದ್ದತೆ ನಡೆಸಿದೆ.
ತಲೆಗೂದಲು ಪರೀಕ್ಷೆಗೆ ಸಿದ್ಧತೆ
ಹೇಮಾ ಅವರ ರಕ್ತದ ಮಾದರಿ ಪಾಸಿಟಿವ್ ಎಂಬುದು ದೃಢಪಟ್ಟರೆ ಹೇಮಾ ಅವರ ತಲೆಗೂದಲಿನ ಪರೀಕ್ಷೆಗೆ ಅಧಿಕಾರಿಗಳು ಪ್ಲ್ಯಾನ್ ಮಾಡಿದ್ದಾರೆ. ಮತ್ತೆ ನೋಟಿಸ್ ನೀಡಿ ವಿಚಾರಣೆಗೆ ಕರೆ ತರಲು ಪ್ಲ್ಯಾನ್ ಮಾಡಿದ್ದಾರೆ.
ತಲೆಗೂದಲಿನ ಪರೀಕ್ಷೆಯಲ್ಲಿ ಮಾದಕ ದ್ರವ್ಯ ಸೇವನೆ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ. ಎಷ್ಚು ವರ್ಷದಿಂದ ಮಾದಕ ದ್ರವ್ಯ ಸೇವನೆಮಾಡುತ್ತಿದ್ದಾರೆ ಎಂಬ ಹಿಸ್ಟರಿ ತಿಳಿದು ಬರಲಿದೆ.
ಸ್ಯಾಂಡಲ್‌ವುಡ್ ನಟಿಯರಿಗೂ ಪರೀಕ್ಷೆ
ಈ ಹಿಂದೆ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಸ್ಯಾಂಡಲ್ ವುಡ್ ನ ಇಬ್ಬರು ನಟಿಯರಿಗೆ ಇದೇ ರೀತಿಯ ಪರೀಕ್ಷೆ ನಡೆಸಲಾಗಿತ್ತು. ತಲೆಗೊದಲು ಟೆಸ್ಟ್ ಮೂಲಕ ಡ್ರಗ್ಸ್ ಸೇವನೆ ಮಾಡಿರುವುದು ಸಿಸಿಬಿ ಪತ್ತೆ ಹಚ್ಚಿತ್ತು
ಪ್ರಭಾವಿಗಳ ರಕ್ಷಣೆಗೆ ಯತ್ನ ಆರೋಪ
ರೇವ್ ಪಾರ್ಟಿ ದಾಳಿ ಸಂಬಂಧ ಕೆಲವು ಪ್ರಭಾವಿಗಳನ್ನು ರಕ್ಷಿಸಲು ತೆರೆಮರೆಯ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳು ತಮ್ಮ ರಾಜಕೀಯ ಪ್ರಭಾವ ಬಳಸಿ ಕೇಸ್‌ನಿಂದ ಬಚವಾಗಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಸಿಸಿಬಿ ಇದೀಗ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಹಿಂದೆ ಸಿಸಿಬಿ ನಡೆಸಿದ್ದ ಮಾದಕ ದ್ರವ್ಯ ಕೇಸ್ ಭಾರೀ ಪ್ರಚಾರ ಗಿಟ್ಟಿಸಿತ್ತು. ಅಂತಿಮವಾಗಿ ಯಾವುದೇ ತಾರ್ಕಿಕ ಅಂತ್ಯ ಕಂಡಿರಲಿಲ್ಲ. ಇದೀಗ ರೇವ್ ಪಾರ್ಟಿ ಪ್ರಕರಣದಲ್ಲಿ ಕೂಡ ಅದೇ ರೀತಿಯ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದು ಕೆಲವರು ಶಂಕಿಸಿದ್ದಾರೆ.
ರೇವ್ ಪಾರ್ಟಿಯಲ್ಲಿ 150ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಇವರಲ್ಲಿ 30ರಿಂದ 40 ಯುವತಿಯರು ಕೂಡ ಸೇರಿದ್ದಾರೆ ಎಂದು ವರದಿಯಾಗಿದೆ. ಪೊಲೀಸ್ ರೈಡ್ ಬಳಿಕ ಮುಖ ಮುಚ್ಚಿಕೊಂಡು ಪರಾರಿಯಾಗಲು ಯತ್ನಿಸಿದ್ದರು.
ಆಂಧ್ರಪ್ರದೇಶ ಮೂಲದ ಹೆಚ್ಚಿನವರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