ZAMEER AHMED KHAN: ಜಿಟಿಡಿ ಸತ್ಯ ಹೇಳಿದ್ದಾರೆ, ಅಶೋಕ್ ಪ್ರಕರಣ ದ ಬಗ್ಗೆ ಬಿಜೆಪಿ ನಾಯಕರು ಉತ್ತರಿಸಲಿ – ಜಮೀರ್ ಅಹಮದ್ ಖಾನ್

ಬೆಂಗಳೂರು :ಮುಡಾ ಪ್ರಕರಣ ಕ್ಕೆ ಸಂಬಂಧಿಸಿದಂತೆ ಜಿ.ಟಿ. ದೇವೇಗೌಡರು ಸತ್ಯ ಹೇಳಿದ್ದಾರೆ. ಇದನ್ನೇ ನಾವು ಮೊದಲಿನಿಂದ ಹೇಳಿಕೊಂಡು ಬಂದಿದ್ದೇವೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಡಾ ಪ್ರಕರಣ ದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ. ಹೀಗಾಗಿ ಅವರು ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎಂದು. ಮೊದಲ ದಿನದಿಂದ ನಾವು ಹೇಳುತತ್ತಲೇ ಇದ್ದೇವೆ. ಇದೀಗ ಜಿಟಿ ದೇವೇಗೌಡ, ಎಸ್ ಟಿ ಸೋಮಶೇಖರ್ ಹೇಳುತ್ತಿದ್ದಾರೆ. ಯಾವುದೇ ಕಾರಣ ಕ್ಕೂ ಸಿದ್ದರಾಮಯ್ಯ ರಾಜೀನಾಮೆ ಕೊಡುವುದಿಲ್ಲ. ಇವರೇ ಐದು ವರ್ಷಮುಖ್ಯಮಂತ್ರಿ ಯಾಗಿರಲಿದ್ದಾರೆ ಎಂದು ಹೇಳಿದರು.
ನಿವೇಶನ ವಾಪಾಸ್ ಮಾಡಿದ ನಂತರವೂ ಬಿಜೆಪಿ ನಾಯಕರು ಮುಖ್ಯಮಂತ್ರಿ ರಾಜೀನಾಮೆ ಕೇಳುತ್ತಿದ್ದಾರೆ. ಹಾಗಾದರೆ ಲೊಟ್ಟೆ ಗೊಲ್ಲ ಹಳ್ಳಿ ಪ್ರಕರಣದಲ್ಲಿ ನೋಟಿಫೈ ಆಗಿದ್ದ ಜಾಗ ಖರೀದಿಸಿ ಡಿ ನೋಟಿ ಫೈ ಮಾಡಿಸಿಕೊಂಡು ವಿವಾದ ಆದ ನಂತರ ಬಿಡಿಎ ಗೆ ವಾಪಸ್ ನೀಡಿದ್ದಾರೆ. ಹಾಗಾದರೆ ಅವರು ರಾಜೀನಾಮೆ ನೀಡ ಬೇಕಲ್ಲವೇ. ಇವರಿಗೊಂದು ಕಾನೂನು ನಮಗೆ ಒಂದು ಕಾನೂನು ಇರುತ್ತಾ ಎಂದು ಪ್ರೆಶ್ನೆ ಮಾಡಿದರು.
ನ್ಯಾಯಾಲಯ ತನಿಖೆ ಗೆ ಅದೇಶಿಸಿದೆ. ರಾಜೀನಾಮೆ ನೀಡಲು ಹೇಳಿಲ್ಲ. ತನಿಖೆ ನಡೆಯಲಿ ಸತ್ಯ ತಿಳಿಯಲಿದೆ ಎಂದರು.

More News

You cannot copy content of this page