Search

KARNATAKA UNIVERSITY: ಕರ್ನಾಟಕ ವಿವಿ ಕ್ಯಾಂಪಸ್ ನಲ್ಲೂ ನಡೆದಿದೆ ಪುಂಡರ ಹಾವಳಿ

ಧಾರವಾಡ: ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ಮೇ 14 ರಂದು ನಡೆದಿದ್ದ ಯುವತಿಯರಿಗೆ ಚುಡಾಯಿಸಿ ಮೊಬೈಲ್ ಕಸಿದುಕೊಳ್ಳಲು ಹೋದ ಪ್ರಕರಣ ಈಗ ಗಂಭೀರ ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ಕೂಡಾ ಆತ ಯಾರು‌ ಎಂದು ಹುಡುಕಾಟಕ್ಕೆ ಇಳಿದಿದೆ. ಅಲ್ಲದೇ ಕರ್ನಾಟಕ ವಿವಿ ಕುಲಪತಿ ಕೂಡಾ ಕ್ಯಾಂಪಸ್ ಗೆ ಸರ್ಪಗಾವಲು ಹಾಕುವ ಮಾತನ್ನ ಹೇಳಿದ್ದಾರೆ.
ಕರ್ನಾಟಕ ವಿವಿ ಕ್ಯಾಂಪಸ್ ಕೂಡಾ ಸೇಫ್ ಇಲ್ಲಾ‌. ಕಳೆದ ಮೇ.14 ರಂದು ಕರ್ನಾಟಕ ವಿವಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯೊಬ್ಬರು ಗ್ರಂಥಾಲಯಕ್ಕೆ ಹೋಗುವಾಗ ಓರ್ವ ವ್ಯಕ್ತಿ ಬೈಕ್ ಮೇಲೆ ಬಂದು ವಿದ್ಯಾರ್ಥಿನಿಯ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ.

