Neha Hiremath Case: ನಿರಂಜನ್ ಹಿರೇಮಠ ಮೇಲೆ ಖೊಟ್ಟಿ ಜಾತಿ ಪ್ರಮಾಣ ಪತ್ರ ಆರೋಪ: ಬೆಂಗಳೂರಿನಲ್ಲಿ ಪ್ರಮಾಣ ಪತ್ರ ತಂದ ನಿರಂಜನ್

ಹುಬ್ಬಳ್ಳಿ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದಷ್ಟೇ ಅಲ್ಲದೇ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಇದರ ಬೆನ್ನಲ್ಲೇ ಅಂಜಲಿ‌ ಕೊಲೆಯೂ ಆಗಿದ್ದರಿಂದ ಅಂಜಲಿ ಕೊಲೆ ಹಿಂದೆ ವಿಜಯ್ ಅಲಿಯಾಸ್ ಈರಣ್ಣ ಕೈವಾಡ ಇದೆ ಎಂದು ದಲಿತ ಸಂಘಟನೆಗಳು ಸಿಐಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು.. ಅಂಜಲಿ ಕೊಲೆ ಕೇಸ್ ನಲ್ಲಿ ಕೆಲ ದಲಿತ ಸಂಘಟನೆಗಳು ಸಮರ್ಪಕ ತನಿಖೆ ನಡೆಯಬೇಕೆಂದು ಮನವಿ ಮಾಡಿದ್ದರು. ‌ದಲಿತ ಸಂಘಟನೆಗಳ ಮನವಿ ಬೆನ್ನಲ್ಲೆ ಅಂಜಲಿ ಸಹೋದರಿ ಕೂಡಾ ಈರಣ್ಣ ನ ತನಿಖೆ ಮಾಡಬೇಕು ಅವನು ನಿರಂಜನ್ ಹಿರೇಮಠ ಪಿಎ ಆಗಿದ್ದನು ಅನ್ನೊದನ ಜನತೆಯ ಮುಂದೆ ಇಟ್ಟಿದಳು… ಇದೀಗ ಬೇಡ ಜಂಗಮ‌ ಸರ್ಟಿಫಿಕೇಟ್ ಪಡೆದುಕೊಂಡಿರೋ ನೇಹಾ ಹಿರೇಮಠ ಜಾತಿ ಸರ್ಟಿಫಿಕೇಟ್ ಅನ್ನು ಹುಬ್ವಳ್ಳಿಯ ಸಮತಾ ಸೇನೆ ಹಾಗು ವಿವಿಧ ದಲಿತ ಸಂಘ ಸಂಸ್ಥೆಗಳ‌ ಮಹಾ ಮಂಡಳಿ ಇದನ್ನ ಖಂಡಿಸಿದ್ದಾರೆ..ಬೇಗೂರ ರೋಡ ಹೊಂಗಸಂದ್ರ ವಾರ್ಡ್ ನಂಬರ್ 135 ರಲ್ಲಿ ಬೇಡ ಜಂಗಮ ಸರ್ಟಿಫಿಕೇಟ್ ಪಡೆದುಕೊಂಡಿರುವ ನೇಹಾ ಹಿರೇಮಠ ಜಾತಿ ಪ್ರಮಾಣ ಪತ್ರ ಮುನ್ನೆಲೆಗೆ ಬಂದಿದ್ದು.

ನೇಹಾ ಹಿರೇಮಠ ಹುಬ್ಬಳ್ಳಿಯ ರಹವಾಸಿ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯೆ ಈ ಪ್ರಕರಣದ ನಂತರ ರಾಜ್ಯದ ರಾಷ್ಟ್ರದ ಅನೇಕ ಲಿಂಗಾಯತ ಶರಣರು -ಮುಖಂಡರು ಇವರ ನಿವಾಸಕ್ಕೆ ತೆರಳಿದ್ದು ಸಂತೈಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ? ಆದರೆ ಲಿಂಗಾಯತರಲ್ಲೇ ಶ್ರೇಷ್ಟ ಜಂಗಮ ಗುರುಗಳಸ್ಥಾನದಲ್ಲಿರುವ ನಿರಂಜನ ಹಿರೇಮಠ ತಾನು ಸಹ ಪರಿಶಿಷ್ಟ ಎಂಬ ಹಣೆಪಟ್ಟಿಯನ್ನ ಸ್ರಷ್ಟಿಸಿಕೊಂಡು ಖೊಟ್ಟಿ ಜಾತಿ ಪ್ರಮಾಣಪತ್ರವನ್ನ ಪಡೆದು ಮೂಲ ಪರಿಶಿಷ್ಟರಿಗೆ ವಂಚಿಸುವ ಹುನ್ನಾರ ಎದ್ದು ಕಾಣುತ್ತಿದ್ದು ಬೆಂಗಳೂರು ಹೊಂಗಸಂದ್ರದ ಮೂಲಕ ಪಡೆದ ನೇಹಾ ನಿರಂಜನ ಹಿರೇಮಠ ಳ “ಬೇಡಜಂಗಮ “ಪಜಾ ಜಾತಿಪ್ರಮಾಣ ಪತ್ರ ಎನ್ನುವುದು ಈಗ ಸಮತಾ ಸೇನಾ ಕರ್ನಾಟಕ ಮತ್ತು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ(ರಿ) ಸಂಘಟನೆಯ ತನಿಖೆಯಿಂದ ತಿಳಿದುಬಂದ ಮಾಹಿತಿಯನ್ವಯ RD0038208524200 ಈ ಜಾತಿಪ್ರಮಾಣಪತ್ರ ನೀಡಿದ ಅಧಿಕಾರಿಗಳ ಸಹಿತ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ವಹಿಸಲು ಮಾನ್ಯಡಿಸಿಆರ ಇ ಅಧಿಕಾರಿಗಳು ತಕ್ಷಣ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಆಗ್ರಹಿಸಿ ದೂರೂ ಸಲ್ಲಿಸಲಾಗಿದೆ…

More News

You cannot copy content of this page