ಶಿಗ್ಗಾಂವ: ಕಳೆದ ತಿಂಗಳು ಶಿಗ್ಗಾಂವ ತಾಲೂಕಿನ ತಡಸ್ ಗ್ರಾಮದ ಬಡ ಕುಟುಂಬದ ಶಾಹೀದ್ ಮಿಠಾಯಿಗಾರ್ ಸಾಲದ ಸುಳಿವಿನಲ್ಲಿ ಸಿಕ್ಕು ಆತ್ಮಹತ್ಯೆ ಮಾಡಿಕೊಂಡು ಮರಣ ಹೊಂದಿದ ನಂತರ ಆತನ ಕುಟುಂಬದ ಆರ್ಥಿಕ ಸಂಕಷ್ಟ ಅರಿತ ಶಿಗ್ಗಾಂವ ಕ್ಷೇತ್ರದ ಕಾಂಗ್ರೆಸ್ ನಾಯಕ ತಡಸ್ ಗ್ರಾಮಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವಾನದ ಜೊತೆಗೆ ನಿಮ್ಮ ಮನೆಯ ಸದಸ್ಯನಾಗಿ ನಾನು ನಿಮ್ಮ ಜೊತೆ ಇರುವೆ ಎಂದು ವಾಗ್ದಾನ ಮಾಡಿದ್ದರು …
ಕೊಟ್ಟ ಮಾತಿನಂತೆ ಈ ಘಟನೆಯ ಸಂಪೂರ್ಣ ವಿವರವನ್ನು ಸಚಿವ ಜಮೀರ್ ಅಹ್ಮದ್ ಅವರ ಗಮನಕ್ಕೆ ತಂದು ಸರ್ಕಾರದಿಂದ ಪರಿಹಾರ ಮತ್ತು ತಾವು ಆ ಊರಿಗೆ ಬಂದು ಆ ಕುಟುಂಬಕ್ಕೆ ಸಾಂತ್ವಾನ ಹೇಳಲು ಕೋರಿದಾಗ ಸಚಿವರು ಅವರ ಪರಿಸ್ಥಿತಿಯನ್ನು ನೋಡಿ ಅಲ್ಲೆ ಅವರ ವಯಕ್ತಿಕವಾಗಿ ಮೂರು ಲಕ್ಷ ಪರಿಹಾರ ಕೊಟ್ಟು ಮಾನವಿಯತೆ ಮೆರೆದರು…
ಆ ಒಂದು ವರುಷದ ಮಗುವಿನ ಹೆಸರಿನಲ್ಲಿ ಡೆಪಾಸಿಟ್ ಮಾಡಿದರೆ ಮುಂದಿನ ದಿನಗಳಲ್ಲಿ ಅವಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುತ್ತೆ ಅನ್ನುವ ಮಾತನ್ನು ಕುಟುಂಬದ ಸದಸ್ಯರಿಗೆ ಹೇಳಿ ಎಂತಹ ಸಮಯ ಬಂದರು ಎದೆಗುಂದ ಬೇಡಿ ನಾವು ಸದಾ ನಿಮ್ಮ ಜೊತೆ ಇರುತ್ತವೆ ಎಂದು ಹೇಳಿದಾಗ ಕುಟುಂಬದ ಸದಸ್ಯರು ಭಾವುಕರಾದ ಸನ್ನಿವೇಶ ನಡೆಯಿತು ಇದನ್ನು ಅರೆತ ಸಚಿವರು ನಾನು ನಿಮ್ಮ ಕುಟುಂಬದ ಸದಸ್ಯ ಯಾರು ಕಣ್ಣಿರು ಹಾಕಬೇಡಿ ನಿಮ್ಮ ಪ್ರೀತಿ ಇದ್ದರೆ ಸಾಕು ಭಗವಂತ ನನಗೆ ಇನ್ನಷ್ಟು ಶಕ್ತಿ ಕೊಡಲಿ ನಾನು ಬಡವರ ಸಹಾಯಕ್ಕೆ ಸದಾ ಸಿದ್ದ ಎಂದು ಹೇಳಿದರು….
ಇಂತಹ ಬಡ ಕುಟುಂಬ ಕಂಡಾಗ ನಿಂತಲ್ಲೆ ಪರಿಹಾರ ಕೊಡುವ ಜಮೀರ್ ಅಹ್ಮದ್ ಅವರ ಈ ಕಾರ್ಯಕ್ಕೆ ತಡಸ್ ಗ್ರಾಮದ ಜನರು ಸಂತಸ ವ್ಯಕ್ತಪಡಿಸಿದ್ದು ಇದರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದ ಯಾಸೀರ್ ಖಾನ್ ಫಠಾಣ ಅವರಿಗು ಕೃತಜ್ಞತಾ ಭಾವ ವ್ಯಕ್ತಪಡಿಸಿ ಜೈ ಕಾರದ ಮುಖಾಂತರ ನೆಚ್ಚಿನ ಸಚಿವರನ್ನು ಬಿಳ್ಕೊಟ್ಟರು..