Search

Liquor Sale Ban: ಜೂನ್ 1 ರಿಂದ 5 ದಿನ ಮದ್ಯ ಮಾರಾಟ ಇಲ್ಲಾ!

ಬೆಂಗಳೂರು : ಜೂನ್ ೧ ರಿಂದ ಮದ್ಯ ಪ್ರಿಯರಿಗೆ ಬಿಗ್ ಬಿಗ್ ಶಾಕ್ ಎದುರಾಗಿದ್ದು, ಐದು ದಿನಗಳ ಕಾಲ ಮದ್ಯಪಾನ ಮಾರಾಟ ನಿಷೇಧ ಮಾಡಲಾಗಿದೆ, ಯಾಕೆ ಅಂತೀರಾ ಇಲ್ಲಿದೆ ಸಂಪೂರ್ಣ ಮಾಹಿತಿ…

ಜೂನ್ ೧ ರಿಂದ ೬ರ ವರಗೆ ಬಾರ್ ಬಂದ್ ಆಗಲಿದ್ದು,ಎಂಎಲ್ ಸಿ ಚುನಾವಣೆ ಹಿನ್ನೆಲೆ, ಮತ್ತು ಲೋಕಸಭಾ ಮತ ಎಣಿಕೆ ಕಾರಣ ಬಾರ್ ವೈನ್ ಶಾಪ್ ಕ್ಲೋಸ್ ಆಗಲಿದೆ , ರಾಜ್ಯ ರಾಜಧಾನಿ ಎಣ್ಣೆ ಪ್ರಿಯರಿಗೆ ಈ ತಿಂಗಳಲ್ಲೇ ಎಣ್ಣೆ ಸ್ಟಾಕ್ ಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದಾರೆ.

ಜೂನ್ ೧ ರಿಂದ ೪ ರವೆಗೆ ಸಿಲಿಕಾನ್ ಸಿಟಿಯ ಬಾರ್ ಅಂಡ್ ರೆಸ್ಟೋರೆಂಟ್ ಸಂಪೂರ್ಣ ಬಂದ್ ಆಗಲಿದ್ದು ಮತ್ತೆ ಜೂನ್ ೫ ಬಾರ್ ಓಪನ್ ಆಗಲಿದೆ. ಮತ್ತೆ ೬ ತಾರೀಖು ಮದ್ಯ ಮಾರಾಟ ನಿಷೇದ ಆಗಲಿದೆ.

ಜೂನ್ 3 ರಂದು ಪದವೀಧರ ಕ್ಷೇತ್ರದ ಮತದಾನ ಹಿನ್ನೆಲೆ ಜೂನ್ 1 ರ ಮಧ್ಯಾಹ್ನ ೪ ಗಂಟೆಯಿಂದ ಜೂನ್ 3 ರ ವರೆಗೆ ಕ್ಲೋಸ್ ಮಾಡುವಂತೆ ಆದೇಶ ಮಾಡಿರೋ ಜಿಲ್ಲಾಡಳಿತ, ಮತ್ತೆ ಜೂನ್ ೪ ರಂದು ಲೋಕಸಭೆಯ ಮತ ಎಣಿಕೆ‌ ಇದೇ. ಈ ಕರಣ ಅಂದು ಸಹ ಇಡೀ ರಾಜ್ಯದಲ್ಲಿ ಎಲ್ಲ ಮಾದರಿಯ ಬಾರ್ ಅಂಡ್ ರೆಸ್ಟೋರೆಂಟ್ ವೈನ್ ಶಾಪ್ ಕ್ಲೋಸ್ ಆಗಲಿದೆ. ಇನ್ನು ಜೂನ್ 6 ರಂದು ಎಂಎಲ್‌ಸಿ ಮತ ಎಣಿಕೆ ಇರೋದಿಂದ ಅಂದು ಸಹ ಡ್ರೈ ಡೇ ಎಂದು ಘೋಷಣೆ ಮಾಡಲಾಗಿದೆ.

More News

You cannot copy content of this page