ದಿನಾಂಕ: 01.06.2024 ರಿಂದ 24.06.2024 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವು 7.307 ಟಿಎಂಸಿ ಇದ್ದು, ಆದರೆ, ಇದೇ ಅವಧಿಯಲ್ಲಿ 30 ವರ್ಷಗಳ ಸರಾಸರಿ (1989-90 ರಿಂದ 2018-19) ಒಳಹರಿವು 24.448 ಟಿಎಂಸಿ ಇರುತ್ತದೆ. ಪ್ರಸ್ತುತ ವರ್ಷದ ಒಳಹರಿವನ್ನು 30 ವರ್ಷಗಳ ಒಳಹರಿವಿನ ಸರಾಸರಿಗೆ ಹೋಲಿಸಿದರೆ, ಶೇಕಡ 29.887 ರಷ್ಟು ಕಡಿಮೆ ಇರುತ್ತದೆ.
ಪ್ರಾಧಿಕಾರವು ತಮಿಳುನಾಡಿಗೆ ಯಾವುದೇ ದೀರ್ಘಕಾಲಿಕ ಬೆಳೆಗಳಿಗೆ ಅನುಮತಿ ನೀಡದಿದ್ದರೂ ದಿನಾಂಕ: 01.02.2024 ರಿಂದ 31.05.2024 ರವರೆಗೆ ತಮಿಳುನಾಡು ಮೆಟ್ಟೂರು, ಭವಾನಿ ಮತ್ತು ಅಮರಾವತಿ ಜಲಾಶಯಗಳಿಂದ 35.565 ಟಿಎಂಸಿ ನೀರನ್ನು ಬಳಸಿಕೊಂಡಿದೆ. ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ 70.113% ಸಂಕಷ್ಟದ ಪರಿಸ್ಥಿತಿಗಳಿದ್ದರೂ, ತಮಿಳುನಾಡು ತನ್ನ ಜಲಾಶಯಗಳಿಂದ ಇಲ್ಲಿಯವರೆಗೆ 3.97 ಟಿಎಂಸಿಯಷ್ಟು ನೀರನ್ನು ನದಿಗೆ ಬಿಡುಗಡೆ ಮಾಡುತ್ತಿದೆ.
ಕುಡಿಯುವ ನೀರಿನ ಉದ್ದೇಶಕ್ಕಾಗಿ ಕರ್ನಾಟಕವು ತನ್ನ ನಾಲ್ಕು ಜಲಾಶಯಗಳಲ್ಲಿ ಸಂಗ್ರಹಣೆಗಳನ್ನು ಸಂರಕ್ಷಿಸಲು ಕಾಲುವೆಗಳಲ್ಲಿ ನೀರನ್ನು ಬಿಡುಗಡೆ ಮಾಡಿರುವುದಿಲ್ಲ.
ಜುಲೈ ಅಂತ್ಯದವರೆಗಿನ ಹೈಡ್ರಾಲಜಿಕಲ್ ಸನ್ನಿವೇಶವನ್ನು ಪರಿಗಣಿಸಿ, ಪರಿಸ್ಥಿತಿಯನ್ನು ಗಮನಿಸಿ, ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಬಹುದು.
ಕರ್ನಾಟಕದಲ್ಲಿನ ಮುಂಗಾರು ಮತ್ತು ನಾಲ್ಕು ಜಲಾಶಯಗಳ ಒಳಹರಿವನ್ನು ಪರಿಗಣಿಸಿ ಅದಕ್ಕನುಗುಣವಾಗಿ ನೀರು ಬಿಡುಗಡೆ ಮಾಡುವುದನ್ನು ಕರ್ನಾಟಕವು ಪರಿಗಣಿಸುತ್ತದೆ.
ದಿನಾಂಕ: 24.06.2024 ರಂತೆ ಬಿಳಿಗುಂಡ್ಲುವಿನಲ್ಲಿ 5.367 ಟಿಎಂಸಿ ಕೊರತೆಯ ಒಳಹರಿವು ಮತ್ತು ಜೂನ್ 2024 ರ ಉಳಿದ ಅವಧಿಗೆ ಮತ್ತು ಜುಲೈ 2024 ಕ್ಕೆ 31.24 ಟಿಎಂಸಿ ನೀರನ್ನು ಕಾವೇರಿ ನ್ಯಾಯಾಧೀಕರಣದ ಅಂತಿಮ ಆದೇಶದಂತೆ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಹಾಗೂ ಗೌರವಾನ್ವಿತ ಉಚ್ಛನ್ಯಾಯಾಲಯದಿಂದ ಮಾರ್ಪಡಿಸಿದ ಆದೇಶದಂತೆ ಖಚಿತಪಡಿಸಿಕೊಳ್ಳಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಒತ್ತಾಯಿಸಿತು.
ಅಂತಿಮವಾಗಿ, CWMA ಯು ಈ ಕೆಳಕಂಡಂತೆ ನಿರ್ಧರಿಸಿದೆ:
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಜಲಾಶಯಗಳಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಾಗೂ ಸಸ್ಯ ಮತ್ತು ಪ್ರಾಣಿ ಸಂಕುಲದ ಪೋಷಣೆಗಾಗಿ ಪರಿಸರದ ಹರಿವುಗಳಿಗಾಗಿ ನೀರನ್ನು ಸಂರಕ್ಷಿಸುವುದು.
ದಿನಾಂಕ: 26.07.2024 ರ ಸುಮಾರಿಗೆ ಮುಂದಿನ ಸಭೆಯ ವೇಳಾ