Search

Illegal Liquor Seized: ಅಕ್ರಮ ಸರಾಯಿ ಜಾಲವನ್ನು ಭರ್ಜರಿ ಬೇಟೆಯಾಡಿದ ಧಾರವಾಡ ಪೊಲೀಸ್: 32 ಲಕ್ಷದ ಅಕ್ರಮ ಸಾರಾಯಿ ವಶ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಳೆದ ಒಂದು ವರ್ಷದಿಂದ ಸಾಲು ಸಾಲು ಕೊಲೆಗಳು ಹಾಗು ಶಾಂತಿ ಕದಡುವ ಘಟನೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದ್ದು ಅಕ್ರಮ ಸರಾಯಿ ಮಾರಾಟದ ದೊಡ್ಡ ಜಾಲವನ್ನು ಪತ್ತೆಹಚ್ಚಿದ್ದಾರೆ…..
ಹುಬ್ಬಳ್ಳಿ-ಕಾರವಾರ ಹೈವೇ ರಸ್ತೆ ಬದಿಗೆ ಮಿಶ್ರಿಕೋಟಿ ಕ್ರಾಸ ಹತ್ತಿರ ಪಾಟೀಲ ಎನ್ನುವವರ ಗೋಡಾವನದಲ್ಲಿ ಎಡ್ರಿಯಲ್ ಕಂಪನಿಯ ವಿಸ್ಕಿ. ಓಡ್ಕಾ ಬಾಕ್ಸ್ಗಳನ್ನು ತಂದು ಯಾವುದೇ ಪರಿಟ್ ಇಲ್ಲದೇ ಗೋಡಾವನದಲ್ಲಿ ಬಾಟಲಿಯಿಂದ ಸರಾಯಿ ತೆಗೆದು ಅದಕ್ಕೆ ಅಮಲು ಬರುವ ಪ್ರದಾರ್ಥಗಳನ್ನು ಬಳಸಿಕೊಂಡು ಎಸೆನ್ಸ್ ದ್ರವ್ಯ ಹಾಗೂ ಬಣ್ಣ ಮಿಶ್ರಣ ಮಾಡಿ ಕರ್ನಾಟಕದ ಇಂಪಿರಿಯಲ್ ಬ್ಲೂ ಕಂಪನಿಯ ಸರಾಯಿ ಖಾಲಿ ಬಾಟಲಿಗಳಲ್ಲಿ ತುಂಬಿ ಡುಪ್ಲಿಕೇಟ್ ಕ್ಯಾಪ್ & ಶೀಲ್ ಮಾಡಿ ಅದಕ್ಕೆ ಡುಪ್ಲಿಕೇಟ್ ಇಂಪಿರಿಯಲ್ ಬ್ಲ್ಯೂ ಕಂಪನಿಯ ಲೇಬಲಗಳು ಅಂಟಿಸಿ ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ತಯಾರಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸ್ ದಾಳಿ ಮಾಡಿದ್ದ ಈ ವೇಳೆ 4 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ , ಅವರಿಂದ ಒಟ್ಟು.. 32,00,000/- ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಸರಾಯಿ ಹಾಗೂ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದು, ಈ ಕುರಿತು ಕಲಘಟಗಿ ಪೊಲೀಸ್ ಠಾಣೆ 183/2024 ಕರ್ನಾಟಕ ಅಬಕಾರಿ ಕಾಯ್ದೆ & ಹೋಸ ಬಿ.ಎನ್.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖಾ ಕಾರ್ಯ ಮುಂದುವರೆದಿರುತ್ತದೆ.

ಸದರಿ ಅಕ್ರಮ ಸರಾಯಿ ತಯಾರಿಸುತ್ತಿದ್ದ ಕಳ್ಳರ ಅಮುಲು ಬಿಡಿಸಿದ ಸೂಪರ್ ಕಾಪ್ಸ್ ತಂಡದಲ್ಲಿರುವ ಕಲಘಟಗಿ ಪೊಲೀಸ್ ಠಾಣೆಯ ಶ್ರೀಶೈಲ್ ಕೌಜಲಗಿ ಪಿಐ, ಬಸವರಾಜ ಯದ್ದಲಗುಡ್ಡ ಪಿಎಸ್‌ಐ, ಆ‌ರ್.ಎಮ್ ಸಂಕಿನದಾಸರ ಹಾಗೂ ಸಿಬ್ಬಂದಿ ಜನರಾದ ಲೊಕೇಶ ಬೆಂಡಿಕಾಯಿ ಹಾಗು ಕಾರ್ಯಚರಣೆಯ ತಂಡದ ಕರ್ತವ್ಯ ನಿಷ್ಠೆಯನ್ನು ಪ್ರಶಂಶಿಸಿ, ಪೊಲೀಸ್ ಅಧೀಕ್ಷಕರು,ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಿರುತ್ತಾರೆ.

More News

You cannot copy content of this page