ಒಂದೇ ದಿನ ಸತಿ, ಪತಿ ಸಾವು: ಸಾವಿನಲ್ಲೂ ಒಂದಾದ ದಂಪತಿ

ಹುಬ್ಬಳ್ಳಿ: ಇದೊಂದು ಅಪರೂಪದ ಘಟನೆ ಹೃದಯಾಘಾತದಿಂದ ಪತಿ ಸಾವನ್ನಪ್ಪಿದರೆ, ವಯೋಸಹಜ‌ ಕಾಯಿಲೆಯಿಂದ ಪತ್ನಿ ಮೃತಪಟ್ಟ ಘಟನೆ ಹುಬ್ಬಳ್ಳಿ ತಾಲೂಕಿನ ‌ಕುಸುಗಲ್ ಗ್ರಾಮದಲ್ಲಿ ನಡೆದಿದೆ.

ಕುಸುಗಲ್ ಗ್ರಾಮದಲ್ಲಿ ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಶಂಕ್ರಪ್ಪ ಹೊಂಬಳ ( 72) ಹೃದಯಾಘಾತದಿಂದ ನಿಧನರಾಗಿದ್ರು. ಮಧ್ಯಾಹ್ನ
ಒಂದು ಗಂಟೆಯ ಸುಮಾರಿಗೆ ಶಂಕ್ರಪ್ಪ ಪತ್ನಿ ಕೂಡ ಸಾವನ್ನಪ್ಪಿದ್ದಾರೆ.

ವಯೋಸಹಜ ಖಾಯಿಲೆಯಿಂದ 62 ವರ್ಷದ ಅನ್ನಪೂರ್ಣ ಸಾವನ್ನಪ್ಪಿದ್ದಾರೆ. ಒಂದೇ ದಿನ ಸತಿ ಪತಿ ಸಾವನ್ನಪ್ಪಿದ್ದು, ಸಾವಿನಲ್ಲೂ ಸತಿ, ಪತಿ ಒಂದಾಗಿದ್ದು, ಇಡೀ ಗ್ರಾಮದ ಜನ ಕಂಬನಿ ಮಿಡಿದಿದ್ದಾರೆ.

More News