PRAHLAD JOSHI ON CONGRESS: ಕಾಂಗ್ರೆಸ್ ಗ್ಯಾರಂಟಿ ಹೆಸರಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ: ಸಚಿವ ಪ್ರಹ್ಲಾದ ಜೋಶಿ ಕಿಡಿ

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಎಲ್ಲಾ ದರ ಏರಿಕೆ ಮಾಡಿ ಜನ ಸಾಮಾನ್ಯರ ನಿತ್ಯದ ಜೀವನಕ್ಕೆ ಕುತ್ತು ತಂದಿದೆ. ವಿದ್ಯುತ್ ದರ, ಹಾಲಿನದರ, ಡೀಸೆಲ್‌, ಪೆಟ್ರೋಲ್ ದರ ರಾಜ್ಯದಲ್ಲಿ ಏರಿಕೆ ಮಾಡಿದ್ದಾರೆ. ಆಸ್ತಿ ನೊಂದಣಿ, ಮದ್ಯದ ದರ ಏರಿಕೆ ಮಾಡಿದ್ದರು ಈಗ ಬಸ್ ದರ ಏರಿಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಹಿಮಾಚಲ ಪ್ರದೇಶದಲ್ಲಿ ಆಲ್ ಮೋಸ್ಟ್ ಗ್ಯಾರಂಟಿ ಯೋಜನೆ ನಿಲ್ಲಿಸುವ ಹಂತಕ್ಕೆ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕಾಗಿ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೆಸಲ್ಲ.. ಬರೀ ಸುಳ್ಳು ಹೇಳ್ತಾರೆ. ಸಾರಿಗೆ ನೌಕರಿಗೆ ಸಂಬಳ‌ ನೀಡಲು ಇವರಿಗೆ ಆಗುತ್ತಿಲ್ಲ. ಸಾರಿಗೆ ಸಂಸ್ಥೆಗಳಿಗೆ ಸಾಲ ಮಾಡಲು ಅನುಮತಿ ನೀಡಿದ್ದಾರೆ ರಾಜ್ಯ ಸರ್ಕಾರ ದಿವಾಳಿಯಾಗಿದೆ. ಎಲ್ಲಾ ದರ ಏರಿಕೆ ಮಾಡಿ ಮತ್ತೆ ಜನಕ್ಕೆ ಫ್ರೀ ಕೊಡತ್ತಾರೆ ಅಂತಾರೆ‌. ಒಬ್ಬರಿಂದ ಪಡೆದು ಮತ್ತೊಬ್ಬರಿಗೆ ಫ್ರಿ ಕೊಡತ್ತಾರೆ. ಭ್ರಷ್ಟಾಚಾರ, ದುರಾಡಳಿತ ಕಾರಣದಿಂದ ಕರ್ನಾಟಕ ಆದಾಯ ಇಲ್ಲದ ರಾಜ್ಯವಾಗುತ್ತಿದೆ ಎಂದರು.

ಜನಪ್ರತಿನಿಧಿಗಳನ್ನು ಸುಪಾರಿ ಕೊಟ್ಟು ಮುಗಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ‌‌ ಮುಂದಾಗಿದೆ. ಕೊಲೆ, ಸುಲಿಗೆ , ದರೋಡೆ ಹೆಚ್ಚಾಗಿದೆ. ರಾಜು ಕಪನೂರ ಯಾಕೆ ಬಂಧನವಾಗಿಲ್ಲ. ಇತನ ಮೇಲೆ ಯಾರ ಕೃಪೆ ಆರ್ಶಿವಾದಯಿದೆ. ನಮ್ಮ ಶಾಸಕರು, ಆಂದೋಲನ ಶ್ರೀಗಳ‌ ಮುಗಿಸಲು ಸುಪಾರಿ ಕೊಡತ್ತಾರೆ..? ಎಷ್ಟು ಅಹಂಕಾರದ ಮಾತು ಪ್ರಿಯಾಂಕ ಖರ್ಗೆ ಆಡತ್ತಾರೆ ಈ ಅಹಂಕಾರ ಒಳ್ಳೆಯದಲ್ಲಾ. ಪ್ರಿಯಾಂಕ ಖರ್ಗೆ ಅವರ ತಂದೆಯನ್ನು ನೋಡಿ ಕಲಿಯಲಿ. ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ರಾಜಕೀಯ ಜೀವನದಲ್ಲಿ ಯಾವತ್ತೂ ಅಹಂಕಾರದ ಮಾತನಾಡಿಲ್ಲ. ಪ್ರಿಯಾಂಕ ಖರ್ಗೆ ಅವರ ಈ ಅಹಂಕಾರ ಒಳ್ಳೆಯದು ಅಲ್ಲಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ಧಾರವಾಡ ಜನರ ಆಸೆಯಾಗಿತ್ತು. ಜನರ ಆಸೆಗೆ ತಕ್ಕಂತೆ ವಿಭಜನೆಯಾಗಿದೆ. ನಮ್ಮ ಸರ್ಕಾರ ಇದ್ದಾಗಲೂ ಇದಕ್ಕೆ ಮ್ಯೂಮೆಂಟ್ ಮಾಡಿದ್ದೆವು. ನಮ್ಮ ಸರ್ಕಾರದ ಬೆಂಬಲಯಿದೆ. ಹೊಸ ಪಾಲಿಕೆ ‌ರಚನೆಯಿಂದ‌ ಧಾರವಾಡ ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.

More News

You cannot copy content of this page