ಇದಾದ ನಂತರ ಇದೇ ಬೈಕ್ ಮೇಲೆ ಬಂದಿದ್ದ ವ್ಯಕ್ತಿ ಕ್ಯಾಂಪಸ್ ಒಳಗೆ ಇರುವ ರಾಣಿ ಚನ್ನಮ್ಮ ಹಾಸ್ಟೆಲ್ ವಿದ್ಯಾರ್ಥಿನಿ ಸರಗಳ್ಳತನ ಮಾಡಲು ಯತ್ನ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯೋರ್ವಳು ಉಪನಗರ ಠಾಣೆಯಲ್ಲಿ ದೂರು ಕೂಡಾ ದಾಖಲು ಮಾಡಿದ್ಲು. ಇದಾದ ನಂತರ ಕರ್ನಾಟಕ ವಿವಿ ಆಡಳಿತ ಮಂಡಳಿ‌ ಹಾಗೂ ಪೊಲೀಸ್ ಇಲಾಖೆ ಎಚ್ಚರಗೊಂಡಿದೆ.
ಎಬಿವಿಪಿ ಸಹಾಯ ಮಾಡಿ ವಿದ್ಯಾರ್ಥಿನಿ ಬೆನ್ನಿಗೆ ನಿಂತ ಮೇಲೆ ಈ ದೂರು ದಾಖಲಾಗಿತ್ತು. ಆದರೆ ಕರ್ನಾಟಕ ವಿವಿ ಮಾತ್ರ ದೂರು ಕೊಡಲು ತಡ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ವಿವಿ ಕುಲಪತಿಗಳಿಗೆ ಕೇಳಿದ್ರೆ, ಮೇ.14 ಹಾಗೂ 15 ರಂದು ನಾನು ಕಾನ್ಫರನ್ಸ್‌ನಲ್ಲಿ ಇದ್ದೆ.
ನಾನು ಅದನ್ನು ಸ್ಥಾನಿಕವಾಗಿ ತನಿಖೆ ಮಾಡುವ ಉದ್ದೇಶದಿಂದ ದೂರು ಕೊಟ್ಟಿರಲಿಲ್ಲ. ಆದರೆ, ಮೇ.21 ರಂದು ದೂರು ಕೊಡಲಾಗಿದೆ ಅಂತಾರೆ. ಇನ್ನು ಕೆಲವು ಕಡೆಗಳಿಂದ ಕವಿವಿ ಆವರಣಕ್ಕೆ ಕೆಲವರು ಪ್ರವೇಶ ಮಾಡುತ್ತಿದ್ದಾರೆ, ಅದಕ್ಕಾಗಿ ಇಡೀ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸಿ ಎಲ್ಲ ಕಡೆ ಗೋಡೆ ಕಟ್ಟಲಾಗುತ್ತಿದೆ, ಅಲ್ಲದೇ ಎಲ್ಲ ಕಡೆ ಸಿಸಿಟಿವಿ ಹಾಕುವ ಉದ್ದೇಶವಿದೆ, ಈಗ ಕವಿವಿ ರಜೆ ಇರುವ ಕಾರಣ ಹೊರಗಿನವರ ಪ್ರವೇಶ ಬಂದ್ ಮಾಡಲಾಗಿದ್ದು, ಭದ್ರತಾ ಸಿಬ್ಬಂದಿ ಕೂಡ ಹೆಚ್ಚಳ ಮಾಡಲಾಗುತ್ತಿದೆ, 888 ಎಕರೆ ಕ್ಯಾಂಪಸ್ ಇರುವ ಕಾರಣ ಅಪರಿಚಿತರು ಒಳಗಡೆ ಬರುತ್ತಿದ್ದಾರೆ. ಈ ಬಗ್ಗೆ ಹೆಚ್ಚು ನಿಗಾ ವಹಿಸಲಾಗುತ್ತಿದೆ ಎಂದು ಕುಲಪತಿ ಹೇಳ್ತಾರೆ.
ಇನ್ನು ಈ ಪ್ರಕರಣ ಮೇ 14 ಕ್ಕೆ ನಡೆದರೂ ಕರ್ನಾಟಕ ವಿವಿ ಇದಕ್ಕೆ ಸಿರಿಯಸ್ ತಗೊಂಡಿರಲಿಲ್ಲ. ಈಗ ದೂರು ದಾಖಲಾದ ಮೇಲೆ ಪೊಲೀಸ್ ಇಲಾಖೆ ಕೂಡಾ ಇದನ್ನ ಗಂಭೀರವಾಗಿ ಪಡೆದಿದೆ.
ಸದ್ಯ ಹುಬ್ಬಳ್ಳಿ ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ಬಂದಿರುವ ಕುಶಾಲ್ ಚೌಕ್ಸೆ ಇ ಬಗ್ಗೆ ಮಾಹಿತಿ ನೀಡಿದ್ದು, ಈಗಾಗಲೇ ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೂರು ತಡವಾಗಿ‌ ಬಂದಿದೆ, ಆದರೂ ಪ್ರಕರಣ ತನಿಖೆ ನಡೆಸಿ ತಪ್ಪಿತಸ್ಥನ ಹುಡುಕಾಟ ನಡೆದಿದೆ, ವಿದ್ಯಾರ್ಥಿನಿಯರನ್ನ ಓರ್ವ ಬೈಕ್ ಮೇಲೆ ಬಂದು ತೊಂದರೆ ಕೊಟ್ಟಿದ್ದಾರೆ‌ ಎಂದು ಮಾಹಿತಿ ಇದ್ದು, ತನಿಖೆ ಆರಂಭ ಮಾಡಲಾಗಿದೆ, ಸಿಸಿಟಿವಿ ಫುಟೆಜ್ ಕೂಡಾ ತೆಗೆದುಕೊಳ್ಳಲಾಗುತಿದೆ, ಕರ್ನಾಟಕ ವಿವಿಗೆ ಭದ್ರತೆ ಹೆಚ್ಚಳಕ್ಕೆ ಕೂಡಾ ಸೂಚನೆ ಕೊಡಲಾಗಿದೆ ಎಂದು ಹೇಳಿದ್ದಾರೆ.

More News

You cannot copy content of this page