FIRE ACCIDENT IN BELAGAVI TAPE FACTORY: ಭೀಕರ ಅಗ್ನಿ ದುರಂತ: ಒರ್ವ ಸಾವು

ಬೆಳಗಾವಿ: ಬೆಳಗಾವಿಯ ಸ್ನೇಹಂ ಟೇಪ್ ಮ್ಯಾನಿಫ್ಯಾಕ್ಚರಿಂಗ್ ಕಾರ್ಖಾನೆಗೆ ಬೆಂಕಿ ಬಿದ್ದು ‌ದೊಡ್ಡ ಅನಾಹುತವೇ ನಡೆದು ಹೋಗಿದೆ.‌ಘಟನೆಯಲ್ಲಿ ಓರ್ವ ಸಜೀವ ದಹನವಾಗಿದ್ದು ಸತತ 16 ಗಂಟೆಗಳ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಹೊರ ತೆಗೆಯಲಾಯ್ತು.ಮನೆ ಮಗನ‌ ಕಳೆದಯಕೊಂಡ ಕುಟುಂಬಸ್ಥರ ಆಕ್ರಂದಣ ಮುಗುಲು ಮುಟ್ಟಿದ್ದರೆ ಇತ್ತ ಧಗಧಗಿಸುವ ಜ್ವಾಲೆ ಇನ್ನು ಕಡಿಮೆಯಾಗಿಲ್ಲ ನಿರಂತರ ಕಾರ್ಯಾಚರಣೆಯ ಒಂದು ವರದಿ ಇಲ್ಲಿದೆ‌ ನೋಡಿ…

ನಿನ್ನೆ ಸಂಜೆಯ ವೇಳೆ ಬೆಳಗಾವಿಯ ನಾವಗೇ ಬಳಿ ಇರುವ ಸ್ನೇಹಂ ಟೇಪ್ ಮ್ಯಾನಿಫ್ಯಾಕ್ಚರಿಂಗ್ ಕಾರ್ಖಾನೆಗೆ ಬೆಂಕಿ ಬಿದ್ದು ಕಾರ್ಖಾನೆ ಸಂಪೂರ್ಣ ಭಸ್ಮವಾಗಿತ್ತು. ಸುದ್ದಿ ತಿಳದ ನಂತರ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಹಾಗೂ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಘಟನೆಯಲ್ಲಿ ಗಾಯಗೊಂಡ ಮೂವರನ್ನು ನಗರದ ಖಾಸಗಿ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಲಾಗ್ತಿದೆ. ಆದರೆ ನಿನ್ನೆಯಿಂದ ಲಿಫ್ಟ್ ನಲ್ಲಿ ಕಣ್ಮರೆಯಾಗಿದ್ದ ಯಲ್ಲಪ್ಪ ಗುಂಡ್ಯಾಗೋಳ‌ ಸುಳಿವು ಇಂದು ಮಧ್ಯಾಹ್ನದ ತನಕ ಸಿಕ್ಕಿರಲಿಲ್ಲ. ನಿರಂತರ ಮಳೆ‌ಯ ನಡುವೆಯೂ ಅಗ್ನಿಶಾಮಕದಳದ ಸಿಬ್ಬಂಧಿ ಕಾರ್ಯಾಚರಣೆ ನಡೆಸಿ ಸಜೀವ ದಹನವಾಗಿದ್ದ ಯಲ್ಲಪ್ಪ ಗುಂಡ್ಯಾಗೋಳ‌ ಮೃತದೇಹದ ಅವಶೇಷಗಳನ್ನು ಹೊರ ತೆಗೆದರು ಈ ವೇಳೆ ಕುಟುಂಬಸ್ಥರು ಹಾಗು ಸಂಬಂಧಿಕರ ಆಕ್ರಂದಣ ಮುಗಿಲು ಮುಟ್ಟಿತ್ತು.ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತ್ಯಕ್ಷದರ್ಶಿ ಹಾಗು ಯಲ್ಲಪ್ಪನ ಮಾವ ಮೃತ ಯಲ್ಲಪ್ಪನ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು..

