ಬೆಂಗಳೂರು: ಲೋಕಸಭಾ ಹಾಗೂ ವಿಧಾನ ಪರಿಷತ್ತು ಚುನಾವಣೆಯ ಲಿತಾಂಶ ಹೊರಬೀಳುವ ಹಿನ್ನೆಲೆಯಲ್ಲಿ ಒಂದು ವಾರ ಮದ್ಯದಂಗಡಿಗಳನ್ನು ಬಂದ್ ಮಾಡಲು ಹೊರಡಿಸಿರುವ ಆದೇಶ ಬಗ್ಗೆ ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಆಕ್ಷೇಪ ವ್ಯಕ್ತಪಡಿಸಿದೆ
.ಇತ್ತೀಚಿಗೆ ಮತದಾನ ಮುಗಿದ ಬಳಿಕವೂ ಮದ್ಯ ನಿಷೇಧ ಆದೇಶ ಹೊರಡಿಸಲಾಗುತ್ತಿದೆ.ಮದ್ಯ ನಿಷೇಧಿಸುವ ಹಿನ್ನೆಲೆಯಲ್ಲಿ ಸನ್ನದುದಾರರಿಗೆ ಮಾತ್ರವಲ್ಲದೆ ಸರ್ಕಾರಕ್ಕೂ ಆದಾಯ ನಷ್ಟವಾಗುತ್ತದೆ. ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಲ್ಲಿ ಸೀಮಿತ ಸಂಖ್ಯೆಯ ಮತದಾರರು ಇರುವುದರಿಂದ ಮತದಾನದ ದಿನ,ಮತದಾನದ ಸಮಯವರೆಗೆ ಮಾತ್ರ ಮದ್ಯದಂಗಡಿ ಬಂದ್ ಮಾಡಿ ಮತದಾನ ಮುಗಿದ ನಂತರ ಅಂಗಡಿಗಳನ್ನು ತೆರೆಯಲು ಹಾಗೂ ಮತ ಎಣಿಕೆ ದಿನದಂದು ಎಣಿಕೆ ಕೇಂದ್ರದ 3 ಕಿ.ಮೀ.ವ್ಯಾಪ್ತಿಯೊಳಗೆ ಇರುವ ಸನ್ನದುಗಳನ್ನು ಮಾತ್ರ ಬಂದ್ ಮಾಡಬೇಕು.
ಈ ಬೇಡಿಕೆಗಳನ್ನು ರಾಜ್ಯ ಸರ್ಕಾರ, ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ತಂದು ಸಮಸ್ಯೆ ಬಗೆಹರಿಸಬೇಕೆಂದು ಹೋಟೆಲ್ ಅಸೋಸಿಯೇಷನ್ ಯಿಂದ ಮನವಿ ಮಾಡಿದೆ..