ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಆನಂದ ನಗರದ ಕುಷ್ಠರೋಗ ಆಸ್ಪತ್ರೆಯ ಬಳಿಯಲ್ಲಿನ ಶೆಡ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ 9 ಜನ ಆರೋಪಿಗಳನ್ನು ಕಂಬಿ ಹಿಂದೆ ತಳ್ಳಿದ್ದಾರೆ.
ಇಂದು ಬೆಳಗಿನ ಜಾವ 5.30ಕ್ಕೆ ಮೀರಜ್ ಮೂಲದ ಆಸ್ಪಕ್ ಎಂಬಾತ ಗಾಂಜಾ ತಂದು ಮಾರಾಟ ಮಾಡುತ್ತಿದ್ದ. ಇದರ ಖಚಿತ ಮಾಹಿತಿಯನ್ನು ಆಧರಿಸಿ ಹಳೇ ಹುಬ್ಬಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ಹಳ್ಳೂರ ನೇತೃತ್ವದ ತಂಡ ದಾಳಿ ಮಾಡಿದೆ. ಆಗ ಆರೋಪಿಗಳ ಬಳಿ 125000 ಮೌಲ್ಯದ 1500 ಗ್ರಾಂ ಗಾಂಜಾ ಜೊತೆಗೆ 9 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಆಸ್ಪಕ್, ಶಿವಕುಮಾರ, ಇಟ್ಬಾಲ್, ಆರೀಫ್, ಅಭಿಷೇಕ್, ಅಮೃತ, ಮೊಹ್ಮದ ರೆಹಾನ್, ಸಾಧಿಕ್ ಹಾಗೂ ಮೆಹಬೂಬ್ ಅಂತಾ ಗುರುತಿಸಲಾಗಿದೆ.
1500 ಗ್ರಾಂ ಗಾಂಜಾ ಜೊತೆಗೆ 9 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಆಸ್ಪಕ್, ಶಿವಕುಮಾರ, ಇಟ್ಬಾಲ್, ಆರೀಫ್, ಅಭಿಷೇಕ್, ಅಮೃತ, ಮೊಹ್ಮದ ರೆಹಾನ್, ಸಾಧಿಕ್ ಹಾಗೂ ಮೆಹಬೂಬ್ ಅಂತಾ ಗುರುತಿಸಲಾಗಿದೆ. ಒಟ್ಟು 9 ಜನ ಆರೋಪಿಗಳ ವಿರುದ್ಧ ಇದೀಗ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಸ್‌ಪೆಕ್ಟರ್ ಸುರೇಶ ಹಳ್ಳೂರ ಅವರ ನೇತೃತ್ವದ ತಂಡಕ್ಕೆ ಕಮಿಷನರ್ ಎನ್. ಶಶಿಕುಮಾರ್ ಹಾಗೂ ಡಿಸಿಪಿಗಳಾದ ರವೀಶ್ ಹಾಗೂ ನಂದಗಾವಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡ್ರಗ್ಸ್ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಲೇ ಇರುತ್ತದೆ ಎಂದು ಡ್ರಗ್ಸ್ ಕುಳಗಳಿಗೆ ಅವಳಿ ನಗರದ ಪೊಲೀಸರು ತಮ್ಮ ಕೆಲಸದ ಮೂಲಕ ಉತ್ತರ ನೀಡುತ್ತಿದ್ದಾರೆ.