ಬೆಂಗಳೂರು: ವಸತಿ ಶಾಲೆಗಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (ಅರ್‌ಟಿಐ) 2009 ಕಾಯಿದೆಯ ಅಂಶಗಳು ಅನ್ವಯವಾಗುತ್ತವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ
ಸರಕಾರದಿಂದ ಯಾವುದೇ ಅನುದಾನವಿಲ್ಲದೆ ಐಸಿಎಸ್‌ಇ ಶಾಲೆ ನಡೆಸುತ್ತಿರುವ ಮೈಸೂರಿನ ಜ್ಞಾನ ಸರೋವರ ಎಜುಕೇಷನ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ನೀಡಿದೆ.
ಆರ್‌ಟಿಇ ಕಾಯಿದೆಯಲ್ಲಿನ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಶಿಕ್ಷಣ ಇಲಾಖೆ ಅಕಾರಿಗಳು 2021ರ ನ.23ರಂದು 1.61 ಕೋಟಿ ರೂ. ದಂಡ ವಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
.
ಅಲ್ಲದೆ, ಆರ್‌ಟಿ ಇ ಕಾಯಿದೆ ನಿಯಮ 18ರ ಪ್ರಕಾರ ಮತ್ತು ಕರ್ನಾಟಕ ಆರ್‌ಟಿಇ ಕಾಯಿದೆ ನಿಯಮ 11ರಂತೆ, ನಮೂನೆ-1ರಂತೆ ಸರಕಾರ ಹೊರತುಪಡಿಸಿ ಇತರೆ ಎಲ್ಲಾ ಶಾಲೆಗಳು ಸಕ್ಷಮ ಪ್ರಾಕಾರದಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲೇಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಆರ್‌ಟಿಇ ಕಾಯಿದೆಯ ಸೆಕ್ಷನ್ 18(1) ಅನ್ನು ಉಲ್ಲೇಖಿಸಿ, ಕಾಯಿದೆಯ ಗೆಜೆಟ್ 2012ರ ಏ.28ರಂದು ಆಗಿದೆ, ಆದಾದ ನಂತರ ಆರು ತಿಂಗಳಲ್ಲಿ ಶಾಲೆಯನ್ನು ನೋಂದಣಿ ಮಾಡಿ ಮಾನ್ಯತೆ ಪಡೆಯಬೇಕಿತ್ತು
, ಆ ಮೂಲಕ ನಿಯಮ ಉಲ್ಲಂಘನೆ ಮಾಡಲಾಗಿದೆ. ಅರ್ಜಿದಾರರಿಗೆ ಕಾಯಿದೆಯ ಬಗ್ಗೆ ಅನಗತ್ಯವಾಗಿ ವಿಳಂಬ ಮಾಡಿದ್ದಾರೆ.
ಹಾಗಾಗಿ ಇಲಾಖೆ ದಂಡ ವಿಸಿ ಕೈಗೊಂಡಿರುವ ಕ್ರಮ ಸರಿಯಾಗಿದೆಯೇ ಇದೆ’
ಪ್ರಕರಣದ ಹಿನ್ನೆಲೆ: ಡಿ.ಬಾಲಕೃಷ್ಣಪ್ಪ ಮತ್ತು ವಿಲಿಯಂ ಯೇಸುದಾಸ್ ಎನ್ನುವವರು ಶಾಲೆ ಆರ್‌ಟಿಇ ಅಡಿ ಮಾನ್ಯತೆಯನ್ನು ಪಡೆದಿಲ್ಲಘಿ, ಹಾಗಾಗಿ ಅದರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕೆದು ಶಿಕ್ಷಣ ಇಲಾಖೆಯ ಅಕಾರಿಗಳನ್ನು ಕೋರಿದ್ದರು. ಅಕಾರಿಗಳು ಮೊದಲಿಗೆ 2016ರ ಡಿ.19ಕ್ಕೆ ಹಾಜರಾಗುವಂತೆ ಶಾಲೆಯ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿತ್ತು. ಆದರೂ ಅವರು ಹಾಜರಾಗಲಿಲ್ಲಘಿ. ಆನಂತರ 2017ರ ಜ.12ಕ್ಕೆ ಶಿಕ್ಷಣ ಇಲಾಖೆ ಮತ್ತೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತುಘಿ, ಅದಕ್ಕೆ ಉತ್ತರಿಸಿದ್ದ ಶಾಲೆ ತಮ್ಮದು ವಸತಿ ಶಾಲೆ, ಅದು ಆರ್‌ಟಿಇ ಕಾಯಿದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಆಕ್ಷೇಪ ಎತ್ತಿದ್ದರು.
ಆನಂತರ ಬಿಇಒ, 2017ರಲ್ಲಿ ಮತ್ತೊಂದು ನೋಟಿಸ್ ಜಾರಿಗೊಳಿಸಿ, ಡಿಡಿಪಿಐ ಆದೇಶದಂತೆ ಆರ್‌ಟಿ ಇ ಕಾಯಿದೆಯಡಿ ವಿದ್ಯಾರ್ಥಿಗಳ ವಿವರಗಳನ್ನು ಅಪ್‌ಲೋಡ್ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದ್ದರು. ಆನಂತರ ಜಿಲ್ಲಾ ಪಂಚಾಯ್ತಿ ಸಿಇಒ, ಡಿಡಿಪಿಐಗೆ ಆರ್‌ಟಿಇ ಕಾಯಿದೆ ಸೆಕ್ಷನ್ 18 ಪಾಲನೆ ಮಾಡದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದರು. ಆನಂತರವೂ ಷೋಕಾಸ್ ನೀಡಿ, ನಿಯಮ ಉಲ್ಲಂಸಿರುವುದಕ್ಕೆ ನಿಮಗೆ ದಂಡ ವಿಸಬಾರದೇಕೆ ಎಂದು ಕೇಳಿದ್ದರು. ಶಾಲೆಯ ಅಕೃತ ಪ್ರತಿನಿಯೊಬ್ಬರು ಡಿಡಿಪಿಐ ಮುಂದೆ ಹಾಜರಾಗಿದ್ದರು. ಆನಂತರ ಡಿಡಿಪಿಐ 1,60,50,000 ಕೋಟಿ ರೂ. ದಂಡ ವಿಸಿದ್ದರು. ಅದನ್ನು ಪ್ರಶ್ನಿಸಿ ಶಾಲೆಯ ಆಡಳಿತ ಮಂಡಳಿ ಹೈಕೋರ್ಟ್ ಮೊರೆ ಹೋಗಿತ್ತು