ನಿನ್ನೆಯಿಂದ ಸತತ 16 ಗಂಟೆ ಕಾರ್ಯಾಚರಣೆ ನಡೆಸಿದರೂ ಬೆಂಕಿ ಹತೋಟಿಗೆ ಬರಲಿಲ್ಲ ನಿರಂತವಾಗಿ ಮಳೆಯ‌ ನಡುವೆಯೂ ಸಹ ಬೆಂಕಿ ಧಗಧಗಿಸುತ್ತಿತ್ತು.25 ಮೀಟರ್ ಅಗಲದ 84 ಮೀಟರ್ ಉದ್ದದ ಬೃಹತ್ ಫ್ಯಾಕ್ಟರಿಯ ಮೇಲ್ಚಾವಣಿಗಳು ಕುಸಿದು ಕಟ್ಟಡದ ಒಳಗೆ ಬಿದ್ದಿದ್ದರಿಂದ ಬೆಂಕಿ‌ನಂದಿಸುವ ಕೆಲಸ ಅಗ್ನಿಶಾಮಕ‌ದಳದ ಸಿಬ್ಬಂಧಿಗೆ ತಲೆನೋವಾಗಿತ್ತು.ಹೀಗಾಗಿ ಕಾರ್ಖಾನೆಯ ಎರಡು ಕಡೆ ಜೆಸಿಬಿಗಳಿಂದ ಗೋಡೆಗಳನ್ನು ಕೆಡವಿ ನಂತರ ಕಾರ್ಯಾಚರಣೆ ಪ್ರಾರಂಭ ಮಾಡಿದ್ದರಿಂದ ಬೆಂಕಿ ಹತೋಟಿಗೆ ಬಂತು. ಒಟ್ಟು 450 ಜನ ಕೆಲಸ ಮಾಡುವ ಕಾರ್ಖಾನೆಯಲ್ಲಿ ನಿನ್ನೆ ಅವಘಡ ಸಂಭವಿಸಿದಾಗ ಬರೊಬ್ಬರಿ 150 ಜನ ಕೆಲಸದ ಮೇಲಿದ್ದರು. ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕಾರ್ಖಾನೆ ಮಾಲೀಕ ಅನೀಷ್ ಮೈತ್ರಾಣಿ ಮೃತ ಯಲ್ಲಪ್ಪನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಕೊಡ್ತಿವಿ ಅವರ ಕುಟುಂಬಸ್ಥರೊಬ್ಬರಿಗೆ ಕೆಲಸ ಕೊಡ್ತಿವಿ ಎಂದು ಹೇಳಿಕೆ ನೀಡಿದರು. ಎಲ್ಲಾ ನಿಯಮದ ಪ್ರಕಾರ ಸುರಕ್ಷಾ ಕ್ರಮಗಳನ್ನು ಅನುಸರಿಸಿದರೂ ಸಹ ದುರ್ಘಟನೆ ನಡೆದಿದೆ ಎಂದರು..

ಒಟ್ಟಿನಲ್ಲಿ ಆಕಸ್ಮಿಕವಾಗಿ ನಡೆದ ಅವಘಡದಿಂದ ಬಡ ಕುಟುಂಬದ ಮನೆಮಗನೊಬ್ಬ ತನ್ನ‌ ಜೀವ ಕಳೆದುಕೊಂಡಿದ್ದಾನೆ‌. ಇನ್ನು ನಿತ್ಯದ ದುಡಿಮೆಗೆ ಇದೇ ಕಾರ್ಖಾನೆ ನೆಚ್ಚಿಕೊಂಡಿದ್ದ ನೂರಾರು ಕಾರ್ಮಿಕರು ಸಧ್ಯ ಕೆಲಸವಿಲ್ಲದೆ‌ ಖಾಲಿ ಕೂರುವ ಪರಿಸ್ಥಿತಿ ‌ನಿರ್ಮಾಣವಾಗಿದೆ. ಅದೇನೆ ಇರಲಿ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಯಲ್ಲಪ್ಪನ ಕುಟುಂಬಕ್ಕೆ‌ ಜಿಲ್ಲಾಡಳಿತ ಹಾಗೂ ಸರ್ಕಾರ ನೆರವು ನೀಡಲಿ ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಅಗ್ನಿಶಾಮಕ‌ ಇಲಾಖೆ ತನ್ನ ನಿಯಮಗಳನ್ನು‌ ಇನ್ನಷ್ಟು ಬಿಗಿಗೊಳಿಸಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ

More News

You cannot copy content of this page